ವರದಿ ಅಂಗೀಕಾರಕ್ಕೆ ಆಗ್ರಹಿಸಿ ಬೈಕ್ ರ್ಯಾಲಿ
ಲಿಂಗಸ್ಗೂರು: ನ್ಯಾಯಮೂರ್ತಿ ಏ.ಜೆ. ಸದಾಶಿವ ವರದಿ ಅಂಗೀಕಾರಕ್ಕೆ ಆಗ್ರಹಿಸಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ಹಾಗೂ ಮಾದಿಗ ದಂಡೋರ ನೇತೃತ್ವದಲ್ಲಿ ರಾಯಚೂರಿನಿಂದ ಬೆಳಗಾವಿಗೆ ಹಮ್ಮಿಕೊಂಡ ಮಹಿಷಿ ರಥ ಹಾಗೂ ಬೈಕ್ರ್ಯಾಲಿ 3ರಂದು ಲಿಂಗಸ್ಗೂರು ಪಟ್ಟಣಕ್ಕೆ ಆಗಮಿಸಿದಾಗ ದಲಿತ ಮುಖಂಡರು ಸ್ವಾಗತಿಸಿ ಬೀದಿಗಳಲ್ಲಿ ರ್ಯಾಲಿ ನಡೆಸಿ ನಂತರ ಬೀಳ್ಕೊಟ್ಟರು.
ರಾಯಚೂರಿನಿಂದ ಡಿ.2 ರಂದು ಮಹಿಷಿ ರಥ ಹಾಗೂ ಬೈಕ್ರ್ಯಾಲಿ ಲಿಂಗಸ್ಗೂರು ಪುರಸಭೆ ವ್ಯಾಪ್ತಿಯ ಕರಡಕಲ್ ಗ್ರಾಮದಲ್ಲಿ ವಾಸಮಾಡಿ ನಂತರ ಡಿ.3 ರಂದು ಲಿಂಗಸ್ಗೂರು ಪಟ್ಟಣಕ್ಕೆ ಆಗಮಿಸಿ ಪ್ರಮುಖ ಬೀದಿಗಳಲ್ಲಿ ಬೈಕ್ರ್ಯಾಲಿ ನಡೆಸುವ ಮೂಲಕ ಬೆಳಗಾವಿಯತ್ತ ತೆರಳಿದರು. ದಲಿತ ಸಮುದಾಯಕ್ಕೆ ಒಳ ಮೀಸಲು ಒದಗಿಸುವ ನ್ಯಾ. ಸದಾಶಿವ ಆಯೋಗ ವರದಿ ಜಾರಿಗೊಳಿಸುವಲ್ಲಿ ಸರ್ಕಾರಗಳು ನಿರ್ಲಕ್ಷ್ಯ ತೋರಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ಅಂಗೀಕಾರಗೊಳಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕೆಂದು ಒತ್ತಾಯಿಸಿದರು.
ದಲಿತ ಮುಖಂಡರಾದ ಜೆ.ಬಿ. ರಾಜು, ಅಂಬಣ್ಣ ಅರೋಲಿ, ಹೇಮರಾಜ ಅಸ್ಕಿಹಾಳ, ಪಿ.ಅಮರೇಶ, ಅಬ್ರಹಂ ಹೊನ್ನಟಗಿ, ಹನುಮಂತಪ್ಪ ತವಗ, ದುರುಗಪ್ಪ ಹಟ್ಟಿ, ತಿಪ್ಪಣ್ಣ ಮೇಗಳಮನಿ, ಬಸವರಾಜ ಮ್ಯಾಗೇರಿ, ಹಾಜಪ್ಪ ಕರಡಕಲ್, ಹುಲಗಪ್ಪ ಕೆಸರಟ್ಟಿ ಸಾಬಣ್ಣ ಹೊಸಮನಿ, ಮುತ್ತಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

