ರಾಯಚೂರು

ವಿಕಲಚೇತನರ ಹಕ್ಕು ಜಾರಿಗೆ ಯತ್ನ

Published On :

ಕ.ಪ್ರ. ವಾರ್ತೆ  ಲಿಂಗಸ್ಗೂರು  ಡಿ.23
ಸರ್ಕಾರ ವಿಕಲಚೇತನರಿಗೆ ಮೀಸಲಿಟ್ಟ ಶೇ.3ರಷ್ಟು ಅನುದಾನ ವೆಚ್ಚ ಮಾಡುವ ಕ್ರೀಯಾಯೋಜನೆ ಸೇರಿದಂತೆ ವಿಕಲಚೇತನರ ಹಕ್ಕುಗಳ ಸಮರ್ಪಕ ಜಾರಿಗೆ ಜಿಪಂ ಸಭೆಯಲ್ಲಿ ಒತ್ತಾಯಿಸುವುದಾಗಿ ಜಿಪಂ ಸದಸ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೂಪನಗೌಡ ಕರಡಕಲ್ ಭರವಸೆ ನೀಡಿದರು.
ಪಟ್ಟಣದ ವಿಕಲಚೇತನ ಭವನದಲ್ಲಿ ಸೋಮವಾರ ರಾಜ್ಯ ವಿಕಲಚೇತನರ ಒಕ್ಕೂಟದಿಂದ ಹಮ್ಮಿಕೊಂಡಿದ್ದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಗದಗ ವೀರೇಶ್ವರ ಪುಣ್ಯಾಶ್ರಮದ ಪಂ. ಪಂಚಾಕ್ಷರಿ ಗವಾಯಿ ಹಾಗೂ ಪುಟ್ಟರಾಜ ಕವಿ ಗವಾಯಿಗಳು ವಿಕಲಚೇತನರಿಗೆ ಆಶ್ರಯ ನೀಡುವ ಮೂಲಕ ಅವರ ಏಳಿಗೆಗೆ ಕಾರಣರಾಗಿದ್ದಾರೆ. ಅನುಕಂಪದ ಬದಲು ಅವಕಾಶ ನೀಡಿ ಎಂಬ ಬೇಡಿಕೆಯಂತೆ ವಿಕಲಚೇತನರ ಅಭಿವೃದ್ಧಿಗೆ ಎಲ್ಲರೂ ಪ್ರೋತ್ಸಾಹ ನೀಡಬೇಕೆಂದು ಕರೆ ನೀಡಿದರು.
   ಬಿಜೆಪಿ ತಾಲೂಕಾಧ್ಯಕ್ಷ ಸಿದ್ಧನಗೌಡ ಮಾಲೀಪಾಟೀಲ್ ಮಾತನಾಡಿದರು. ವಿಕಲಚೇತನ ಒಕ್ಕೂಟದ ಮುಖಂಡ ದೇಸಾಯಿ ಧೋತರಬಂಡಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಜಿ.ಎಸ್. ಮಹಾಜನ್, ಪುರಸಭೆ ಅಧ್ಯಕ್ಷ ಕುಮಾರಸ್ವಾಮಿ ಸಾಲ್ಮನಿ, ತಾಪಂ ಅಧ್ಯಕ್ಷೆ ಬಸಮ್ಮ ಪರಮೇಶ ಯಾದವ್, ಶಿಕ್ಷಕ ತುಕಾರಾಮ್, ಒಕ್ಕೂಟದ ಅಧ್ಯಕ್ಷ ಅಮರೇಶ ಪಾಟೀಲ್ ಐದಬಾವಿ, ಮುಖಂಡರಾದ ಹನುಮಂತರಾಯ ದೇವದುರ್ಗ, ಹುಸೇನ್‌ಬಾಷಾ, ವಿರುಪಾಕ್ಷಯ್ಯ ಹೊಸಮಠ, ಟಿ.ಕುಪ್ಪಣ್ಣ, ಎಚ್.ಎಂ. ಸಾವಿತ್ರಿ ಸೇರಿದಂತೆ ಇದ್ದರು.

