ರಾಯಚೂರು

ಸಿಂಧನೂರು: ರಸ್ತೆ ವಿಭಜಕಕ್ಕೆ ಲಾರಿ ಡಿಕ್ಕಿ

Published On :

ಸಿಂಧನೂರು: ಸಿಂಧನೂರು ನಗರದ ಗಂಗಾವತಿ ರಸ್ತೆ ಬಳಿ ಇರುವ ವಿಕಾಸ ಬ್ಯಾಂಕ್ ಎದುರಗಡೆ ಶುಕ್ರವಾರ ಮಧ್ಯರಾತ್ರಿ ರಸ್ತೆಯನ್ನು ವಿಭಜಿಸುವ ವಿಭಜಕಕ್ಕೆ ಢಿಕ್ಕಿ ಹೊಡೆದ ಪರಿಣಾಮವಾಗಿ ಲಾರಿ ಮುಂಭಾಗ ಜಖಂಗೊಂಡಿದೆ.
ಈ ವಿಭಜಕಕ್ಕೆ ಈ ಹಿಂದೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ಸೊಂದು, ಲಾರಿ ಈಗಾಗಲೇ ಢಿಕ್ಕಿ ಹೊಡೆದಿವೆ. ಬಸ್ ಢಿಕ್ಕಿ ಹೊಡೆದ ಸಂದರ್ಭದಲ್ಲಿ ಅನೇಕ ಪ್ರಯಾಣಿಕರಿಗೆ ಗಾಯಗಳಾಗಿದ್ದವು. ಆಗಲೂ ಎಚ್ಚೆತ್ತುಕೊಳ್ಳದ ಲೋಕೋಪಯೋಗಿ ಇಲಾಖೆ ಶುಕ್ರವಾರ ರಾತ್ರಿ ಮತ್ತೊಂದು ಅವಘಡಕ್ಕೆ ಸಾಕ್ಷಿಯಾಗಿದೆ.
ಇಲಾಖೆ ಕನಿಷ್ಠ ನಿಯಮಗಳನ್ನು ಪಾಲಿಸುತ್ತಿಲ್ಲ. ಪ್ರತಿ ವಿಭಜಕದ ಆರಂಭ ಹಾಗೂ ಅಂತ್ಯದಲ್ಲಿ 5 ಅಡಿ ಎತ್ತರದ ವಿಭಜಕದ ಮಾಹಿತಿ ನೀಡುವ ಸೂಚನಾ ಫಲಕವನ್ನು ಹಾಕಬೇಕು. ರಸ್ತೆ ನಿಯಮಗಳ ಚಿಹ್ನೆಗಳನ್ನು ಹಾಕಬೇಕು. ಈ ನಿಯಮಗಳನ್ನು ಪಾಲಿಸದೇ ಇರುವುದರಿಂದ ಇಂತಹ ಅನಾಹುತಗಳು ನಡೆಯುತ್ತಲೇ ಇವೆ. ಇಲಾಖೆಯ ನಿರ್ಲಕ್ಷ್ಯತನದ ವಿರುದ್ಧ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿಯ ಪ್ರಕರಣವನ್ನು ದಾಖಲಿಸುವುದಾಗಿ ಹಿರಿಯ ನ್ಯಾಯವಾದಿ ಜಿಎಸ್‌ಆರ್‌ಕೆ ರಡ್ಡಿ  ಕನ್ನಡಪ್ರಭಕ್ಕೆ ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಆಗುವ ಅನಾಹುತ ಕುರಿತು ಇಲಾಖೆಯ ಹಿರಿಯ ಅಧಿಕಾರಿಗಳ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಬೇಕೆಂದು ಮನುಜ ಮತ ಬಳಗದ ಕಾರ್ಯದರ್ಶಿ ಬಸವರಾಜ ಬಾದಲರ್, ಲಂಕೇಶ ಬಳಗದ ಇತ್ಮಾರಿ ಇಮಾಮ್ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.