ರಾಯಚೂರು

ಬಿಗಿ ಭದ್ರತೆ ನಡುವೆ ಕಾಲೇಜು ಕಟ್ಟಡ ಉದ್ಘಾಟನೆ

Published On :

ಮುದಗಲ್: ಪಟ್ಟಣದಲ್ಲಿ ಶ್ರೀಮತಿ ಪದ್ಮಾವತಿಬಾಯಿ ರಾಘವೇಂದ್ರರಾವ್ ದೇಶಪಾಂಡೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡವನ್ನು ಪೋಲೀಸರ ಸರ್ಪಗಾವಲಿನ ಮಧ್ಯೆ ಲಿಂಗಸಗೂರು ಕ್ಷೇತ್ರದ ಶಾಸಕ ಮಾನಪ್ಪ ವಜ್ಜಲ ಉದ್ಘಾಟಿಸಿದರು.
ವೈದ್ಯ ಡಾ. ಜಿ.ಆರ್. ದೇಶಪಾಂಡೆ ಯವರು 3 ಎಕರೆ ಭೂಮಿಯನ್ನು ದಾನ ನೀಡಲಾಗಿತ್ತು. ನಂತರ 1 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿತಗೊಂಡು ಉದ್ಘಾಟನೆಗೆ ಭೂ ದಾನಿಗಳಿಗೆ ಸ್ಥಾನಮಾನ ನೀಡಿಲ್ಲವೆಂದು ಗುಸು ಗುಸು ಸುದ್ದಿ ಹರಡಿತ್ತು.  ಈ ಹಿನ್ನೆಲೆಯಲ್ಲಿ ಕಾಲೇಜಿನ ಸಿಬ್ಬಂದಿ ವರ್ಗಕ್ಕೆ, ಪಟ್ಟಣದ ಗಣ್ಯರಿಗೆ ಮಾತಿನ ಚಕಮಕಿ ಕೂಡ ನಡೆದಿತ್ತು. ಇದರಿಂದ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆ ನೂತನ ಕಟ್ಟಡದ ಮುಂದೆ ಡಿವೈಎಸ್‌ಪಿ ಸೂರ್ಯವಂಶಿ ನೇತೃತ್ವದಲ್ಲಿ, ಇಬ್ಬರು ಸಿಪಿಐ, ಇಬ್ಬರು ಪಿಎಸ್‌ಐ, ಪೊಲೀಸ್ ಸಿಬ್ಬಂದಿ ಮತ್ತು 1 ಡಿಆರ್ ತುಕಡಿ ಒಳಗೊಂಡು ಬಂದೋಬಸ್ತ್ ಏರ್ಪಡಿಸಲಾಗಿತ್ತು.  ಏತನ್ಮಧ್ಯೆ ಭೂ ದಾನಿಗಳು ಅಸಮಾಧಾನಗೊಂಡ ಸುದ್ದಿ ತಿಳಿಯುತ್ತಿದ್ದಂತೆ ಶಾಸಕ ಮಾನಪ್ಪ ವಜ್ಜಲರವರು ದೂರವಾಣಿ ಮೂಲಕ ಮಾತನಾಡಿ, ಸಂಧಾನಕಾರರಾಗಿ ಮತ್ತು ಆಹ್ವಾನಿತರನ್ನಾಗಿ ಕಾಲೇಜು ಪ್ರಾಚಾರ್ಯ ಬಸವರಾಜ ಮತ್ತು ಎಪಿಎಂಸಿ ಉಪಾಧ್ಯಕ್ಷ ಎಸ್.ಆರ್. ರಸೂಲರವರನ್ನು ಕಳಿಸಿ ಮಾತುಕತೆ ನಡೆಸಿ ಭೂದಾನಿ ಡಾ. ಜಿ.ಆರ್. ದೇಶಪಾಂಡೆ, ಸಹೋದರರು, ಕುಟುಂಬ ಪರಿವಾರದವನ್ನು ವೇದಿಕೆಗೆ ಬರುವಂತೆ ಮಾಡಿ ಅವರೆಲ್ಲರನ್ನೂ ಕಾರ್ಯಕ್ರಮದ ವೇದಿಕೆಯಲ್ಲಿ ಸನ್ಮಾನಿಸುವ ಮೂಲಕ ನಿನ್ನೆಯಿಂದ ಇದ್ದ ಉಹಾಪೋಹಕ್ಕೆ ತೆರೆ ಎಳೆದಂತಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.