ಚನ್ನವೀರಗೌಡ ಲಿಂಗಸ್ಗೂರು ಎಪಿಎಂಸಿ ಅಧ್ಯಕ್ಷ
ಕನ್ನಡಪ್ರಭ ವಾರ್ತೆ, ಲಿಂಗಸ್ಗೂರು, ಡಿ.6
ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಚನ್ನವೀರನಗೌಡ ಹಾಗೂ ಉಪಾಧ್ಯಕ್ಷರಾಗಿ ಸಂಗಪ್ಪ ದೇಸಾಯಿ ಅವಿರೋಧವಾಗಿ ಆಯ್ಕೆಯಾದರು.
ಎಪಿಎಂಸಿ ಕಾರ್ಯಾಲಯದ ಸಭಾಂಗಣದಲ್ಲಿ ಶುಕ್ರವಾರ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚನ್ನವೀರನಗೌಡ ವೀರನಗೌಡ ಆದಾಪೂರ ನಾಮಪತ್ರ ಸಲ್ಲಿಸಿದರು. ಇವರಿಗೆ ಲಕ್ಷ್ಮಣ ಚಂದ್ರಪ್ಪ ಸೂಚಕರು ಹಾಗೂ ರುದ್ರಪ್ಪ ನೀಲಕಂಠಪ್ಪ ಅನುಮೋದಕರಾಗಿದ್ದರು.
ಅವಿರೋಧ ಆಯ್ಕೆ: ಅದೇ ರೀತಿ ಉಪಾಧ್ಯಕ್ಷ ಸ್ಥಾನಕ್ಕೆ ಸಂಗಪ್ಪ ಭೀಮಪ್ಪ ದೇಸಾಯಿ ಹಾಲಬಾವಿ ಇವರು ನಾಮಪತ್ರ ಸಲ್ಲಿಸಿದ್ದರು. ಇವರಿಗೆ ರಾಜಶೇಖರ ಹೊನ್ನಳ್ಳಿ ಸೂಚಕರು ಹಾಗೂ ರಡ್ಡೆಪ್ಪ ಸಿದ್ದಣ್ಣ ಅನುಮೋದಕರಾಗಿದ್ದರು. ಪ್ರತಿಸ್ಪರ್ಧಿಗಳು ನಾಮಪತ್ರ ಸಲ್ಲಿಸದ ಕಾರಣ ನೂತನ ಅಧ್ಯಕ್ಷರಾಗಿ ಚನ್ನವೀರನಗೌಡ ಹಾಗೂ ಉಪಾಧ್ಯಕ್ಷರಾಗಿ ಸಂಗಪ್ಪ ದೇಸಾಯಿ ಇವರು ಅವಿರೋಧವಾಗಿ ಆಯ್ಕೆಗೊಂಡಿರುವುದಾಗಿ ಚುನಾವಣಾಧಿಕಾರಿ, ತಹಸೀಲ್ದಾರ್ ಜಿ.ಎಸ್. ಮಹಾಜನ್ ಘೋಷಿಸಿದರು.
ಎಪಿಎಂಸಿ ಕಾರ್ಯದರ್ಶಿ ಬಿ.ರಂಗಪ್ಪ ಹಾಗೂ ಎಪಿಎಂಸಿ ಸದಸ್ಯರಾದ ಚನ್ನವೀರನಗೌಡ ವೀರನಗೌಡ, ಸಂಗಪ್ಪ ಭೀಮಪ್ಪ ದೇಸಾಯಿ, ರೆಡ್ಡೆಪ್ಪ ಸಿದ್ದಣ್ಣ, ರುದ್ರಪ್ಪ ನೀಲಕಂಠಪ್ಪ, ರಾಜಶೇಖರ ಹೊನ್ನಳ್ಳಿ, ಸಂಗಮ್ಮ ರಾಮನಗೌಡ, ದೇಶಪ್ಪ ದುರುಗಪ್ಪ, ಸೋಮಶೇಖರ ಐದನಾಳ, ಅಮಜದ್ ಹಟ್ಟಿ, ಬಸನಗೌಡ ಮೇಟಿ, ಲಕ್ಷ್ಮಣ ಚಂದ್ರಪ್ಪ, ಸುರೇಶ ಜುಮ್ಮರಲಾಲ ಶೇಠ್, ಕನಕಪ್ಪ ಜಲದೊಡ್ಡಿ, ಪಂಪಾಪತಿ ಗುಡಿಹಾಳ ಇದ್ದರು.
ಸಭೆ ಕರೆಯಲು ಮನವಿ ಮಾಡಿದ್ರು: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ 13 ಜನ ನಿರ್ದೇಶಕರು ಹಾಗೂ 3 ಜನ ನಾಮನಿರ್ದೇಶನ ಸದಸ್ಯರು ಸೇರಿದಂತೆ ಒಟ್ಟು 16 ಜನ ಸದಸ್ಯರನ್ನು ಹೊಂದಿದ್ದು, ಸಮಿತಿಗೆ 2ನೇ ಅವಧಿಗೆ ನಡೆದ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯಲ್ಲಿ ಮಂಜುನಾಥ ಪಾಟೀಲ ಅಧ್ಯಕ್ಷರಾಗಿ ಹಾಗೂ ಎಸ್.ಆರ್. ರಸೂಲ್ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡಿದ್ದರು.
ಅ.7ರಂದು ಕೆಲ ಸದಸ್ಯರು ಅಧ್ಯಕ್ಷ- ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿಗೆ ನಿರ್ಧರಿಸಿ ಸಭೆ ಕರೆಯುವಂತೆ ಮನವಿ ಮಾಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

