ಡಿಸಿ ಅಮಾನತಿಗೆ ಆಗ್ರಹಿಸಿ ಪ್ರತಿಕೃತಿ ದಹನ
ಕನ್ನಡಪ್ರಭ ವಾರ್ತೆ ಲಿಂಗಸ್ಗೂರು ಡಿ.3
ಭ್ರಷ್ಟಾಚಾರದಲ್ಲಿ ತೊಡಗಿದ ರಾಯಚೂರು ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜ್ರನ್ನು ತಕ್ಷಣ ಅಮಾನತು ಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರೈತಸಂಘದ ಮುಖಂಡರು ಹಾಗೂ ಕಾರ್ಯಕರ್ತರು ಜಿಲ್ಲಾಧಿಕಾರಿ ಪ್ರತಿಕೃತಿ ದಹನ ಮಾಡಿದರು.
ಪಟ್ಟಣದ ಲಕ್ಷ್ಮೀ ದೇವಸ್ಥಾನದಿಂದ ಬಸ್ನಿಲ್ದಾಣ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ಆಗಮಿಸಿ ತಹಸೀಲ್ದಾರ್ ಜಿ.ಎಸ್. ಮಹಾಜನ್ಗೆ ಮನವಿ ಸಲ್ಲಿಸಿದರು. ನಂತರ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜ್ ಪ್ರತಿಕೃತಿ ದಹನ ಮಾಡಿದರು.
ಜಮೀನಿಂದ ಹೊರಕ್ಕೆ: ಜಿಲ್ಲಾಧಿಕಾರಿ ಕಚೇರಿ ಮುಂದೆ ಡಿ.2 ರಂದು ಕರ್ನಾಟಕ ರೈತಸಂಘದಿಂದ ರೈತರೊಡನೆ ಅನೇಕ ಸಮಸ್ಯೆಗಳ ಪರಿಹಾರ ಹಾಗೂ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲು ತೆರಳಿದರೆ ಜಿಲ್ಲಾಧಿಕಾರಿ ರೈತರ ಆಶೋತ್ತರಗಳಿಗೆ ಸ್ಪಂದಿಸದೆ ಪೊಲೀಸರ ಮುಖಾಂತರ ಲಾಠಿಚಾರ್ಜ್ ಮತ್ತು ಗೂಂಡಾ ಪ್ರವೃತ್ತಿಯಿಂದ ರಾಕ್ಷಸನಂತೆ ವರ್ತಿಸಿದ್ದಾರೆ. 1992 ರಿಂದ ನಿರಂತರವಾಗಿ ಕರ್ನಾಟಕ ರೈತಸಂಘ ಹೋರಾಡುತ್ತಾ ಬಂದಿದ್ದು, ಜಿಲ್ಲೆಯ ಪಿ.ಜಿ. ಸೆಂಟರ್ನಲ್ಲಿ 40 ಕುಟುಂಬಗಳು, ಹರಿಜನ, ಗಿರಿಜನರನ್ನು ಒಕ್ಕಲೆಬ್ಬಿಸಿ ಬಲವಂತದಿಂದ ಜಮೀನಿಂದ ಹೊರ ಹಾಕಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಾ ನೀಡದೆ ನೋಟೀಸ್ ಜಾರಿ: ಮಾನವಿ ಹಾಗೂ ಲಿಂಗಸ್ಗೂರು ತಾಲೂಕಿನಲ್ಲಿ ಅಕ್ರಮ ಗಣಿಗಾರಿಕೆ ನಡೆದಿದ್ದು, ಸಂಬಂಧಿಸಿದ ದಾಖಲಾತಿ ನೀಡಿದರೂ ಜಿಲ್ಲಾಧಿಕಾರಿ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸದೆ ಗಣಿ ಮಾಲೀಕರ ಹಫ್ತಾ ವಸೂಲಿನಿಂದ ಜಾಣ ಮೌನವಹಿಸಿದ್ದಾರೆ. ಸಣ್ಣ ಮತ್ತು ಅತಿಸಣ್ಣ ರೈತರು 2 ರಿಂದ 4 ಎಕರೆವರೆಗೆ ಸಾಗುವಳಿ ಮಾಡುವ ಸಾವಿರಾರು ರೈತರಿಗೆ ಪಟ್ಟಾ ನೀಡದೆ ನೋಟೀಸ್ ಜಾರಿ ಮಾಡಿ ರೈತರನ್ನು ಹೊರ ಹಾಕಲು ಮುಂದಾಗಿದ್ದಾರೆಂದು ದೂರಿದರು.
ಹಟ್ಟಿ ಚಿನ್ನದಗಣಿಸೈನೈಡ್ ಬೂದಿ 3525 ಕೋಟಿ ಬೆಲೆ ಬಾಳುವ ಬೂದಿ ಕೇವಲ 53 ಕೋಟಿಗೆ ಮಾರಾಟ ಮಾಡಿರುವುದು ವಿಷಾದನೀಯ. ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಜಿಲ್ಲೆಯ ಸಮಸ್ಯೆಗಳನ್ನು ಬಿಟ್ಟು ಗಣಿ ಮಾಲೀಕರಿಂದ ಮತ್ತು ಭೂ ಮಾಲೀಕರ ಜೊತೆ ಸೇರಿ ಲೂಟಿ ಮಾಡಲು ಹೊರಟಿದ್ದಾರೆ. ಆದರೆ ಜಿಲ್ಲೆಯ ಸಂಘಟನೆಗಳು ಗಣಿ ಮಾಲೀಕರಿಂದ ಹಫ್ತಾ ವಸೂಲಿ ಮಾಡುತ್ತಿವೆ ಎಂದು ಸುಳ್ಳು ಹೇಳಿಕೆ ನೀಡಿದ್ದಾರೆ. ಏಕಾಏಕಿ ಲಾಠಿ ಪ್ರಹಾರ ಕುರಿತು ತನಿಖೆ ನಡೆಸಿ ಜಿಲ್ಲಾಧಿಕಾರಿ ಮೇಲೆ ಸೂಕ್ತಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿಗೆ ಮನವಿಯಲ್ಲಿ ಒತ್ತಾಯಿಸಿದ್ದಾರೆ. ಸಂಘದ ಕಾಯದರ್ಶಿ ರೇವಣಸಿದ್ದಪ್ಪ, ಅಧ್ಯಕ್ಷ ಬಸವರಾಜ ನಗನೂರ, ಜಿಲ್ಲಾ ಉಪಾಧ್ಯಕ್ಷ ಜಿ. ಶೇಖರಯ್ಯ, ಮುಖಂಡರಾದ ಬಾಬೂ ಭೂಪೂರ, ತಿಪ್ಪರಾಜ, ಹನುಮಂತ ಪೂಜಾರಿ, ಯಲ್ಲಪ್ಪ ರಾಯದುರ್ಗ, ಶಿವಮ್ಮ, ಈರಮ್ಮ, ಯಮನಪ್ಪ ಸಾಲಿ, ಹನುಮಂತ ಜಲ್ಲಿ ಸೇರಿದಂತೆ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

