ಆದರ್ಶ ವ್ಯಕ್ತಿತ್ವ ಅವಶ್ಯ: ಹಣಗಿ
ಸಿಂಧನೂರು: ಯುವಜನತೆ ದುಶ್ಚಟಗಳಿಂದ ದೂರವಿದ್ದು, ಆದರ್ಶ ವ್ಯಕ್ತಿಗಳಾಗಿ ಬೆಳೆಯಲು ಎಸ್ಬಿಐ ಬ್ಯಾಂಕಿನ ವ್ಯವಸ್ಥಾಪಕ ಬಸವರಾಜ ಹಣಗಿ ಕರೆ ನೀಡಿದರು.
ನಗರದ ವೆಂಕಟೇಶ್ವರ ಪ್ರೌಢಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ “«ÚÈÚß½ ಶಾಲೆ ನಮ್ಮ ಗೆಳೆಯರು 2013’ ಒಂದು ನೆನಪು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ದಿನಮಾನದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಇದ್ದು, ಇದರ ಬಗ್ಗೆ ಪ್ರತಿಯೊಬ್ಬರು ಹೆಚ್ಚಿನ ಒಲವು ತೋರಿಸಿ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ, ಜೀವನದಲ್ಲಿ ಜ್ಞಾನದ ಬುತ್ತಿ ತುಂಬಿಕೊಳ್ಳಬೇಕೆ ಹೊರತು ಯಾವುದೇ ಒಂದು ಹೀನಾಯ ಕೃತ್ಯದಲ್ಲಿ ತೊಡಗುವಂತ ಮನೋಭಾವ ರೂಢಿಸಿಕೊಳ್ಳಬಾರದು ಎಂದರು.
ನಿವೃತ್ತ ಶಿಕ್ಷಕ ಶಿವಣ್ಣ ಸಣ್ಣಪ್ಪನವರು ಸನ್ಮಾನ ಸ್ವೀಕರಿಸಿ ಮಾತನಾಡಿ, ಜ್ಞಾನ ಎಂಬುವುದೂ ಒಂದು ದೊಡ್ಡ ಶಕ್ತಿಯಾಗಿದ್ದು ಅದನ್ನು ಉತ್ತಮ ರೀತಿಯಲ್ಲಿ ಪಡೆದುಕೊಳ್ಳಬೇಕೆಂದರು.
ಇಂಗ್ಲಿಷ್ ಊಟದಲ್ಲಿ ಉಪ್ಪಿನಕಾಯಿ: ಪತ್ರಕರ್ತ ಅಶೋಕ ಬೆನ್ನೂರು ಮಾತನಾಡಿ, ತಿನ್ನುವ ಅನ್ನ ಕನ್ನಡವಾದರೇ, ಇಂಗ್ಲೀಷ್ ಊಟದಲ್ಲಿ ಉಪ್ಪಿನಕಾಯಿ ಇದ್ದಂತೆ. ಅದೇ ರೀತಿಯಾಗಿ ಕನ್ನಡದಲ್ಲಿ ಕಲಿತ ಎಷ್ಟೋ ವಿದ್ಯಾರ್ಥಿಗಳು ಇಂದು ಉನ್ನತ ಮಟ್ಟದಲ್ಲಿ ಮುಂದೆ ಸಾಗಿದ್ದಾರೆ ಎಂದರು.
ಕೀರ್ತಿ ಪತಾಕೆ ಹೆಚ್ಚಿಸಿ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯಗುರು ಗಂಗನಗೌಡ ಪಾಟೀಲ್ ಮಾತನಾಡಿ, ಹಳೇ ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮವನ್ನು ಮಾಡುವುದು ಸಂತೋಷದ ವಿಷಯ. ಈ ರೀತಿಯಾಗಿ ನೀವೂ ಇಂತಹ ಒಳ್ಳೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು. ಇಂದಿನ ವಿದ್ಯಾರ್ಥಿಗಳು ಉತ್ತಮ ಅಭ್ಯಾಸ ಮಾಡಿ ಶಾಲೆಯ ಕೀರ್ತಿ ಪತಾಕೆ ಹೆಚ್ಚಿಸಬೇಕೆಂದು ಹೇಳಿದರು.
ಪತ್ರಕರ್ತ ಶೇಖರ ಯರದಿಹಾಳ, ಶಿಕ್ಷಕರಾದ ವೆಂಕನಗೌಡ ವಟಗಲ್, ಲಕ್ಷ್ಮೀ, ಎಚ್.ಎಫ್. ಮಸ್ಕಿ, ಎಸ್. ಪಾತ್ರೋಟಿ, ವೀರೇಶ ಹೊಸಮನಿ ಮಾತನಾಡಿದರು.
ಹಳೇ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಇದೇ ಸಂದರ್ಭದಲ್ಲಿ ಹಳೆಯ ವಿದ್ಯಾರ್ಥಿಗಳಾದ ಸೀಮಾ .ಕೆ, ದೀಪ್ತಿ, ಶಿಲ್ಪಾ, ತಿಮ್ಮಣ್ಣ ದಿದ್ದಗಿ, ಮುನೀರಪಾಷಾ, ಪ್ರಕಾಶ ಸಿರಗುಂಪಿ, ಸಂತೋಷ, ನಿಂಗರಾಜು, ರವಿನಾಯಕ, ಶರಣಬಸವ ಮೇಟಿ, ಬಾಲನಗೌಡ, ವಿನೋದಕುಮಾರ, ಸಯ್ಯದ್ ವಲಿ, ಕೆ.ಸಿದ್ದಪ್ಪ, ನಿರುಪಾದೆಪ್ಪ, ವೀರೇಶ ಬಾವಿಮನಿ, ಶಾಕೀರ, ರಾಜಶೇಖರ ಬಂಗಾರಶೆಟ್ಟರ್, ನಿರುಪಾದಿ, ಟಿ.ರವಿ, ಹನುಮನಗೌಡ, ಬಸವರಾಜ, ಉಮೇಶ, ಜಿಲಾಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

