ಗಬ್ಬೂರು: ಚರ್ಚ್ ನಿರ್ಮಾಣಕ್ಕೆ ಅಡಿಗಲ್ಲು
ದೇವದುರ್ಗ: ತಾಲೂಕಿನ ಗಬ್ಬೂರು ಗ್ರಾಮದಲ್ಲಿ ಇತ್ತೀಚೆಗೆ ಮೆಥೊಡಿಸ್ಟ್ ಚರ್ಚ್ನ ನಿರ್ಮಾಣಕ್ಕೆ ರಾಜ್ಯ ಯುವ ಕಾಂಗ್ರೆಸ್ ಎಸ್ಟಿ ಮೋರ್ಚಾದ ಉಪಾಧ್ಯಕ್ಷ ಬಿ.ವಿ. ನಾಯಕ ಅಡಿಗಲ್ಲು ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಶಿಕ್ಷಣ, ಆರೋಗ್ಯದ ಜತೆಗೆ ದಲಿತರಿಗೆ ಧಾರ್ಮಿಕ ಸಂಸ್ಕಾರ ಕಲಿಸಿಕೊಡುವ ಕಾರ್ಯವನ್ನು ಕ್ರೈಸ್ತ ಮಿಷನರಿಗಳ ಪಾತ್ರ ಮಹತ್ವದ್ದಾಗಿದೆ. ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಸಾಮಾಜಿಕ ನ್ಯಾಯದಡಿ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ಯೋಜನೆಗಳ ಲಾಭ ಜನತೆಗೆ ತಲುಪಿಸುವ ಕಾರ್ಯ ಪ್ರಾಮಾಣಿಕವಾಗಿ ಅಧಿಕಾರಿಗಳು ಮಾಡಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕಾಂಗ್ರೆಸ್ನ ಮಹಿಳಾ ಉಪಾಧ್ಯಕ್ಷೆ ರಾಣಿ ರಿಚರ್ಡ್ ವಹಿಸಿ ಮಾತನಾಡಿದರು. ಸಮಾರಂಭದ ಸಾನ್ನಿಧ್ಯವನ್ನು ಚರ್ಚ್ನ ಸಭಾಪಾಲಕ ರೆ ಡಿ.ಸುರೇಶಬಾಬು ವಹಿಸಿದ್ದರು.
ಕಾರ್ಯಕ್ರಮದಲ್ಲಿ ತಾಪಂ ಸದಸ್ಯ ಜನಾರ್ಧನ ಪೂಜಾರಿ, ಜಿಪಂ ಮಾಜಿ ಸದಸ್ಯರಾದ ಸದಾಶಿವಯ್ಯ ಮಠದ, ಸಿದ್ದಯ್ಯತಾತಾ ಗುರುವಿನ, ಮುಖಂಡರಾದ ಭಾನುಪ್ರಕಾಶ ಖೇಣೇದ, ಬಸವರಾಜ ಸಾಹು ಬೆಳಗುಂದಿ, ಬಸವರಾಜಯ್ಯ ತಾತ ಗುರುವಿನ್, ಚನ್ನನಗೌಡ ಪೋಲೀಸ್ ಪಾಟೀಲ್, ಅಮರೇಗೌಡ ಹಂಚಿನಾಳ, ಅಮರೇಗೌಡ ಹೊನ್ನಟಗಿ, ಗ್ರಾಪಂ ಮಾಜಿ ಸದಸ್ಯ ಹುಲಿಗೆಪ್ಪ ಸಿಂಗ್ರಿ, ಹೆಲ್ಪ್ ಎ.ಚೈಲ್ಡ್ ಯೋಜನಾಧಿಕಾರಿ ಬೆಟರಾಯ, ಪಿಎಸ್ಸೈ ಅಮರೇಶ ಹುಬ್ಬಳ್ಳಿ ಸೇರಿ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

