ಸುದ್ದಿ ಸಂಕ್ಷೇಪ
ಸ್ಲಂಗಳ ಅಭಿವೃದ್ಧಿಗೆ ಒಪ್ಪಿಗೆ; ಸ್ವಾಗತ
ರಾಯಚೂರು: ರಾಜ್ಯ ಸರ್ಕಾರವು ಈಚೆಗೆ ನಡೆದ ಸಚಿವ ಸಂಪುಟದ ಸಭೆಯಲ್ಲಿ ರಾಜೀವ್ ಆವಾಸ್ ಯೋಜನೆ ಅನುಷ್ಠಾನಕ್ಕಾಗಿ ಮೊದಲನೇ ಹಂತದಲ್ಲಿ 10 ನಗರಗಳಿಗೆ ರು. 10752 ಕೋಟಿ ಮಂಜೂರು ಮಾಡಿರುವುದನ್ನು ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆ ಸ್ವಾಗತಿಸಿದೆ. ಈ ಕುರಿತು ಪ್ರಕಟಣೆ ನೀಡಿರುವ ಸಂಘಟನೆಯ ಅಧ್ಯಕ್ಷ ತಾಯಣ್ಣ ಹೊಸೂರು, ಪ್ರಧಾನ ಕಾರ್ಯದರ್ಶಿ ಜನಾರ್ಧನ, ಹಳ್ಳಿಬೆಂಚಿ ನಗರಗಳ ಕೊಳಗೇರಿಗಳ ನಿವಾಸಿಗಳಿಗೆ ಸರ್ಕಾರದ ಈ ನಿರ್ಧಾರದಿಂದ ಅನುಕೂಲವಾಗಲಿದ್ದು, ಸರ್ಕಾರ ಅನುದಾನದ ಸಮರ್ಪಕ ಬಳಕೆಗೆ ಪೂರಕ ಕ್ರಮ ಕೈಗೊಳ್ಳಬೇಕಿದೆ ಎಂದು ಒತ್ತಾಯಿಸಿದ್ದಾರೆ.
ಈಗಾಗಲೇ ಘೋಷಿತ ಮತ್ತು ಅಘೋಷಿತ ಸ್ಲಂಗಳನ್ನು ಒಳಗೊಂಡಂತೆ ನಗರಗಳಲ್ಲಿರುವ ಸ್ಲಂಗಳಿಗೆ ಮೂಲಸೌಕರ್ಯ ಕಲ್ಪಿಸಬೇಕು. ಔಪಚಾರಿಕ ವ್ಯವಸ್ಥೆಯ ಅಡಿ ತರಬೇಕು. ಯೋಜನೆಯ ಅನುಷ್ಠಾನದ ಎಲ್ಲ ಹಂತದಲ್ಲೂ ಸಮುದಾಯ ಸಹಭಾಗಿತ್ವ, ಸಮುದಾ ಯದ ತೀರ್ಮಾನಗಳಿಗೆ ಪ್ರಧಾನ್ಯತೆ ನೀಡಬೇಕು ಎಂದು ಸಂಘಟನೆ ಆಗ್ರಹಿಸಿದ್ದಾರೆ. ಯೋಜನೆಯಡಿಯಲ್ಲಿ ಆಯ್ಕೆಯಾದ ಸ್ಲಂಗಳಿಗೆ ವಸತಿ ಸೌಲಭ್ಯ, ಮೂಲಸೌಲಭ್ಯ ಹಾಗೂ ಸಾಮಾಜಿಕ ಸೌಲಭ್ಯಗಳನ್ನು ಒದಗಿಸಬೇಕು. ಸ್ಲಂಗಳ ಅಭಿವೃದ್ಧಿಗೆ ನಿಯಮಗಳನ್ನು ರೂಪಿಸುವ ಸಂದರ್ಭ ಸಮುದಾಯದ ಸಂಪೂರ್ಣ ಸಹಭಾಗಿತ್ವಕ್ಕೆ ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿದ್ದಾರೆ. ಸ್ಲಂಗಳನ್ನು ಅಭಿವೃದ್ಧಿ ಪಡಿಸುವ ಸಂದರ್ಭ ಜನನರ ಜೀವನೋಪಾಯ ಹಾಗೂ ಆದಾಯವನ್ನು ಪರಿಗಣಿಸಿ ನಿವೇಶನ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕೆಂಬುದು ಸೇರಿ ವಿವಿಧ ಬೇಡಿಕೆಗಳನ್ನು ಮುಂದಿರಿಸಿದ್ದಾರೆ.
