ರಾಯಚೂರು

ರಸ್ತೆಗಳ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಆದ್ಯತೆ

Published On :

ಸಿಂಧನೂರು: ರಾಜ್ಯದ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಏಳು ತಿಂಗಳ ಅವಧಿಯಲ್ಲಿ ರಸ್ತೆಗಳ ಅಭಿವೃದ್ಧಿಗೆ ಕೋಟಿಗಟ್ಟಲೆ ಅನುದಾನ ನೀಡಿದೆ ಎಂದು ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ ಹೇಳಿದರು.
  ನಗರದ ಖಾಸಗಿ ಹೊಟೇಲ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಸ್ಕಿ- ಸಿಂಧನೂರು ರಸ್ತೆಯ ತಾತ್ಕಾಲಿಕ ದುರಸ್ತಿಗೆ 40 ಲಕ್ಷ, ಜವಳಗೇರಾ- ಬಳಗಾನೂರು ರಸ್ತೆ ಅಭಿವೃದ್ಧಿ, ಪಾಮನಕಲ್ಲೂರು ರಸ್ತೆಗೆ 3 ಕೋಟಿ, ಕೊಟ್ನೇಕಲ್ ರಸ್ತೆಗೆ 4 ಕೋಟಿ, ಕವಿತಾಳದಿಂದ ತೋರಣದಿನ್ನಿ ಕ್ರಾಸ್ ರಸ್ತೆಗೆ 3 ಕೋಟಿ, ಕವಿತಾಳ- ಮಲ್ಲದಗುಡ್ಡ ರಸ್ತೆಗೆ 3.5 ಕೋಟಿ, ಮಲ್ಲದಗುಡ್ಡ- ಉದ್ಬಾಳ ರಸ್ತೆಗೆ 3.5 ಕೋಟಿ.
 ಹಾಗೆಯೇ ಸಿಆರ್‌ಎಫ್ ಫಂಡ್‌ನಲ್ಲಿ ಮುದಗಲ್- ಮಸ್ಕಿ ರಸ್ತೆಗೆ 6 ಕೋಟಿ, ಮಸ್ಕಿ- ಪೋತ್ನಾಳ ರಸ್ತೆಗೆ 6 ಕೋಟಿ, ಅಂತರಗಂಗಿ- ಮಸ್ಕಿ ರಸ್ತೆಗೆ 75 ಲಕ್ಷ. ಹೀಗೆ ಕ್ಷೇತ್ರದ ಬಹುತೇಕ ರಸ್ತೆಗಳಿಗೆ ಅನುದಾನ ಬಿಡುಗಡೆಯಾಗಿದೆ ಫೆಬ್ರವರಿ ತಿಂಗಳೊಳಗೆ ಟೆಂಡರ್ ಪ್ರಕ್ರಿಯೆ ಮುಗಿದು ಕಾಮಗಾರಿಗಳು ಆರಂಭಗೊಳ್ಳಲಿವೆ. ಹಾಗೆಯೇ ಸಮಾಜ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಾರ್ಡ್‌ಗಳ ಅಭಿವೃದ್ಧಿಗೆ 1.75 ಕೋಟಿ ಅನುದಾನ ಬಿಡುಗಡೆಯಾಗಿದೆ. ಅದೇ ರೀತಿ ತುಂಗಭದ್ರಾ ಅಚ್ಚುಕಟ್ಟು ಪ್ರಾಧಿಕಾರದಿಂದ ರಸ್ತೆಗಳ ಅಭಿವೃದ್ಧಿಗೆ 2 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದರು.
ಕನಕನಾಲಾ ಯೋಜನೆ ಜಾರಿಗೆ ಯತ್ನ: ಇನ್ನು ಎರಡು ವರ್ಷಗಳಲ್ಲಿ ಮಸ್ಕಿ ಕ್ಷೇತ್ರದಲ್ಲಿನ ಎಲ್ಲ ಕುಡಿವ ನೀರಿನ ಸಮಸ್ಯೆಯೂ ಪರಿಹಾರಗೊಳ್ಳಲಿದೆ. ಕನಕನಾಲಾ ಯೋಜನೆಗೆ ಅಗತ್ಯ ಅನುದಾನಕ್ಕಾಗಿ ಒತ್ತಡ ಹೇರುತ್ತಿದ್ದೇನೆ ಎಂದರು. ಹಾಗೆಯೇ ನನ್ನ ಕ್ಷೇತ್ರ 6 ವಾಲ್ಮೀಕಿ ಭವನ, 10 ಜನಜೀವನ್ ರಾಂ ಹಾಗೂ ಅಂಬೇಡ್ಕರ್ ಭವನಗಳನ್ನು ಉದ್ಘಾಟಿಸಲಾಗುವುದು ಎಂದರು.
ಮುಖಂಡರಾದ ಕಟ್ಟೆಪ್ಪ ಗುಂಜಳ್ಳಿ, ಬಸವರಾಜ ಸ್ವಾಮಿ ಹಸಮಕಲ್, ಅಮರೇಶ ಗಚ್ಚಿಮನಿ, ಪ್ರಕಾಶ ಮಸ್ಕಿ, ಬಸವರಾಜ ಕುರುಕುಂದಿ, ಮಲ್ಲನಗೌಡ ಗುಂಜಳ್ಳಿ, ಶರಣಬಸವ ನಾಗರಬೆಂಚಿ, ವೀರೇಶ ಮಸ್ಕಿ, ಶರಣಪ್ಪ ಸಾಹುಕಾರ ಮಲ್ಲಾಪುರ, ಶರಣಪ್ಪ ಸಾಹುಕಾರ ಹೊಕ್ರಾಣಿ, ಬುಕ್ಕನಟ್ಟಿ ಸಿದ್ದಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.