ರಾಯಚೂರು

ಬಾಬಾಕಟ್ಟೆ ಶಾಲೆ ಮಕ್ಕಳಿಗೆ ಬಯಲಲ್ಲೇ ಬಿಸಿಯೂಟ

Published On :

ಕ.ಪ್ರ.ವಾರ್ತೆ, ಮುದಗಲ್, ಅ.22
ಇಲ್ಲಿಗೆ ಸಮೀಪದ ಬಾಬಾಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗಾಗಿ ಬಿಸಿಯೂಟ ತಯಾರಿಸಲು ಸಿಲಿಂಡರ್ ಗ್ಯಾಸ್ ಸೌಲಭ್ಯ ಇಲ್ಲದ ಕಾರಣ ಶಾಲೆಯ ಬಯಲಿನಲ್ಲೇ ಗಾಳಿ, ಮಳೆ ಎನ್ನದೆ ಕಟ್ಟಿಗೆಯಿಂದ ಬಿಸಿಯೂಟ ಮಾಡುವ ಸ್ಥಿತಿ ಇದೆ.
1 ರಿಂದ 7ನೇ ತರಗತಿವರೆಗೆ 102 ವಿದ್ಯಾರ್ಥಿಗಳಿದ್ದಾರೆ. ವಿದ್ಯಾರ್ಥಿಗಳಿಗೆ ಬಿಸಿಯೂಟ ತಯಾರಿಸಲು ಸರ್ಕಾರ ಅಕ್ಷರ ದಾಸೋಹ ಯೋಜನೆಯಡಿ ಪ್ರತಿ ಶಾಲೆಗೆ ಸಿಲಿಂಡರ್ ಗ್ಯಾಸ್ ನೀಡಲಾಗುತ್ತದೆ. ಆದರೆ, ಈ ಶಾಲೆಗೆ ಕಳೆದ 6 ತಿಂಗಳಿಂದ ಸಿಲಿಂಡರ್ ಗ್ಯಾಸ್ ಮಂಜೂರಾಗಿರೂ ಅಧಿಕಾರಿಗಳು ಮಾತ್ರ ಸಿಲಿಂಡರ್ ಸೌಲಭ್ಯ ನೀಡಿಲ್ಲ. ಇದರಿಂದ ಬಿಸಿಯೂಟ ಆಡುಗೆಯವರು ಕಟ್ಟಗೆ ಒಲೆಯ ಮೇಲೆಯೇ ಅನ್ನ ಬೇಯಿಸಬೇಕಾಗಿದೆ.
ಬಿಸಿಯೂಟ ಕೋಣೆ ಇದೆ. ಆದರೆ, ಗ್ಯಾಸ್ ಸೌಲಭ್ಯವಿಲ್ಲದ ಕಾರಣ ಶಾಲೆಯ ಆವರಣದ ಬಯಲಿನಲ್ಲಿ ಕಲ್ಲುಗಳನ್ನು ಇಟ್ಟು ಕಟ್ಟಿಗೆಯಿಂದ ಬಿಸಿಯೂಟ ಬೇಯಿಸಲು ಹರಸಾಹಸ ಮಾಡಬೇಕಾದ ಸ್ಥಿತಿ ಇದೆ. ಅಕ್ಷರ ದಾಸೋಹ ಅಧಿಕಾರಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಗ್ಯಾಸ್ ವ್ಯವಸ್ಥೆ ನೀಡಿಲ್ಲ ಎನ್ನುತ್ತಾರೆ ಶಾಲೆ ಮುಖ್ಯಸ್ಥರು.
ಸರ್ಕಾರ ಶೈಕ್ಷಣಿಕ ಪ್ರಗತಿಗೆ ಮತ್ತು ಮಕ್ಕಳ ಹಾಜರಾತಿ ಸಂಖ್ಯೆ ಹೆಚ್ಚಿಸಲು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಆದರೆ, ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಯೋಜನೆಯ ಸಹಕಾರ ನೀಡಲು ನಿರ್ಲಕ್ಷ್ಯ ತಾಳುತ್ತಾರೆ ಎನ್ನುವುದಕ್ಕೆ ಈ ಶಾಲೆಯ ಬಿಸಿಯೂಟ ಯೋಜನೆ ಅವ್ಯವಸ್ಥೆಯೇ ಸಾಕ್ಷಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.