ಬಡವರ ಬಗ್ಗೆ ಪ್ರೀತಿ ಇರುವವನೇ ಮಹಾನ್ ವ್ಯಕ್ತಿ: ರಾಜಶೇಖರ್
ಗುಲ್ಬರ್ಗ: ಬಡಜನರ ಬಗ್ಗೆ ಅಪಾರವಾದ ಪ್ರೀತಿ, ಕಳಕಳಿ ಇದ್ದರೆ ಮಾತ್ರ ಮಹಾನ್ ವ್ಯಕ್ತಿಯಾಗಲು ಸಾಧ್ಯ ಎಂದು ಎಐಡಿಎಸ್ಓ ರಾಜ್ಯಾಧ್ಯಕ್ಷ ವಿ.ಎನ್. ರಾಜಶೇಖರರವರು ಹೇಳಿದರು.
ಅವರು ಎಐಡಿಎಸ್ಓ ಗುಲ್ಬರ್ಗ ಜಿಲ್ಲಾ ಸಮಿತಿಯು ನಗರದ ಕನ್ನಡಭವನದಲ್ಲಿ ಅಗ್ನಿ ಯುಗದ ಹರಿಕಾರ ಖುದಿರಾಮ್ ಬೋಸ್ರವರ 105ನೇ ಹುತಾತ್ಮ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕ್ರಾಂತಿಕಾರಿ ವಿಚಾರ: ಮುಖ್ಯ ಅತಿಥಿಗಳಾಗಿ ಆಗಮಿಸಿದ ಗುವಿವಿ ಎಲ್ಎಲ್ಎಂ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ದೇವಿದಾಸ್ ಮಾಲೆರವರು ಮಾತನಾಡುತ್ತಾ, ಸಮಾಜ ಬದಲಾವಣೆಯಲ್ಲಿ ವಿದ್ಯಾರ್ಥಿಗಳು ಚಳವಳಿ ಬಲಿಷ್ಠಗೊಳಿಸುವಲ್ಲಿ ಕ್ರಾಂತಿಕಾರಿ ವಿಚಾರ ಅವಶ್ಯ ಎಂದರು.
ಎಐಡಿಎಸ್ಓ ಗುಲ್ಬರ್ಗ ಜಿಲ್ಲಾ ಕಾರ್ಯದರ್ಶಿ ಎಸ್.ಎಂ.ಶರ್ಮಾ, ಜಿಲ್ಲೆಯಲ್ಲಿ ಹಲವಾರು ಯಶಸ್ವಿ ಹೋರಾಟಗಳು ನಡೆಸುತಾ ಬಂದಿದೆ. ಅದೇ ರೀತಿಯಾಗಿ ವಿದ್ಯಾರ್ಥಿಗಳಲ್ಲಿ ಉನ್ನತವಾದ ಸಾಂಸ್ಕೃತಿಕ-ವೈಚಾರಿಕತೆಗಳನ್ನು ಬೆಳೆಸಲು ಮಹಾನ್ ವ್ಯಕ್ತಿಗಳ ಕುರಿತು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದರು.
ಎಐಡಿಎಸ್ಓ ಜಿಲ್ಲಾಧ್ಯಕ್ಷ ಜಗನ್ನಾಥ ಎಸ್.ಎಚ್ ಅಧ್ಯಕ್ಷತೆ ವಹಿಸಿದ್ದರು. ನಗರ ಅಧ್ಯಕ್ಷ ಮಲ್ಲಿನಾಥ ಸಿಂಘೆ, ಕಾರ್ಯದರ್ಶಿ ಹಣಮಂತ, ಸದಸ್ಯರಾದ ಅಭಯ ದಿವಾಕರ, ವಿಠ್ಠಲ ರಾಠೋಡ, ವೀರೇಶ, ಶರಣು ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

