ರಾಯಚೂರು

ಆತ್ಮವಿಶ್ವಾಸವೇ ನಮ್ಮನ್ನು ಕಾಪಾಡಿತು

Published On :

ಶಹಾಪುರ: ದಿನಾಂಕ 27-12-2013 ರಂದು ಶುಕ್ರವಾರ ಮಧ್ಯರಾತ್ರಿ ಸಂಭವಿಸಿದ ಬೆಂಗಳೂರು ನಾಂದೇಡ್ ರೈಲು ದುರಂತದಲ್ಲಿ ಸಾವಿನದವಡೆಯಿಂದ ಪಾರಾಗಿ ಬಂದದ್ದು ನಮ್ಮ ಅದೃಷ್ಟ. ನಮ್ಮ ಆತ್ಮವಿಶ್ವಾಸವೇ ನಮ್ಮನ್ನು ಪಾರುಮಾಡಿತು ಎಂದು ಅಂಬ್ರೇಶ್ ಮಾಕಾಲ್ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಘಟನೆ ವಿವರ: ರಾತ್ರಿ 1.30 ರಿಂದ 2.30ರ ಸಮಯದಲ್ಲಿ ಬಿ.1 ಹವಾನಿಯಂತ್ರಿತ ಭೋಗಿಯೊಳಗೆ ಒಮ್ಮೆಲೆ ಉಸಿರು ಗಟ್ಟಿದಂತಹ ವಾತಾವರಣ ನಿರ್ಮಾಣವಾದುದ್ದು ನಮೆಗೆಲ್ಲ ಗಾಬರಿ ಹುಟ್ಟಿಸಿತು.
 ಎಲ್ಲೆಂದರಲ್ಲೆ ವಿದ್ಯುತ್ ಶಾಟ್ ಸರ್ಕ್ಯಟ್ ಆಗುತ್ತಾ ಸಂಪರ್ಕ ಕಡೆದುಕೊಂಡಂತಾಯಿತು. ಆಂಧ್ರದ ಪ್ರಶಾಂತನಿಲಯದ ಪತ್ತೇಚರ್ ನಿಲ್ದಾಣದ ಸಮೀಪ ಒಮ್ಮೆಲೆ ಹಿಂದಿನ ಭೋಗಿಯೊಳಗಿನ ಜನರ ಕೂಗಾಟ ಕೇಳಿ ನಮಗೂ ಎಚ್ಚರಗೊಂಡಾಗ ನಾವು ತಂಗಿದ್ದ ಭೋಗಿಗಳಲ್ಲಿ ಬೆಂಕಿ ಆವರಿಸಿದ್ದು ಗಮನಕ್ಕೆ ಬಂದಾಗ ರೈಲಿನಲ್ಲಿದ್ದ ಲಗೇಜ್‌ಗಳನ್ನು ಬಿಟ್ಟು ಕತ್ತಲೊಳಗೆ ನಿಧಾನಗತಿಯಲ್ಲಿ ಚಲಿಸುತ್ತಿದ್ದ ರೈಲಿನಿಂದ ಕೆಳಗಡೆ ಹಾರಿದ್ದು ನಮ್ಮ ಆತ್ಮವಿಶ್ವಾಸಕ್ಕೆ ಸಾಕ್ಷಿಯಾಗಿತ್ತು ಎಂದರು.
  ಅದೇರೀತಿ ಹನುಮೇಗೌಡಮರ್ಕಲ್, ಬಸನಗೌಡಮರ್ಕಲ್ ಅವರು ಅದೃಷ್ಟ ವಶಾತ್ ಪಾರಾಗಿಬಂದಿದ್ದು ನಿಟ್ಟುಸಿರು ಬಿಡುವಂತಾಗಿದೆ. ಕಣ್ಣೆದುರೆ ಅದೇಷ್ಟೊ ಜೀವಗಳು ಸಜೀವ ದಹನವಾಗಿದ್ದು ಮರೆಯುವಂತಿಲ್ಲ. ಮೂವರು ಸಾವಿನ ದವಡೆಯಿಂದ ಪಾರಾಗಿಬಂದ ಅದೃಷ್ಟವಂತರು ತಮ್ಮ ಅನುಭವ ಮಾಧ್ಯಮದ ಮುಂದೆ ಹಂಚಿಕೊಂಡರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.