ರಾಯಚೂರು

ಹುಲಿ ಸಂಖ್ಯೆ ಅಂದಾಜು ವರದಿ ಸಿದ್ಧತೆ: ಪ್ರಭಾಕರ

Published On :

ಲಿಂಗಸ್ಗೂರು: ಹುಲಿ, ಚಿರತೆ ಸೇರಿದಂತೆ ಪ್ರಾಣಿಗಳ ಅಂದಾಜು ಸಂಖ್ಯೆ ನಿಖರಗೊಳಿಸುವ ಪ್ರಕ್ರಿಯೆಗೆ ಸಿದ್ಧತೆ ನಡೆಸಲಾಗುತ್ತಿದೆ ಎಂದು ವಲಯ ಅರಣ್ಯಾಧಿಕಾರಿ ಪ್ರಭಾಕರ ತಿಳಿಸಿದರು. ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, 3ನೇ ಅಖಿಲ ಭಾರತ ಡಿ. 18ರಿಂದ 20 ರವರೆಗೆ ಹುಲಿ, ಚಿರತೆ, ಕಿರುಬ, ಕರಡಿ, ವನ್ನಿಗ ಸೀಳುನಾಯಿ, ಹೈನಾ(ಕತ್ತೆ ಕಿರುಬ), ತೋಳ, ನರಿ ಸೇರಿದಂತೆ ಇತರೆ ಮಾಂಸಹಾರಿ ಪ್ರಾಣಿಗಳ ಅಂದಾಜು ಮಾಡಲಾಗುವುದು. ಅರಣ್ಯಗಳ ವರ್ಗೀಕರಣದಲ್ಲಿ ಪ್ರಾಣಿಗಳು ವಾಸ ಮಾಡುತ್ತಿರುವ ಹಾಗೂ ಅವುಗಳ ಚಲನವಲನ, ಹೆಜ್ಜೆ ಗುರುತು, ಮಲ, ಕಾಲಿನಿಂದ ಕೆದರಿದ ಗುರುತು ಹಾಗೂ ಪ್ರತ್ಯಕ್ಷ ನೋಡುವುದರ ಮೂಲಕ ಸಂಖ್ಯೆಗಳನ್ನು ಅಂದಾಜಿಸಲಾಗುವುದು.
ಅರಣ್ಯ ಪ್ರದೇಶದಲ್ಲಿ ಪ್ರತಿ 5 ಕಿಮೀ ವ್ಯಾಪ್ತಿಯಲ್ಲಿ ಅರಣ್ಯ ಪಾಲಕರೊಂದಿಗೆ ಗಸ್ತಿನಲ್ಲಿ ಅಂದಾಜು ಮಾಡಲಾಗುವುದು. ಒಟ್ಟು 15 ಕಿಮೀ ಕಾಲ್ನಡಿಗೆ ಮೂಲಕ ತಿರುಗಾಡಿ ಪ್ರಾಣಿಗಳ ಜಾಡು ಹಿಡಿಯಲಾಗುವುದು. ಸಸ್ಯಹಾರಿ ಪ್ರಾಣಿಗಳ ಅಂದಾಜು ಕಾರ್ಯ ನಡೆಸಲಾಗುತ್ತಿದ್ದು, ಜಿಂಕೆ, ಮೊಲ, ಕೃಷ್ಣಮೃಗ ಸೇರಿದಂತೆ ಸಸ್ಯಹಾರಿ ಪ್ರಾಣಿಗಳ ಹೆಜ್ಜೆ ಗುರುತು, ಪೊದೆಗಳಲ್ಲಿ ವಾಸ, ನೀರಿನ ಮೂಲದ ಸುತ್ತ ವಾಸಿಸುವುದನ್ನು ಗಮನಿಸಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಮಾಹಿತಿ ಪಡೆದು ಅಂದಾಜಿಸಲಾಗುವುದೆಂದು ಅವರು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.