ರಾಯಚೂರು

ಮಾಸಾಶನ ನೀಡಿಕೆಗೆ ತಾಂಡಾ ನಿವಾಸಿಗಳ ಆಗ್ರಹ

Published On :

ಲಿಂಗಸ್ಗೂರು: ಸರ್ಕಾರದಿಂದ ನೀಡುವ ಮಾಸಾಶನ ಪುನಃ ಆರಂಭಿಸಬೇಕೆಂದು ಒತ್ತಾಯಿಸಿ ಅಖಿಲ ಭಾರತ ಬಂಜಾರ ಸೇವಾ ಸಂಘದ ನೇತೃತ್ವದಲ್ಲಿ ಗೋನವಾಟ್ಲ ತಾಂಡಾದ ನಿವಾಸಿಗಳು ತಹಸೀಲ್ದಾರ್ ರಾಮಣ್ಣ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಸರ್ಕಾರ ಬಡ ಫಲಾನುಭವಿಗಳನ್ನು ಗುರುತಿಸಿ ವೃದ್ಧಾಪ್ಯ, ಸಂಧ್ಯಾ ಸುರಕ್ಷಾ, ವಿಧವಾ, ಅಂಗವಿಕಲ ವೇತನ ನೀಡುತ್ತಿತ್ತು. ಆದರೆ ಕೆಲ ತಿಂಗಳಿಂದ ಏಕಾಏಕಿ ಸ್ಥಗಿತಗೊಳಿಸಲಾಗಿದ್ದು, ಇದರಿಂದ ಜೀವನ ನಡೆಸಲು ತೊಂದರೆಯಾಗಿದೆ. ಕೂಡಲೇ ಸ್ಥಗಿತಗೊಳಿಸಿದ ಮಾಸಾಶನ ಪುನಃ ಆರಂಭಿಸಿ ಫಲಾನುಭವಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.ಸಂಘದ ಅಧ್ಯಕ್ಷ ನೀಲೇಶ ಪವಾರ, ಪ್ರದಾನ ಕಾರ್ಯದರ್ಶಿ ಹುಲ್ಲಪ್ಪ ರಾಠೋಡ, ಮುಖಂಡರಾದ ಲಕ್ಷ್ಮಣ ರಾಠೋಡ, ಸಗರಪ್ಪ ರಾಠೋಡ, ಗೋಪಿಚಂದ, ರಾಮಚಂದ್ರ ರಾಠೋಡ, ಶಿವಾಜಿ ರಾಠೋಡ, ತಿಪ್ಪಣ್ಣ ಕುಂಬಾರ, ಕುಬೇರ ರಾಠೋಡ, ಡಾಕಪ್ಪ ನಾಯಕ, ನೀಲಪ್ಪ ಪವಾರ, ತಾರಾಸಿಂಗ್, ತಾರಿಬಾಯಿ, ಸೋಮಿಬಾಯಿ, ವಾಲಿಬಾಯಿ, ರಮಕಿಬಾಯಿ, ಚಾಂದಿಬಾಯಿ ಇದ್ದರು.

ಮುದಗಲ್: ಜಯಕರ್ನಾಟಕ ಕಾರ್ಯಾಲಯ ಉದ್ಘಾಟನೆ
ಮುದಗಲ್: ಪಟ್ಟಣದ ಲಿಂಗಸ್ಗೂರು ರಸ್ತೆಯ ಚರ್ಚ್ ಬಳಿ ಜಯ ಕರ್ನಾಟಕ ಸಂಘಟನೆಯ ಕಾರ್ಯಾಲಯ ಉದ್ಘಾಟಿಸಲಾಯಿತು.
ಕನ್ನಡ ಮಾತೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಸಂಘಟನೆಯ ಗೌರವಾಧ್ಯಕ್ಷ ಇಕ್ಬಾಲ್ ಜಮಿಂದಾರ ನೂತನ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಮನುಷ್ಯ ನೀರು, ರಸ್ತೆ, ಆರೋಗ್ಯ, ಶೌಚಾಲಯ, ಪಡಿತರ, ಶಿಕ್ಷಣ ಸೇರಿದಂತೆ ಇತರ ಮೂಲ ಸೌಲಭ್ಯ ಪಡೆಯಲು ಹೋರಾಟ ಅನಿವಾರ್ಯವಾಗಿದೆ.
ಆದ್ದರಿಂದ ರಾಜ್ಯದಲ್ಲಿ ಕನ್ನಡಪರ ಸಂಘಟನೆಗಳು ಅವಶ್ಯಕವಾಗಿವೆ ಎಂದರು.
ಜಯ ಕರ್ನಾಟಕ ತಾಲೂಕು ಘಟಕದ ಉಪಾಧ್ಯಕ್ಷ ಶರಣಬಸವ ಕರಡಿ, ಮುದಗಲ್ಲ ಘಟಕದ ಅಧ್ಯಕ್ಷ ಅನಿಲ ಕುಮಾರ ಪಾಟೀಲ್ ಸೇರಿದಂತೆ ಈಶಪ್ಪ ಚಲುವಾದಿ, ರವಿ, ವಿಶ್ವನಾಥ ಪಾಟೀಲ್, ಮೌನೇಶ ಚಲುವಾದಿ, ನಾಗರಾಜ ರುಮಾಲದ್, ಬಸವರಾಜ ಸೇರಿದಂತೆ ಉದ್ಘಾಟನಾ ಸಂದರ್ಭದಲ್ಲಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.