ಶೈಕ್ಷಣಿಕ ಸೌಲಭ್ಯಕ್ಕೆ ಒತ್ತಾಯಿಸಿ ಮನವಿ
ರಾಯಚೂರು: ತಾಲೂಕಿನ ದೇವಸೂಗೂರು ಜಿಪಂ ವ್ಯಾಪ್ತಿಯ ಗಂಜಳ್ಳಿಯಲ್ಲಿ ಪ್ರೌಢಶಾಲೆಯ ಆರಂಭ ಮತ್ತು ಸರ್ಕಾರಿ ಶಾಲೆಯನ್ನು 8ನೇ ತರಗತಿಗೆ ಮೇಲ್ದರ್ಜೆಗೆ ಏರಿಸುವ ನಿಟ್ಟಿನಲ್ಲಿ ಕೂಡಲೇ ಕ್ರಮ ಕೈಗೊಳ್ಳುವಂತೆ ಹೈ.ಕ. ವಿಮೋಚನಾ ವೇದಿಕೆ ಒತ್ತಾಯಿಸಿದೆ. ಈ ಕುರಿತು ಈಚೆಗೆ ಡಿಡಿಪಿಐ ಗೆ ಮನವಿ ಸಲ್ಲಿಸಿರುವ ಸಂಘಟನೆಯ ಪ್ರಮುಖರು, ತಾಲೂಕಿನ ಕೊರವಿಹಾಳ, ಹನುಮನದೊಡ್ಡಿ, ಇಬ್ರಾಹಿಂದೊಡ್ಡಿ ಮತ್ತು ಗಂಜಳ್ಳಿ ಗ್ರಾಮದ ಮಕ್ಕಳಿಗೆ ಗಂಜಳ್ಳಿ ಗ್ರಾಮದಲ್ಲಿಯೇ ಪ್ರೌಢಶಾಲೆ ಆರಂಭಿಸಬೇಕು. ಹೆಗ್ಗಸನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯನ್ನು 8ನೇ ತರಗತಿಗೆ ಮೇಲ್ದರ್ಜೆಗೇರಿಸಬೇಕು ಎಂದು ಒತ್ತಾಯಿಸಿದರು. ವಡ್ಲೂರು, ಚಿಕ್ಕಸೂಗೂರು, ಸಗಮಕುಂಟಾ, ಕೊರ್ತಕುಂದಾ ಗ್ರಾಮಗಳ ಸರ್ಕಾರಿ ಶಾಲೆಯನ್ನು 8ನೇ ತರಗತಿಗೆ ಮೇಲ್ದರ್ಜೆಗೇರಿಸಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಸಂಘಟನೆಯ ತಾಯಪ್ಪ ಹೆಗ್ಗಸನಹಳ್ಳಿ, ವೀರಮ್ಮ, ಕೆ.ಪಿ. ಅನಿಲ್ಕುಮಾರ್ ಸೇರಿ ಅನೇಕರಿದ್ದರು.
ಶ್ಯಾಮಸುಂದರ ಜನ್ಮದಿನೋತ್ಸವ
ಗುಲ್ಬರ್ಗ: ಇಲ್ಲಿನ ಸೇಡಂ ರಸ್ತೆಯಲ್ಲಿರುವ ಸರ್ಕಾರಿ ಆಸ್ಪತ್ರೆ ತಿರುವಿನಲ್ಲಿರುವ ವೃತ್ತದಲ್ಲಿ ಹೋರಾಟಗಾರ, ಶೋಷಿತ ಸಮುದಾಯದ ನಾಯಕ ಬಿ. ಶ್ಯಾಮಸುಂದರ್ ಅವರ 106ನೇ ಜನ್ಮೋತ್ಸವವನ್ನು ಬಲು ಶ್ರದ್ಧೆ- ಗೌರವಗಳಿಂದ ಆಚರಿಸಲಾಯಿತು. ಈ ಸಮಾರಂಭದಲ್ಲಿ ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಿ ಶ್ಯಾಮಸುಂದರ್ ಅವರ ಹೋರಾಟಗಳು, ಅವರ ಸಾಧನೆಗಳನ್ನು ಮೆಲಕು ಹಾಕಿದರು.
ಹಿರಿಯ ಸಾಹಿತಿ ಚೆನ್ನಣ್ಣ ವಾಲೀಕಾರ್, ಜಿಡಿಎ ಆಯುಕ್ತ ರವಿಕಿರಣ ಒಂಟಿ, ಪಾಲಿಕೆ ಆಯುಕ್ತ ಶ್ರೀಕಾಂತ ಕಟ್ಟೀಮನಿ, ಅರುಣಾ ಪಾಟೀಲ್ ರೇವೂರ್ ಜಯಂತ್ಯುತ್ಸವ ಸಮಿತಿ ಸದಸ್ಯರು ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

