ಅಯೋಧ್ಯೆ ತೀರ್ಪಿನ ವಿರುದ್ಧ ವರ್ತನೆ ಸಲ್ಲದು
ರಾಯಚೂರು: ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣದ ವಿಚಾರದಲ್ಲಿ ನ್ಯಾಯಾಲಯದ ತೀರ್ಪಿಗೆ ವಿರುದ್ಧ ಹೋಗುವುದು ಸರಿಯಲ್ಲ. ಆದರೆ ಅಯೋಧ್ಯೆ ಶ್ರೀರಾಮಚಂದ್ರನ ನಾಡು ಎಂಬುದನ್ನೂ ಅಲ್ಲಗಳೆಯಲಾಗದು. ಹೀಗಾಗಿ ಅಯೋಧ್ಯೆಯ ಸಮಸ್ಯೆ ಪರಿಹಾರಕ್ಕೆ ಸರ್ವವರ್ಗಗಳವರು ಒಂದೆಡೆ ಕುಳಿತು ಚರ್ಚಿಸುವುದು ಹೆಚ್ಚು ಸೂಕ್ತ ಎಂದು ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥರು ಅಭಿಪ್ರಾಯ ಪಟ್ಟರು.
ಅವರು ನಗರದಲ್ಲಿ ಸೋಮವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಯೋಧ್ಯೆಯಲ್ಲಿ ಸುಪ್ರೀಂ ಕೋರ್ಟಿನ ತೀರ್ಪಿನ ವಿರುದ್ಧ ಹೋರಾಟ ನಡೆಸುವುದು ಸರಿಯಲ್ಲ. ಹಾಗೆಯೇ ಅಯೋಧ್ಯೆಯ ವಿವಾದಾತ್ಮಕ ವಿಚಾರವನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವುದು ಸಲ್ಲದು ಎಂದು ಅವರು ತಿಳಿ ಹೇಳಿದರು.
ಪರಿಹಾರ: ಅಯೋಧ್ಯೆ ಸಮಸ್ಯೆಗೆ ಸೌಹಾರ್ದಯುತವಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಕ್ಕೆ ಮೊದಲಾದ್ಯತೆ ನೀಡಬೇಕಿದೆ. ಬಲಾತ್ಕಾರವಾಗಿ ಅಯೋಧ್ಯೆಯಲ್ಲಿ ಪರಿಕ್ರಮಯಾತ್ರೆ ನಡೆಸುವುದು ಸೂಕ್ತವಲ್ಲ. ಸಮಾಜದಲ್ಲಿ ಶಾಂತಿ ಕದಡುವ ಕಾರ್ಯ ಯಾರೊಬ್ಬರೂ ಮಾಡುವುದು ತರವಲ್ಲ ಎಂದರು.
ಅಯೋಧ್ಯೆಯಲ್ಲಿ ರಾಮದೇವರ ಪೂಜೆ ಮತ್ತಿತರೆ ಧಾರ್ಮಿಕ ಆಚರಣೆಗಳಿಗೆ ಅವಕಾಶವನ್ನು ನ್ಯಾಯಾಲಯ ನಿರಾಕರಿಸಿರುವಾಗ ನ್ಯಾಯಾಲಯದ ತೀರ್ಪಿಗೆ ವಿರುದ್ಧ ಹೋಗುವುದು ಸರಿಯಲ್ಲ. ವಿಶ್ವಹಿಂದೂ ಪರಿಷತ್ ರಾಜಕೀಯ ಲಾಭಕ್ಕೆ ಈ ವಿಚಾರವನ್ನು ಬಳಸಿಕೊಳ್ಳಲು ಹೊರಟಿದ್ದರೆ, ಅದು ತಪ್ಪಾದೀತು ಎಂದು ಎಚ್ಚರಿಸಿದರು.
ನಿಷೇಧ ಸರಿಯಲ್ಲ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುವ ಮಡಮಡೆಸ್ನಾನದ ಕುರಿತು ನಿಲುವು ಸ್ಪಷ್ಟಪಡಿಸಿದ ಅವರು, ಮಡೆಸ್ನಾನದಲ್ಲಿ ಅನೇಕರಿಗೆ ರೋಗಗುಣವಾಗುವ ನಂಬಿಕೆಯಿದೆ. ಭಕ್ತರ ನಂಬಿಕೆಗೆ ವಿರುದ್ಧವಾಗಿ ಯಾರೂ ಕ್ರಮ ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ ಮಡೆಸ್ನಾನ ಪದ್ಧತಿಯನ್ನು ನಿಷೇಧಿಸುವುದೂ ಸರಿಯಲ್ಲ. ಈ ವಿಚಾರದಲ್ಲಿ ನಿರ್ಧಾರವನ್ನು ಭಕ್ತರಿಗೇ ಬಿಡಬೇಕಿದೆ ಎಂದರು.
ರಾಜ್ಯ ಸರ್ಕಾರ ಗೋಹತ್ಯೆ ನಿಷೇಧ ಕಾಯಿದೆಯನ್ನು ರದ್ದುಗೊಳಿಸಿರುವ ಕ್ರಮಕ್ಕೆ ಪ್ರತಿಕ್ರಿಯಿಸಿದ ಅವರು, ಗೋವುಗಳನ್ನು ಹಿಂದೂಗಳ ಪೂಜಿಸುತ್ತಾರೆ. ಗೋವುಗಳೂ ಸೇರಿದಂತೆ ಭೂಮಿ ಮೇಲಿರುವ ಯಾವುದೇ ಪ್ರಾಣಿಯ ಹತ್ಯೆಯಾಗದಂತೆ ಕ್ರಮ ಕೈಗೊಳ್ಳುವುದು ಎಲ್ಲರ ಕರ್ತವ್ಯವಾಗಿದೆ. ಗೋವಿಗೆ ವಿಶೇಷ ಸ್ಥಾನವಿರುವುದರಿಂದ ಗೋಹತ್ಯೆ ನಿಷೇಧಕ್ಕೆ ಒತ್ತಾಯ ಸಹಜವಾಗಿಯೇ ಹೆಚ್ಚಿದೆ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

