ರಾಯಚೂರು

ಡಿಸಿ ವಿರುದ್ಧ ಸಿಡಿದೆದ್ದ ಸಂಘಟನೆಗಳು

Published On :

ಕ.ಪ್ರ.ವಾರ್ತೆ, ರಾಯಚೂರು, ಡಿ. 11
ವಸೂಲಿ ಸಂಘಟನೆಗಳೆಂದು ವಿವಿಧ ಸಂಘಟನೆಗಳ ಬಗ್ಗೆ ಅವಹೇಳನಕಾರಿ ಮಾತನಾಡಿರುವ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಹಾಗೂ ಸಂಘಟನೆಗಳ ವಿರುದ್ಧ ಆರೋಪಿಸಿರುವ ನ್ಯಾಯಬೆಲೆ ಅಂಗಡಿಗಳ ಒಕ್ಕೂಟಗಳು ವಾರದೊಳಗೆ ಕ್ಷಮೆಯಾಚಿಸಬೇಕು. ತಪ್ಪಿದಲ್ಲಿ ಮಾನವಿ ಬಂದ್‌ಗೆ ಕರೆ ನೀಡಲಾಗುತ್ತದೆ ಎಂದು ಪ್ರಗತಿಪರ ಸಂಘಟನೆಗಳ ಮುಖಂಡರಾದ ಕೆ. ನಾಗಲಿಂಗಸ್ವಾಮಿ, ಪ್ರಭುರಾಜ ಕೊಡ್ಲಿ, ಡಿ. ಬಸನಗೌಡ ಎಚ್ಚರಿಸಿದರು.
ಮಾನವಿಯಲ್ಲಿ ಬುಧವಾರ ಮಾನವಿ ತಾಲೂಕಿನ ವಿವಿಧ ಸಂಘಟನೆಗಳ ಮುಖಂಡರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜನಪ್ರತಿನಿಧಿಗಳು, ಅಧಿಕಾರಿಗಳು ಅಕ್ರಮ ಎಸಗದಂತೆ ತಡೆಯುವ ಕಾರ್ಯವನ್ನು ವಿವಿಧ ಸಂಘಟನೆಗಳು ಮಾಡುತ್ತಿವೆ. ಆದರೆ ಸಂಘಟನೆಗಳ ವಿರುದ್ಧ ವಸೂಲಿ ಸಂಘಟನೆಗಳೆಂಬ ಅವಹೇಳನಕಾರಿ ಹೇಳಿಕೆ ನೀಡಿದ್ದು, ಇನ್ನು ಅಧಿಕಾರಿಗಳನ್ನು ಅಕ್ರಮದಿಂದ ದೂರವಿರಿಸುವುದು ಹೇಗೆ ಎಂದು ಪ್ರಶ್ನಿಸಿದರು.
ಡಿಸಿ ಕಾರ್ಯವೈಖರಿಗೆ ಟೀಕೆ: ಹಿಂದೊಮ್ಮೆ ಮಾನವಿ ಪಟ್ಟಣದ ಹೊರವಲಯದಲ್ಲಿ ಸರ್ಕಾರಿ ಜಮೀನಿನಲ್ಲಿ ಕಲ್ಲಿನ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದ ಬಗ್ಗೆ ಸಂಘಟನೆಗಳು ಹೋರಾಟ ನಡೆಸಿದಾಗ ಜಿಲ್ಲಾಧಿಕಾರಿ ಸ್ಥಳ ಪರಿಶೀಲಿಸಿ, ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ಕ್ರಮದ ಭರವಸೆ ನೀಡಿದ್ದರು. ಆದರೆ ಇದುವರೆಗೂ ಕಲ್ಲು ಗಣಿಗಾರಿಕೆ ಮಾಲೀಕರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಜಿಲ್ಲಾಧಿಕಾರಿ ಕಾರ್ಯವೈಖರಿ ಟೀಕಿಸಿದರು.
ಕ್ರಮ: ಸಂಘಟನೆಗಳು ನೀಡುವ ದೂರುಗಳನ್ನು ಆಧರಿಸಿ ತಕ್ಷಣ ಅಧಿಕಾರಿಗಳು ಕ್ರಮಕ್ಕೆ ಮುಂದಾದರೆ ಅಕ್ರಮಗಳನ್ನು ತಡೆಗಟ್ಟಲು ಸಾಧ್ಯ. ಸಂಘಟನೆಗಳು ನೀಡುವ ದೂರುಗಳನ್ನು ನಿರ್ಲಕ್ಷಿಸುವ ಆಡಳಿತವು ಸಂಘಟನೆಗಳ ವಿರುದ್ಧವೇ ಸುಳ್ಳು ಆರೋಪ ಹೊರಿಸುತ್ತಿರುವುದು ಸಮಂಜಸವಲ್ಲ ಎಂದು  ಹೇಳಿದರು.
ಕ್ಷಮೆಯಾಚಿಸಲಿ: ಸಂಘಟನೆಗಳ ಮೇಲೆ ಸುಳ್ಳು ಆರೋಪ ಮಾಡಿದ ಜಿಲ್ಲಾಧಿಕಾರಿ ಮತ್ತು ಸ್ಟೋನ್ ಕ್ರಷರ್ ಅಸೋಸಿಯೇಶನ್, ನ್ಯಾಯಬೆಲೆ ಅಂಗಡಿಗಳ ಮಾಲೀಕರ ಒಕ್ಕೂಟದವರು ವಾರದೊಳಗೆ ಕ್ಷಮೆಯಾಚಿಸದಿದ್ದರೆ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಮಾನ್ವಿ ಬಂದ್ ಕರೆ ನೀಡಲಾಗುವುದು ಎಂದು ಎಚ್ಚರಿಸಿದರು.
ಮುಖಂಡರಾದ ನರಸಪ್ಪ ಜೂಕೂರು, ಲಕ್ಷ್ಮಣ ಜಾನೇಕಲ್, ಶಂಕರ್ ನಂದಿಹಾಳ್, ವಿ. ಮುದುಕಪ್ಪ ನಾಯಕ, ಅಶೋಕ್ ನಿಲೋಗಲ್, ಮಹ್ಮದ್ ಮುಜೀಬ್, ಆಂಜಿನೆಯ್ಯ ಜೆಲ್ಲಿ, ಅಶೋಕ್ ತಡಕಲ್, ಮೌನೇಶ ತೋರಣದಿನ್ನಿ, ಶಿವರಾಜ್ ಡೊಣಮರಡಿ, ಗೋಪಾಲ್ ದಾಸ್, ಅಮರೇಶ ಕಾವಲಿ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.