ರಾಯಚೂರು

ಕೃಷಿ ದಾಸ್ತಾನು: ರಸೀದಿಯಿಂದ ಆರ್ಥಿಕ ನೆರವು

Published On :


ಕ.ಪ್ರ. ವಾರ್ತೆ  ರಾಯಚೂರು      ಡಿ.12
ಕೃಷಿ ಉತ್ಪನ್ನಗಳಿಗೆ ಯೋಗ್ಯ ಬೆಲೆ ದೊರೆಯುವವರೆಗೆ ರೈತರು ತಮ್ಮ ಬೆಳೆಯನ್ನು ಸರ್ಕಾರಿ ಉಗ್ರಾಣದಲ್ಲಿ ದಾಸ್ತಾನಿರಿಸಬೇಕು. ಆ ಮೂಲಕ ನೀಡುವ ರಸೀದಿ ಬಳಸಿ ಮುಂದಿನ ಹಂಗಾಮಿಗೆ ಆರ್ಥಿಕ ನೆರವು ಪಡೆಯಬಹುದಾಗಿದೆ ಎಂದು ನಬಾರ್ಡ್ ಅಧಿಕಾರಿ ನಾರಾಯಣರಾಜು ಸಲಹೆ ನೀಡಿದರು.
ನಗರದಲ್ಲಿ ಗುರುವಾರ ಎಪಿಎಂಸಿ ಸಭಾಂಗಣದಲ್ಲಿ ಬೆಂಗಳೂರಿನ ಕೇಂದ್ರ ಉಗ್ರಾಣ ನಿಗಮ ಹಾಗೂ ಎಪಿಎಂಸಿ ವತಿಯಿಂದ ಆಯೋಜಿಸಿದ್ದ ಆಹಾರ ಧಾನ್ಯ ಸಂಗ್ರಹ ಹಾಗೂ ನಿರ್ವಹಣೆ ಕುರಿತ ಒಂದು ದಿನದ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಆರ್ಥಿಕವಾಗಿ ಸಬಲರಾಗಿ: ಮಾರುಕಟ್ಟೆಯಲ್ಲಿ ರೈತರ ಕೃಷಿ ಉತ್ಪನ್ನಗಳಿಗೆ ಸಮರ್ಪಕ ಬೆಲೆ ದೊರೆಯದೇ ಹೋದಲ್ಲಿ ಅಂಥ ಉತ್ಪನ್ನವನ್ನು ಸರ್ಕಾರಿ ಉಗ್ರಾಣದಲ್ಲಿ ದಾಸ್ತಾನಿರಿಸಬಹುದು.
 ಅದಕ್ಕೆ ಪ್ರತಿಯಾಗಿ ಉಗ್ರಾಣ ಸಂಸ್ಥೆಯು ದಾಖಲೆ ಒದಗಿಸುತ್ತದೆ. ಅಂಥ ದಾಖಲೆಯನ್ನು ಬ್ಯಾಂಕುಗಳಿಂದ ಸಾಲ ಸೌಲಭ್ಯ ಪಡೆಯಲು ಬಳಸಿ ಆರ್ಥಿಕವಾಗಿ ಪ್ರಗತಿ ಸಾಧಿಸಲು ಮನವಿ ಮಾಡಿದರು.
  ಉಗ್ರಾಣದ ಅಧಿಕಾರಿಗಳು ದಾಸ್ತಾನಿಗೆ ಪ್ರತಿಯಾಗಿ ರೈತರಿಗೆ ರಸೀದಿ ನೀಡುವಾಗ ಕಾನೂನು ಪಾಲಿಸುವುದು ಅಗತ್ಯ. ಸರ್ಕಾರಿ ನಿಯಮದ ಜತೆಗೆ ರೈತರಿಗೆ ಅನುಕೂಲಕರ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು. ಸಂಗ್ರಹವಿಟ್ಟ ದಾಸ್ತಾನಿನ ಸಂಸ್ಕರಣೆ ಮೂಲಕ ನಷ್ಟ ತಡೆಗೆ ಕ್ರಮ ಕೈಗೊಳ್ಳಬೇಕೆಂದು ಸಲಹೆ ನೀಡಿದರು.
ಆಹಾರ ದಾಸ್ತಾನಿಗೆ ಕ್ರಮ ಕೈಗೊಳ್ಳಿ: ಎಪಿಎಂಸಿ ಮಾರುಕಟ್ಟೆ ಕಾರ್ಯದರ್ಶಿ ವಿಠ್ಠಲ್ ಪೂಜಾರಿ ಮಾತನಾಡಿ, ಅಧಿಕಾರಿಗಳು ಆಹಾರ ಧಾನ್ಯ ಸಂಗ್ರಹಣೆ ಸಂದರ್ಭದಲ್ಲಿ ವೈಜ್ಞಾನಿಕ ನಿರ್ವಹಣೆ ಅನುಸರಿಸಬೇಕಿದೆ.
ತರಬೇತಿಯಲ್ಲಿ ಪಾಲ್ಗೊಂಡು ಮಾಹಿತಿ ಪಡೆದು ದಾಸ್ತಾನಿನ ಸಂರಕ್ಷಣೆಗೆ ಪೂರಕ ಕಾರ್ಯ ಕೈಗೊಳ್ಳಲು ಮನವಿ ಮಾಡಿದರು.
 ಈ ಸಂದರ್ಭದಲ್ಲಿ ಸರ್ಕಾರಿ ಉಗ್ರಾಣದ ಪ್ರಭಾರಿ ನಿರ್ದೇಶಕ ಎಸ್.ಕೆ. ಕುಲ್ಕರ್ಣಿ, ತರಬೇತುದಾರ ಡಿ.ಕೆ. ಸಲೀಂ, ರವೀಂದ್ರ, ಶ್ರೀನಿವಾಸ್, ಕೆಂಚಯ್ಯ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.