ಲಿಂಗಸ್ಗೂರು ಎಪಿಎಂಸಿ ಅಧ್ಯಕ್ಷರಿಗೆ ಸನ್ಮಾನ
ಮುದಗಲ್: ಲಿಂಗಸ್ಗೂರು ಎಪಿಎಂಸಿ ನೂತನ ಅಧ್ಯಕ್ಷರಾಗಿರುವ ಚನ್ನವೀರಪ್ಪಗೌಡ ಪಾಗದ ಅವರಿಗೆ ಮುದಗಲ್ನಲ್ಲಿ ಸನ್ಮಾನಿಸಲಾಯಿತು. ಪಟ್ಟಣದ ಹುಸೇನಿ ಹಾಲಂ ದರಗಾ ಕಮಿಟಿ ಅಧ್ಯಕ್ಷ ಮಹ್ಮದ ಷರೀಫ್ ವಕೀಲರು, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಗುಂಡಪ್ಪ ಜೀಡಿ, ಗ್ರಾನೈಟ್ ಉದ್ಯಾಮಿ ರಾಜುಗೌಡ ಪಾಟೀಲ್, ದೊಡ್ಡನಗೌಡ ಮಟ್ಟೂರು, ಪಂಪಣ್ಣ ಪರಡ್ಡಿ ಮೇದಿಕಿನಾಳ, ಸೈಯ್ಯದ್ಸಾಬ ಹಳೇಪೇಟೆ ಮುಂತಾದವರು ಶಾಲು ಹೊದಿಸಿ ಸನ್ಮಾನಿಸಿದರು.
ಪ್ರತಿಭಾ ಕಾರಂಜಿ
ರಾಯಚೂರು: ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಡಿ. 12ರಂದು ಆಯೋಜಿಸಲಾಗಿದೆ ಎಂದು ಬಿಇಒ ಮಲ್ಲಿಕಾರ್ಜುನ ತಿಳಿಸಿದ್ದಾರೆ. ಅಂದು ಬೆಳಗ್ಗೆ 9ಕ್ಕೆ ನಗರದ ಟಾಗೋರ ಸ್ಮಾರಕ ಪ್ರಾಥಮಿಕ ಶಾಲೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮವನ್ನು ಈ ಮೊದಲು ಡಿ.9ರಂದು ಆಯೋಜಿಸಲಾಗಿತ್ತು. ಆದರೆ ನೆಲ್ಸನ್ ಮಂಡೇಲಾ ಅವರ ನಿಧನದ ಹಿನ್ನೆಲೆಯಲ್ಲಿ ಡಿ.12ರಂದು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

