ರಾಯಚೂರು

ಸಮಾನತೆಗೆ ಅಂಬೇಡ್ಕರ್ ಆದರ್ಶ ಪಾಲಿಸಿ: ನಾಗವಾರ

Published On :

ಲಿಂಗಸ್ಗೂರು: ವರ್ಣಾಶ್ರಮದಲ್ಲಿನ ಜಾತೀಯತೆ, ಅನಿಷ್ಟ ಪದ್ಧತಿ, ಅನೀತಿ, ಅಸಮಾನತೆ, ಕೋಮುವಾದಂತಹ ಆಚರಣೆಯಿಂದ ದೇಶ ಅಧೋಗತಿಗೆ ತೆರಳುತ್ತಿದ್ದು, ಇವುಗಳನ್ನು ತೊಲಗಿಸಿ ಸಮಾನತೆ ಹೊಂದಲು ಡಾ. ಅಂಬೇಡ್ಕರ್‌ರ ತತ್ವಾದರ್ಶಗಳ ಪಾಲನೆಯಿಂದ ಸಾಧ್ಯ ಎಂದು  ದಸಂಸ ರಾಜ್ಯ ಸಂಚಾಲಕ ಲಕ್ಷ್ಮೀನಾರಾಯಣ ನಾಗವಾರ ಅಭಿಪ್ರಾಯಪಟ್ಟರು.
ಪಟ್ಟಣದ ಶಾದಿಮಹಲ್‌ನಲ್ಲಿ ಭಾನುವಾರ ಡಾ. ಅಂಬೇಡ್ಕರ್‌ರ ಪರಿನಿರ್ವಾಣ ದಿನ ಹಾಗೂ ಮೌಢ್ಯ, ಕಂದಾಚಾರ ನಿಷೇಧ ಕಾಯ್ದೆ ಕುರಿತು ವಿಚಾರ ಸಂಕೀರ್ಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪುರಸಭೆ ಅಧ್ಯಕ್ಷ ಕುಮಾರಸ್ವಾಮಿ ಸಾಲ್ಮನಿ ಡಾ. ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಉಪನ್ಯಾಸಕ ಲಾಲ್ ಹುಸೇನ್ ಕಂದಗಲ್ ಮೌಢ್ಯ, ಕಂದಾಚಾರ ನಿಷೇಧ ಕುರಿತು ವಿಶೇಷ ಉಪನ್ಯಾಸ ನೀಡಿದರು. ಈ ವೇಳೆ ಸಹಾಯಕ ಸರಕಾರಿ ಅಭಿಯೋಜಕ ಅಯ್ಯಾಳಪ್ಪ ಬಳಬಟ್ಟಿ, ದಸಂಸ ಜಿಲ್ಲಾ ಸಂಚಾಲಕ ಪ್ರಭುಲಿಂಗ ಮೇಗಳಮನಿ, ಜಿಪಂ ಮಾಜಿ ಉಪಾಧ್ಯಕ್ಷ ಪಾಮಯ್ಯ ಮುರಾರಿ, ಪುರಸಭೆ ಸದಸ್ಯ ರುದ್ರಪ್ಪ ಬ್ಯಾಗಿ, ರೈತಸಂಘದ ರಾಜ್ಯ ಕಾರ್ಯದರ್ಶಿ ಅಮರಣ್ಣ ಗುಡಿಹಾಳ, ನೌಕರರ ಸಂಘದ ಅಧ್ಯಕ್ಷ ಶಿವಯೋಗಪ್ಪ, ಜೀವನಹಳ್ಳಿ ವೆಂಕಟೇಶ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.