ಪ್ರಶಸ್ತಿಗೆ ಆಯ್ಕೆ
ರಾಯಚೂರು: ನವದೆಹಲಿಯ ಭಾರತೀಯ ದಲಿತ್ ಸಾಹಿತ್ಯ ಅಕಾಡೆಮಿ ಕೊಡಮಾಡುವ ಮಹಾತ್ಮಾ ಜ್ಯೋತಿಬಾ ಫುಲೆ ರಾಷ್ಟ್ರೀಯ ಫೆಲೋಶಿಪ್ ಫುಲೆ ಪ್ರಶಸ್ತಿಗೆ ನಗರದ ಸೈಯದ್ ಇಸ್ಮಾಯಿಲ್ ಆಯ್ಕೆಯಾಗಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅಕಾಡೆಮಿಯು ನವದೆಹಲಿಯಲ್ಲಿ ಡಿ. 12ರಂದು ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ತಿಳಿಸಿದೆ.
ರ್ಯಾಲಿಗೆ ಬೆಂಬಲ
ರಾಯಚೂರು: ದೇಶದ ಎಲ್ಲಾ ಟ್ರೇಡ್ ಯೂನಿಯನ್‌ಗಳು ಒಗ್ಗೂಡಿ ಡಿ.12 ರಂದು ಹಮ್ಮಿಕೊಂಡಿರುವ ದೆಹಲಿ ಪಾರ್ಲಿಮೆಂಟ್ ಮಹಾ ರ್ಯಾಲಿಗೆ ಸಿಪಿಐ(ಎಂಎಲ್) ರೆಡ್ ಫ್ಲ್ಯಾಗ್‌ನ ರಾಜ್ಯ ಸಮಿತಿ ಬೆಂಬಲ ವ್ಯಕ್ತಪಡಿಸಿದೆ. ಈ ಕುರಿತು ಪ್ರಕಟಣೆ ನೀಡಿರುವ ಪಕ್ಷದ ರಾಜ್ಯ ಸಮಿತಿ ಸದಸ್ಯ ಬಿ. ಬಸವಲಿಂಗಪ್ಪ, ಕಾರ್ಮಿಕರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಸಲುದ್ದೇಶಿಸಿರುವ ಹೋರಾಟಕ್ಕೆ ಬೆಂಬಲಿಸುತ್ತಿದ್ದು, ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ದೆಹಲಿ ಚಲೋ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದ್ದಾರೆ.
ನೆಲ್ಸನ್ ಮಂಡೇಲಾಗೆ ಬಳಗ ಸಂತಾಪ
ಸಿಂಧನೂರು: ದಕ್ಷಿಣಾ ಆಫ್ರಿಕಾದ ವಿಮೋಚನಾ ಹೋರಾಟಗಾರ ನೆಲ್ಸನ್ ಮಂಡೇಲಾ ನಿಧನಕ್ಕೆ ಎಐಟಿಯುಸಿ ತಾಲೂಕು ಅಧ್ಯಕ್ಷ ಹಾಗೂ ಮನುಜಮತ ಬಳಗದ ಗೌರವಾಧ್ಯಕ್ಷ ವೆಂಕನಗೌಡ ಗದ್ರಟಗಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು ಯೂರೋಪಿಯನ್ ರಾಷ್ಟ್ರಗಳ ಕಪಿಮಷ್ಠಿಯಿಂದ ದಕ್ಷಿಣ ಆಫ್ರಿಕಾ ಹೊರಬರಲು ಕಾರಣರಾದ ಹಾಗೂ ಕಪ್ಪು ಜನರಿಗೆ ಸ್ವಾತಂತ್ರ್ಯ ತಂದು ಕೊಟ್ಟ ಮಂಡೇಲಾ ತಮ್ಮ ಜೀವನವನ್ನು ಜನರ ಹಿತಕ್ಕಾಗಿ ಮುಡುಪಾಗಿಟ್ಟಿದ್ದರು ಎಂದರೆ ತಪ್ಪಾಗಲಿಕ್ಕಿಲ್ಲ.27 ವರ್ಷಗಳ ಕಾಲ ರಾಬಿನ್ ಐಸ್‌ಲ್ಯಾಂಡ್ ಹಾಗೂ ಪಾಲ್‌ಸೂಮರ್ ಜೈಲಿನಲ್ಲಿ ಬಿಳಿಯ ಜನರು ಕೊಡುವ ನೂರಾರು ಕಷ್ಟ ಕಾರ್ಪಣ್ಯಗಳನ್ನು ಸಹಿಸಿಕೊಂಡು ತಮ್ಮ ವೈಯಕ್ತಿಕ ಜೀವನವನ್ನೇ ಮುಡುಪಾಗಿಟ್ಟ ಅವರ ನೈಜ ಕಾಳಜಿ ನಿಜಕ್ಕೂ ಮೆಚ್ಚುವಂತದ್ದು. ಸಾಮಾನ್ಯ ಕುಟುಂಬದಿಂದ ಬೆಳೆದು ಅಸಾಮಾನ್ಯರಂತೆ ಇಡೀ ವಿಶ್ವವೇ ನಿಬ್ಬೆರಗಾಗುವಂತೆ ಮಾಡಿದ ಅವರ ಶ್ರಮ ಎಲ್ಲರಿಗೂ ಮಾದರಿ. ಜೈಲಿನಿಂದ ಹೊರ ಬಂದು ಕೇವಲ 5 ವರ್ಷ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವ ಮೂಲಕ ಇತರೆ ನಾಯಕರಿಗೆ ತಮ್ಮ ಅಧಿಕಾರವನ್ನು ಬಿಟ್ಟು ವಿಶ್ವಕ್ಕೆ ಮಾದರಿಯಾಗಿದ್ದಾರೆ. ಅಂತಹ ನಾಯಕರ ಕಣ್ಮರೆಯಿಂದ ಪ್ರಗತಿಪರ ಲೋಕ ಮಿಂಚೊಂದನ್ನು ಕಳೆದುಕೊಂಡಂತಾಗಿದೆ ಎಂದು ಅವರು ವಿಷಾದಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

