ಉತ್ತಮ ವಿಜ್ಞಾನ ಶಿಕ್ಷಕ ಪ್ರಶಸ್ತಿಗೆ ಕರೆ
ರಾಯಚೂರು: ನಗರದ ಸೈನ್ಸ್ ಎಜುಕೇಷನ್ ಟ್ರಸ್ಟ್ ವತಿಯಿಂದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಗುಲ್ಬರ್ಗಾ ವಿಭಾಗದ 6 ಜಿಲ್ಲೆಗಳ ಪ್ರೌಢಶಾಲೆಗಳ ಹಾಗೂ ಪದವಿ ಪೂರ್ವ ಕಾಲೇಜುಗಳ ವಿಜ್ಞಾನ ಶಿಕ್ಷಕರಿಗೆ ಉತ್ತಮ ವಿಜ್ಞಾನ ಶಿಕ್ಷಕ ಪ್ರಶಸ್ತಿ ನೀಡಲು ಅರ್ಹರಿಂದ ಅರ್ಜಿ ಕರೆಯಲಾಗಿದೆ.
ಪ್ರತಿ ಜಿಲ್ಲೆಗೊಬ್ಬರಂತೆ ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳ ವಿಜ್ಞಾನ ಶಿಕ್ಷಕರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ವಿಜ್ಞಾನ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ತಮ್ಮ ಸ್ವವಿವರ, ಭಾವಚಿತ್ರ ಸೇರಿದಂತೆ ಮಾಡಿದ ಸಾಧನೆ ಕುರಿತ ದಾಖಲೆಯೊಂದಿಗೆ ವಿವರಗಳನ್ನು ಪ್ರೊ.ಸಿ.ಡಿ.ಪಾಟೀಲ್, ಕಾರ್ಯದರ್ಶಿ, ಸೈನ್ಸ್ ಎಜುಕೇಷನ್ ಟ್ರಸ್ಟ್, ಮಂತ್ರಾಲಯಂ ರಸ್ತೆ, ರಾಯಚೂರು ಇಲ್ಲಿಗೆ ಕಳಿಸಲು ಕೋರಲಾಗಿದೆ. ವಿವರಗಳನ್ನು ಕಳಿಸಲು ಫೆ.15 ಕಡೆಯ ದಿನವಾಗಿದ್ದು, ಫೆ.28ರಂದು ನಗರದ ವಿಜ್ಞಾನ ಕೇಂದ್ರದಲ್ಲಿ ನಡೆಯುವ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಟ್ರಸ್ಟ್ ನ ಕಾರ್ಯದರ್ಶಿ ಪ್ರೊ.ಸಿ.ಡಿ.ಪಾಟೀಲ್ ತಿಳಿಸಿದ್ದಾರೆ.
ಸಮುದಾಯ
ಪದಾಧಿಕಾರಿ ಆಯ್ಕೆ
ರಾಯಚೂರು: ಸಮುದಾಯ ರಾಯಚೂರು ಸಂಘಟನೆಯ ವಾರ್ಷಿಕ ಸಾಮಾನ್ಯ ಸಭೆ ಈಚೆಗೆ ನಡೆದು ಮುಂದಿನ ಎರಡು ವರ್ಷಗಳಿಗೆ ಹೊಸ ಸಮಿತಿಯನ್ನು ರಚಿಸಲಾಯಿತು.ಹೊಸ ಸಮಿತಿ ಅಧ್ಯಕ್ಷರಾಗಿ ವಿ.ಎನ್.ಅಕ್ಕಿ, ಉಪಾಧ್ಯಕ್ಷರಾಗಿ ಸುರೇಶ್ ಮತ್ತು ಪಿ.ಎನ್.ಕುಮಾರ್, ಕಾರ್ಯದರ್ಶಿಯಾಗಿ ರಾಜಶೇಖರ್, ಸಹಕಾರ್ಯದರ್ಶಿಯಾಗಿ ಉಮೇಶ್, ಖಜಾಂಚಿಯಾಗಿ ಶಿವಕುಮಾರಿ ಆಯ್ಕೆಗೊಂಡರು.ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಂಜಿನೇಯ್ಯ ಜಾಲಿಬೆಂಚಿ, ಚಿದಾನಂದ ಸಾಲಿ, ರಡ್ಡಿ ತಿಮ್ಮಯ್ಯ, ನವೀನ್ ಮತ್ತು ತಿಮ್ಮಣ್ಣ ಅವರನ್ನು ಆಯ್ಕೆ ಮಾಡಲಾಯಿತು. ಈ ಸಾಮಾನ್ಯ ಸಭೆಯಲ್ಲಿ ಸಂಘಟನೆಯ ಪೂರ್ವ ಅಧ್ಯಕ್ಷ ತಾಯಣ್ಣ ಯರಗೇರಾ, ಕರಿಯಪ್ಪ ಮಾಸ್ತರ್, ಮಲ್ಲನಗೌಡ ಇಂದುಪೂರ, ದೇವೇಂದ್ರಗೌಡ್ ಸೇರಿದಂತೆ ಅನೇಕರಿದ್ದರು.ಮಂಗಳೂರಿನಲ್ಲಿ ಫೆ.17 ಮತ್ತು 18ರಂದು ನಡೆಯುವ ಸಮುದಾಯ ರಾಜ್ಯ ಸಮ್ಮೇಳನಕ್ಕೆ ತೆರಳುವ ಐವರು ಪ್ರತಿನಿಧಿಗಳನ್ನು ಈ ಸಭೆಯಲ್ಲಿ ಆಯ್ಕೆ ಮಾಡಲಾಯಿತು.
ಶೇ.98 ಫಲಿತಾಂಶ
ಸಿಂಧನೂರು: ನಗರದ ಕನಕದಾಸ ಪದವಿ ಮಹಾವಿದ್ಯಾಲಯಕ್ಕೆ ಗುಲ್ಬರ್ಗ ವಿಶ್ವವಿದ್ಯಾಲಯದ ಬಿಕಾಂ 5ನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಶೇ.98ರಷ್ಟು ಫಲಿತಾಂಶ ಲಭಿಸಿದೆ.ಪರೀಕ್ಷೆಗೆ ಹಾಜರಾದ 36 ವಿದ್ಯಾರ್ಥಿಗಳಲ್ಲಿ 15 ಡಿಸ್ಟಿಂಕ್ಷನ್, 11 ಪ್ರಥಮ ದರ್ಜೆ, 9 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

