ಸ್ಪರ್ಧೆ ಸ್ನೇಹಮಯ, ಸ್ಪರ್ಧಾತ್ಮಕವಾಗಿರಲಿ
ಮುದಗಲ್: ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಪ್ರತಿಯೊಂದು ಹೆಜ್ಜೆಯಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು. ಆದರೆ ಯಾವುದೇ ರೀತಿಯ ಸ್ಪರ್ಧೆಗಳು ಸ್ನೇಹಮಯ ಹಾಗೂ ಸ್ಪರ್ಧಾತ್ಮಕವಾಗಿರಬೇಕೆಂದು ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಮುಖ್ಯ ಶಿಕ್ಷಕ ಬಾಲಚಂದ್ರ ದಾಸರ ಹೇಳಿದರು.
ಸ್ಥಳೀಯ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ ಪ್ರೌಢಶಾಲಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಉಚಿತ ಬೈಸಿಕಲ್ ವಿತರಣೆ ಕಾರ್ಯಕ್ರಮದದಲ್ಲಿ ಮಾತನಾಡಿ, ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ತಮ್ಮಲ್ಲಿಯ ಕಲೆಯನ್ನು ಹೊರ ಹಾಕಬೇಕು. ನಿರ್ಣಾಯಕರು ಯಾವುದೇ ಶಾಲೆಯ ಪರವಾಗಿರದೇ ಪ್ರತಿಭಾವಂತರನ್ನು ಗುರುತಿಸಿ ತಾಲೂಕು, ಜಿಲ್ಲಾ ಮಟ್ಟಕ್ಕೆ ಕಳಿಸಿದಾಗ ರಾಜ್ಯ ಮಟ್ಟದಲ್ಲಿ ಯಶಸ್ಸನ್ನು ಕಾಣಬಹುದಾಗಿದೆ ಎಂದರು.
ಸೌಲಭ್ಯ ಪಡೆದು ಜ್ಞಾನವಂತರಾಗಿ: ಶೈಕ್ಷಣಿಕ ಅಭಿವೃದ್ಧಿಗೆ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಎಲ್ಲ ಯೋಜನೆಯನ್ನು ಪಡೆದ ವಿದ್ಯಾರ್ಥಿಗಳು ಅದೃಷ್ಟವಂತರು. ಯೋಜನೆಗಳು ಸದುಪಯೋಗವಾಗಬೇಕಾದರೆ ವಿದ್ಯಾರ್ಥಿಗಳು ಸಮಾಜದಲ್ಲಿ ಉತ್ತಮ ನಾಗರಿಕರಾಗಿ, ಉನ್ನತ ಹುದ್ದೆಗಳನ್ನು ಅಲಂಕರಿಸಿದಾಗ ಅದು ಸಾರ್ಥಕವಾಗುತ್ತದೆ. ಬೈಸಿಕಲ್ಗಳನ್ನು ಪಡೆದ ವಿದ್ಯಾರ್ಥಿಗಳು ಶಾಲೆಗೆ ಬರಲು ಹೋಗಲು ಬಳಸಿಕೊಂಡು ಉತ್ತಮ ಜ್ಞಾನವಂತರಾಗಬೇಕೆಂದರು.
ಕಾಯಕ್ರಮವನ್ನು ಉದ್ದೇಶಿಸಿ ಎಪಿಎಂಸಿ ಮಾಜಿ ಉಪಾಧ್ಯಕ್ಷ ಹಾಗೂ ನಿರ್ದೇಶಕ ಎಸ್.ಆರ್. ರಸೂಲ್, ಎಸ್ಡಿಎಂಸಿ ಅಧ್ಯಕ್ಷ ಉದಯಕುಮಾರ ಮಾತನಾಡಿದರು. ಕಾರ್ಯಕ್ರಮಕ್ಕೆ ಪಪಂ ಅಧ್ಯಕ್ಷ ರಜ್ಜಬಲಿ ಟಿಂಗ್ರಿ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಬೈಸಿಕಲ್ ವಿತರಣೆ: ಇದೇ ಸಮಯದಲ್ಲಿ ಸರ್ಕಾರಿ ಬಾಲಕರ- ಬಾಲಕಿಯರ ಪ್ರೌಢಶಾಲೆ ಮತ್ತು ಸಜ್ಜಲಶ್ರೀ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಬೈಸಿಕಲ್ ವಿತರಿಸಲಾಯಿತು. ವೇದಿಕೆ ಮೇಲೆ ಪಪಂ ಸ್ಥಾಯಿ ಸಮಿತಿ ಅಧ ್ಯಕ್ಷ ಹೇಮಂತಕುಮಾರ, ಉಪಾಧ್ಯಕ್ಷೆ ಹಂಪಮ್ಮ ನಾಗನಗೌಡ, ಸದಸ್ಯರಾದ ಮಾಸೂಮ್ ಷರೀಫ್, ಶಿವರಾಜ ತಳವಾರ, ವೀರಣ್ಣ, ಬಂದೇನವಾಜ್, ವೀರಭದ್ರಪ್ಪ ಕೊಳ್ಳಿ, ರೇವತಿ ಚಂದ್ರಶೇಖರ, ಮುಖಂಡರಾದ ಅಮೀರಬೇಗ್ ಉಸ್ತಾದ, ನಾಗರಾಜ ದಫೇದಾರ, ಮುಖ್ಯ ಗುರುಗಳಾದ ಎಂ.ಎಚ್. ಗೌಡರ, ಪವಾಡೆಪ್ಪ ಛಲವಾದಿ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮ ನಿರೂಪಣೆಯನ್ನು ಶಿಕ್ಷಕ ವೆಂಕೋಬ ಹುಲೇಗಿ ನೆರವೇರಿಸಿದರು. ಶಿಕ್ಷಕ ಗ್ಯಾನಪ್ಪ ಬಿಲಕೇರಿ ಸ್ವಾಗತಿಸಿದರು. ಶಿಕ್ಷಕ ಪರಾಂಪುರ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

