ಬಿಆರ್ಜಿಎಫ್ ಯೋಜನೆಯಡಿ ಬಯಲು ರಂಗಮಂದಿರ ಉದ್ಘಾಟನೆ
ಸಿಂಧನೂರು: ತಾಲೂಕಿನ ಆರ್.ಎಚ್. ನಂ 2ರ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಆವರಣದಲ್ಲಿ ಜಿಪಂ.ನ ಬಿಆರ್ಜಿಎಫ್ ಯೋಜನೆಯಡಿ 2.46 ಲಕ್ಷ ಅನುದಾನದಲ್ಲಿ ನಿರ್ಮಾಣಗೊಂಡ ಬಯಲು ರಂಗ ಮಂದಿರವನ್ನು ಜಿಪಂ ಸದಸ್ಯೆ ಇಂದ್ರಮ್ಮ ಮಲ್ಲನಗೌಡ ಕನ್ನಾರಿ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಭಾರತದ ಭವ್ಯ ಸಂಸ್ಕೃತಿಗೆ, ಗ್ರಾಮೀಣ ಕಲೆಗಳನ್ನು ಉಳಿಸಿ- ಬೆಳೆಸಿಕೊಂಡು ಹೋಗಲು ಗ್ರಾಮೀಣ ಭಾಗದಲ್ಲಿ ಬಯಲು ರಂಗಮಂದಿರಗಳು ಅಗತ್ಯವಾಗಿದೆ. ಶಾಲಾ ಮಕ್ಕಳು ಹಾಗೂ ಗ್ರಾಮದ ಜನತೆ ಈ ರಂಗಮಂದಿರದ ಸದುಪಯೋಗ ಪಡೆಯಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷ ಪಂಪನಗೌಡ ಬಾದರ್ಲಿ, ಕಾಂಗ್ರೆಸ್ ಮುಖಂಡರಾದ ಮಲ್ಲನಗೌಡ ಕನ್ನಾರಿ, ಶಿವಬಸನಗೌಡ ಮೂಲಿಮನಿ, ವಲಿ ಗುತ್ತೇದಾರ, ತಾಪಂ ಸದಸ್ಯೆ ಹೇಮಲತಾ ಸರ್ಕಾರ, ಗ್ರಾಪಂ ಸದಸ್ಯರಾದ ಪಂಕಜ್, ಕೋಯಿ ಪಿಲ್ಲಿ, ಪೂಜಾರಿ ಜಗದೀಶ ಸ್ವಾಮಿ ಉಪಸ್ಥಿತರಿದ್ದರು.
ವಿತರಣೆ: ಇದೇ ವೇಳೆ 50ಕ್ಕೂ ಹೆಚ್ಚು ಫಲಾನುಭವಿಗಳಿಗೆ ಜಿಪಂ ಸದಸ್ಯೆ ಇಂದ್ರಮ್ಮ ಮಲ್ಲನಗೌಡ ಕನ್ನಾರಿ ಭಾಗ್ಯಲಕ್ಷ್ಮೀ ಬಾಂಡ್ಗಳನ್ನು ವಿತರಣೆ ಮಾಡಿದರು. ಸಿಡಿಪಿಒ ಹನುಮಂತಪ್ಪ ಓಲೇಕಾರ, ಮೇಲ್ವಿಚಾರಕಿ ನಿರ್ಮಲಾ ಅಂಗನವಾಡಿ ಕಾರ್ಯಕರ್ತೆಯರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