ವಿಕಲಚೇತನರ ಬೇಡಿಕೆ ಈಡೇರಿಕೆ ಒತ್ತಾಯ
ಲಿಂಗಸ್ಗೂರು: ವಿಕಲಚೇತನರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ವಿಕಲಚೇತನರ ಒಕ್ಕೂಟದ ಮುಖಂಡರು ಶಾಸಕ ಮಾನಪ್ಪ ವಜ್ಜಲರಿಗೆ ಮನವಿ ಮಾಡಿದ್ದಾರೆ.
ಬೇಡಿಕೆಗಳು...
ವಿಕಲಚೇತನರಿಗೆ ಮಾಸಾಶನ ಹೆಚ್ಚಿಸಬೇಕು, ಬಿಪಿಎಲ್ ಕಾರ್ಡ್ ಒದಗಿಸಬೇಕು. ಸಾರಿಗೆ ಬಸ್‌ಗಳಲ್ಲಿ ವಿಕಲಚೇತನರಿಗೆ 200 ಕಿಮೀವರೆಗೆ ಪ್ರಯಾಣಿಸಲು ಕ್ರಮ ಕೈಗೊಳ್ಳಬೇಕು. ಪ್ರತಿವರ್ಷ ಡಿ.3ರಂದು ವಿಕಲಚೇತನರ ದಿನಾಚರಣೆ ಆಚರಿಸಲು ಅಧಿಕೃತ ಅಧಿಸೂಚನೆ ಮತ್ತು ರಜೆ ಘೋಷಿಸಬೇಕು. ಸರ್ಕಾರಿ ಆಸ್ಪತ್ರೆ ಮತ್ತು ಚಿಕಿತ್ಸಾ ಕೇಂದ್ರಗಳಲ್ಲಿ ಚಿಕಿತ್ಸೆಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಬೇಕು. ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ಖಾಸಗಿ ಕಂಪನಿಗಳ ಸಹಯೋಗದಲ್ಲಿ ವರ್ಷಕ್ಕೆರಡು ಬಾರಿ ಉದ್ಯೋಗ ಮೇಳ ನಡೆಸಬೇಕು. ನಿರುದ್ಯೋಗಿ ಪದವೀಧರರಿಗೆ ನಿರುದ್ಯೋಗ ಭತ್ಯೆ ನೀಡಬೇಕು. ಜಿಲ್ಲೆಯಲ್ಲಿ ವಿಕಲಚೇತನರ ಕಲ್ಯಾಣಾಧಿಕಾರಿಗಳ ಹುದ್ದೆ ಖಾಲಿ ಇದ್ದು, ಶೀಘ್ರ ಅಧಿಕಾರಿಗಳನ್ನು ನೇಮಿಸಬೇಕು. ವಿಕಲಚೇತನರ ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕು. ಗ್ರಾಪಂ, ತಾಪಂ, ಜಿಪಂ, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ ಶೇ.3ರಷ್ಟು ಅನುದಾನ ವೆಚ್ಚ ಮಾಡಲು ಕ್ರಿಯಾಯೋಜನೆ ರೂಪಿಸಲು ಸಮಿತಿ ರಚಿಸಬೇಕು. ಶಾಸಕರ ಅನುದಾನದಲ್ಲಿ 10 ಲಕ್ಷ ಮತ್ತು ಸಂಸದರ ಅನುದಾನದಲ್ಲಿ 5 ಲಕ್ಷ ಕಡ್ಡಾಯವಾಗಿ ವಿಕಲಚೇತನರ ಅಭಿವೃದ್ಧಿಗೆ ಕ್ರಿಯಾಯೋಜನೆ ರೂಪಿಸಬೇಕೆಂದು ಒಕ್ಕೂಟದ ಅಧ್ಯಕ್ಷ ಅಮರೇಶ ಪಾಟೀಲ್ ಐದಬಾವಿ, ಅಮರೇಶ ಜಹಗೀರದಾರ, ಕುಪ್ಪಣ್ಣ ಕಸಬಾಲಿಂಗಸ್ಗೂರು, ಸುರೇಶ ಭಂಡಾರಿ, ವೀರಸಂಗಯ್ಯ ಹಿರೇಮಠ, ಶಿವಕುಮಾರ, ಈರಮ್ಮ ಪತ್ತಾರ, ನಿಂಗನಗೌಡ, ರೇಣುಕಾ ಸೇರಿದಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.