ರಾಯಚೂರು

ಈರುಳ್ಳಿ ಖರೀದಿಗೆ ನಿರಾಕರಣೆ; ಆಕ್ರೋಶ

Published On :

ಕ.ಪ್ರ. ವಾರ್ತೆ  ರಾಯಚೂರು  ಡಿ.19
ಜಿಲ್ಲೆಯ ಈರುಳ್ಳಿ ಬೆಳೆಗಾರರ ಸಮಸ್ಯೆ ದೂರವಾಗುವ ಲಕ್ಷಣಗಳಿಲ್ಲ. ಜಿಲ್ಲಾಧಿಕಾರಿ, ಎಪಿಎಂಸಿ ಕಾರ್ಯದರ್ಶಿಗಳು ರೈತರ ಮತ್ತು ವರ್ತಕರೊಂದಿಗೆ ಸಭೆ ನಡೆಸಿದರೂ ರೈತರಿಗೆ ಆಗುವ ಅನ್ಯಾಯ ತಡೆಯುವುದು ಮಾತ್ರ ಸಾಧ್ಯವಾಗಿಲ್ಲ. ಪರಿಣಾಮ ಗುರುವಾರವೂ ಈರುಳ್ಳಿ ಬೆಳೆಗಾರರ ಉತ್ಪನ್ನ ಖರೀದಿಗೆ ವರ್ತಕರು ಆಸಕ್ತಿ ತೋರದ್ದರಿಂದ ಬೆಳೆಗಾರರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಇಲ್ಲಿನ ಎಪಿಎಂಸಿಯಲ್ಲಿ ಈರುಳ್ಳಿ ಖರೀದಿದಾರರು ರೈತರು ಮಾರುಕಟ್ಟೆಗೆ ತರುವ ಈರುಳ್ಳಿಯಿಂದ 2ರಿಂದ 3 ಕೆಜಿ ಸ್ಯಾಂಪಲ್ ಪಡೆಯುವುದನ್ನು ವಿರೋಧಿಸಿದ ರೈತರ ಈರುಳ್ಳಿ ಖರೀದಿಸಲು ವರ್ತಕರು ನಿರಾಕರಿಸಿದ್ದರಿಂದ ರೈತರು ಪರದಾಡುವಂತಾಯಿತು.
ಪ್ರತಿ ಕ್ವಿಂಟಲ್ ಚೀಲದಿಂದ ಸ್ಯಾಂಪಲ್ ಪಡೆಯಲು ಆಕ್ಷೇಪವಿಲ್ಲ. ಆದರೆ ರೈತರ ಚೀಲದಿಂದ ಹೆಚ್ಚಿನ ಪ್ರಮಾಣದಿಂದ ಈರುಳ್ಳಿ ಪಡೆಯುವುದನ್ನು ವಿರೋಧಿಸುತ್ತಿರುವುದಾಗಿ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣಗೌಡ ಕಡಗಂದೊಡ್ಡಿ 'ಕನ್ನಡಪ್ರಭ'ಕ್ಕೆ ದೂರಿದರು.
ಈ ನಿಟ್ಟಿನಲ್ಲಿ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳದಿದ್ದಲ್ಲಿ ಈರುಳ್ಳಿ ಬೆಳೆಗಾರರ ಜತೆಗೂಡಿ ಹೋರಾಟ ನಡೆಸುವುದಾಗಿ ಅವರು ಎಚ್ಚರಿಸಿ, ರೈತರಿಗೆ ವಂಚನೆಯಾಗುವುದನ್ನು ತಡೆಯುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಅನೇಕ ಬಾರಿ ಸಭೆ ನಡೆಸಿದರೂ ಖರೀದಿಯಲ್ಲಿ ರೈತರಿಗೆ ವಂಚಿಸುವುದು ನಿಂತಿಲ್ಲ ಎಂದು ಆರೋಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.