ಇಂದು ಸಮಾವೇಶ
ರಾಯಚೂರು: ಬಾಲ್ಯ ವಿವಾಹದ ವಿರುದ್ಧ ಬಾಲಿಕಾ ಸಂಘದ ಬಾಲಕಿಯರ ಸಮಾವೇಶ, ಬಾಲಿಕಾ ಸಂಘದ ಮಾಹಿತಿ ಕೈಪಿಡಿ ಬಿಡುಗಡೆಯನ್ನು ನಗರದಲ್ಲಿ ಡಿ.17ರಂದು ಆಯೋಜಿಸಲಾಗಿದೆ. ಅಂದು ನಗರದ ರಂಗಮಂದಿರದಲ್ಲಿ ಬೆಳಗ್ಗೆ 11.30ಕ್ಕೆ ನಡೆಯುವ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಉದ್ಘಾಟಿಸಲಿದ್ದಾರೆ. ಬಾಲಿಕಾ ಸಂಘದ ಕೈಪಿಡಿಯನ್ನು ಸಹಾಯಕ ಆಯುಕ್ತೆ ಮಂಜುಶ್ರೀ, ಕೌಶಲ್ಯ ತರಬೇತಿ ಪಡೆದ ಬಾಲಕಿಯರಿಗೆ ಪ್ರಮಾಣ ಪತ್ರವನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ವೀಣಾ ಪಲ್ಲಕಿ ವಿತರಿಸುವರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಆರತಿ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಆರ್. ಇಂದಿರಾ ಪಾಲ್ಗೊಳ್ಳಲಿದ್ದು, ಬಾಲಕಿಯರು ಸಮಾಜದ ಅಭಿವೃದ್ಧಿಯ ಸೂಚ್ಯಂಕ ಮತ್ತು ಕೊಡುದೆಗಾರರು ಎಂಬ ವಿಷಯದ ಕುರಿತು ಪಿಎಸ್ಸೈ ಬೇಬಿ ವಾಲಿಕಾರ್ ಮತ್ತು ಜಾಗೃತಿ ದೇಶಮಾನೆ ಮಾತನಾಡಲಿದ್ದಾರೆಂದು ಯುನಿಸೆಫ್ನ ಮಕ್ಕಳ ಹಕ್ಕು ಸಂರಕ್ಷಣೆ ಯೋಜನೆಯ ಸಂಯೋಜನಾಧಿಕಾರಿ ರಾಘವೇಂದ್ರ ಭಟ್ ತಿಳಿಸಿದ್ದಾರೆ.
ಜ.3ರಿಂದ ಜ್ಞಾನಸತ್ರ
ರಾಯಚೂರು: ಪ್ರತಿ ವರ್ಷದಂತೆ ನಗರದ ಸತ್ಯನಾಥ ಕಾಲನಿಯ ಶ್ರೀಸತ್ಯನಾಥ ಭಜನಾ ಮಂಡಳಿಯ 17ನೇ ವಾರ್ಷಿಕೋತ್ಸವದ ಜ್ಞಾನಸತ್ರ ಕಾರ್ಯಕ್ರಮಗಳು ಜ.3ರಿಂದ 9ರವರೆಗೆ ನಡೆಯಲಿದ್ದು, ವಿವಿಧ ಮಠಗಳ ಮಠಾಧೀಶರು ಪಾಲ್ಗೊಳ್ಳಲಿದ್ದಾರೆಂದು ಪ್ರಕಟಣೆ ತಿಳಿಸಿದೆ. ಡಿ.3ರಂದು ಕಾರ್ಯಕ್ರಮದ ಉದ್ಘಾಟನೆಯನ್ನು ಮಂತ್ರಾಲಯ ಮಠದ ಕಿರಿಯಶ್ರೀಗಳಾದ ಶ್ರೀ ಸುಬುಧೇಂದ್ರತೀರ್ಥರು ನೆರವೇರಿಸಲಿದ್ದು, ಡಿ.4ರಂದು ಉತ್ತರಾಧಿ ಮಠದ ಶ್ರೀಸತ್ಯಾತ್ಮತೀರ್ಥರಿಂದ ಸಂಸ್ಥಾನ ಮಹಾಪೂಜೆ ನೆರವೇರಲಿದೆ. ಡಿ.5ರಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಮಂತ್ರಾಲಯ ಮಠದ ಕಿರಿಯಶ್ರೀ ನ್ಮಾನಿಸಲಿದ್ದಾರೆಂದು ತಿಳಿಸಿದೆ. ನಗರದ ಎಲ್ಲ ಭಜನಾ ಮಂಡಳಿಗಳು ಹಾಗೂ ಸಮಸ್ತ ಆಸ್ತಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಮಂಡಳಿಯು ಕೋರಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

