ಉ.ಕ. ಆಹ್ವಾನಿತ ಟೆನ್ನಿಸ್ ಟೂರ್ನಿಗೆ ಚಾಲನೆ
ಕನ್ನಡಪ್ರಭ ವಾರ್ತೆ ಬೀದರ್ ಡಿ.13
ನಗರದ ಪೊಲೀಸ್ ಟೆನ್ನಿಸ್ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭಗೊಂಡ ಉತ್ತರ ಕರ್ನಾಟಕ ಆಹ್ವಾನಿತ ಟೆನ್ನಿಸ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ವಿವಿಧ ಜಿಲ್ಲೆಗಳಿಂದ 90ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದಾರೆ.
ಮೂರು ದಿನಗಳ ಕಾಲ ನಡೆಯುವ ಈ ಟೂರ್ನಿಯಲ್ಲಿ 14ವರ್ಷ ವಯೋವುತಿಯೊಳಗಿನ 32 ಕ್ರೀಡಾಳು, 30 ವಯೋವುತಿಯೊಳಗಿನ 16 ಮತ್ತು 30ಕ್ಕಿಂತ ಹೆಚ್ಚು ವಯಸ್ಸಿನ 48 ಕ್ರೀಡಾಳುಗಳು ಭಾಗವಹಿಸಿದ್ದು, ದಿನದಂತ್ಯಕ್ಕೆ 50ಕ್ಕೂ ಹೆಚ್ಚು ಪಂದ್ಯಗಳು ನಡೆದಿವೆ.
ಸೆಮಿಫೈನಲ್: ಬೀದರ್ ಪೊಲೀಸ್ ಟೆನ್ನಿಸ್ ಕ್ಲಬ್ ವತಿಯಿಂದ ಆಯೋಜಿಸಲಾಗಿರುವ ಈ ಟೂರ್ನಿ ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಆರಂಭವಾದ ಟೂರ್ನಿಯಲ್ಲಿ ಈಗಾಗಲೇ 30ಕ್ಕಿಂತ ಮೇಲ್ಪಟ್ಟವರ ಪೈಕಿ ನಾಲ್ವರು ಮತ್ತು 30ಕ್ಕಿಂತ ಕಡಿಮೆ ವಯೋವುತಿಯವರ ಪೈಕಿ ನಾಲ್ವರು ಸೆಮಿಫೈನಲ್ ಹಂತ ತಲುಪಿದ್ದು, ಶನಿವಾರ ಡಬಲ್ಸ್ ಆಟಗಳು ನಡೆಯಲಿವೆ.
ಶನಿವಾರ 30ಕ್ಕಿಂತ ಮೇಲ್ಪಟ್ಟ ವಯೋವುತಿಯವರ ಪೈಕಿ ಸಿಂಧನೂರಿನ ಸಿ.ಟಿ. ಪಾಟೀಲ್ ಮತ್ತು ಬೀದರ್ನ ಮನೀಷ್ ಅವರ ಮಧ್ಯ ಸೆಮಿಫೈನಲ್ ನಡೆಯಲಿದೆ. ಇದೇ ವಿಭಾಗದಲ್ಲಿ ಬೀದರ್ನ ಮಧುಕರ್ ಕಾಡಯ್ಯ ಮತ್ತು ಸಿಂಧನೂರಿನ ಗುರುಪಾದಯ್ಯ ಸ್ವಾಮಿ ಅವರ ಮಧ್ಯ 2ನೇ ಸೆಮಿಫೈನಲ್ ನಡೆಯಲಿದೆ.
ಮೈದಾನ ಭರ್ತಿ: ಸದರಿ ಟೂರ್ನಿಯಲ್ಲಿ ಪಾಲ್ಗೊಳ್ಳಲು ರಾಯಚೂರು, ಸಿಂಧನೂರು, ಮಸ್ಕಿ, ಯಾದಗಿರಿ, ಲಿಂಗಸ್ಗೂರು, ಹೊಸಪೇಟೆ, ದಾವಣಗೆರೆ, ಗದಗ, ಯಾದಗಿರಿ, ಗುಲ್ಬರ್ಗ ಮತ್ತು ಬೀದರ್ನ ಕ್ರೀಡಾಪಟುಗಳು ಆಗಮಿಸಿದ್ದು, ಪೊಲೀಸ್ ಟೆನ್ನಿಸ್ ಕ್ರೀಡಾಂಗಣದಲ್ಲಿರುವ ನಾಲ್ಕೂ ಅಂಗಣಗಳು ಭರ್ತಿಯಾಗಿವೆ.
ಕಳೆದ ಮೂರ್ನಾಲ್ಕು ವರ್ಷಗಳಿಂದ ಬೀದರ್ ಪೊಲೀಸ್ ಟೆನ್ನಿಸ್ ಕ್ಲಬ್ ವತಿಯಿಂದ ರಾಜ್ಯ, ಅಂತಾರಾಜ್ಯ ಅಷ್ಟೇ ಅಲ್ಲ ಅಂತಾರಾಷ್ಟ್ರೀಯ ಮಟ್ಟದ ಟೂರ್ನಿಗಳನ್ನು ಆಯೋಜಿಸಿದ ಹೆಗ್ಗಳಿಕೆ ಹೊಂದಿದೆ. ಹೈದ್ರಾಬಾದ್ ಕರ್ನಾಟಕದ ಭಾಗದಲ್ಲಿಯೇ ಅತ್ಯುತ್ತಮ ಅಂತಾರಾಷ್ಟ್ರೀಯ ಗುಣಮಟ್ಟದ ಟೆನ್ನಿಸ್ ಕ್ರೀಡಾಂಗಣ ಹೊಂದಿದ ಖ್ಯಾತಿಯನ್ನೂ ಹೊಂದಿದೆ. ಶುಕ್ರವಾರ ಬೆಳಿಗ್ಗೆ ಟೂರ್ನಿಗೆ ಚಾಲನೆ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಪಿ. ತ್ಯಾಗರಾಜನ್ ಮಾತನಾಡಿ, ಕ್ರೀಡಾಸ್ಫೂರ್ತಿಯಿಂದ ಟೆನ್ನಿಸ್ನಲ್ಲಿ ಭಾಗವಹಿಸಲು ಕರೆ ನೀಡಿ, ಕ್ರೀಡಾಪಟುಗಳಿಗೆ ಶುಭಕೋರಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

