ರಾಯಚೂರು

ವಿದ್ಯುತ್ ಗುತ್ತೇದಾರರ ಸಂಘದ ಪದಾಧಿಕಾರಿಗಳು

Published On :

ಸಿಂಧನೂರು: ರಾಯಚೂರು ಜಿಲ್ಲಾ ವಿದ್ಯುತ್ ಗುತ್ತೇದಾರರ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಜಿಲ್ಲಾ ಗುತ್ತಿಗೆದಾರರ ಸಂಘದ ಕಾರ್ಯಾಲಯದ ಆವರಣದಲ್ಲಿ ಜಿಲ್ಲಾ ಸಮಿತಿ ಅಧ್ಯಕ್ಷರಾದ ದೇವೇಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ಆಯ್ಕೆ ಪ್ರಕ್ರಿಯೆ ಜರುಗಿತು.
ನೂತನ ಜಿಲ್ಲಾಧ್ಯಕ್ಷರಾಗಿ ಶಿವಶಂಕ್ರಪ್ಪಗೌಡ ಮಠಮಾರಿ(ರಾಯಚೂರು) ಉಪಾಧ್ಯಕ್ಷರಾಗಿ ವಿರುಪಣ್ಣ ದೇವರಗುಡಿ(ಸಿಂಧನೂರ) ಪ್ರಧಾನ ಕಾರ್ಯದರ್ಶಿಗಳಾಗಿ ನರಸಿಂಹಲು(ರಾಯಚೂರು), ಸಂಘಟನಾ ಕಾರ್ಯದರ್ಶಿಗಳಾಗಿ ಅನ್ವರ ಮಿಯ್ಯಾ(ಸಿಂಧನೂರು) ಸಹಕಾರ್ಯದರ್ಶಿ ನಾಗರೆಡ್ಡಿ(ಲಿಂಗಸ್ಗೂರು) ಮತ್ತು ಖಜಾಂಚಿಯಾಗಿ ಸುದರ್ಶನ(ರಾಯಚೂರು) ಅವಿರೋಧವಾಗಿ ಆಯ್ಕೆಯಾದರು.
ಕೇಂದ್ರ ಸಮಿತಿಯ ಜಂಟಿ ಕಾರ್ಯದರ್ಶಿ ಜಿ.ರುದ್ರೇಶ, ಗೌರವ ಕೇಶಾಧ್ಯಕ್ಷರಾಗಿ ಕೆ.ಶಾಮಸುಂದರ, ಖಜಾಂಚಿ ಡೈರಿ ಕಮಿಟಿಯ ಎಸ್.ಚಂದ್ರಶೇಖರ, ಜೆಸ್ಕಾಂ ಪ್ರತಿನಿಧಿ ಬಿ.ಆರ್. ಮಾಲಿಪಾಟೀಲ್ ಇತರರು ಇದ್ದರು.
---
ಮಸ್ಜೀದ್-ಏ-ಉಸ್ಮಾನಿಯ ಮಸೀದಿ ಉದ್ಘಾಟನೆ
ಸಿಂಧನೂರು: ನಗರದ ಮಹೆಬೂಬಿಯಾ ಕಾಲೋನಿ ವಾರ್ಡ್ 19ರಲ್ಲಿ ಮಸ್ಜೀದ್-ಏ-ಉಸ್ಮಾನಿಯ ಮಸೀದಿ ಉದ್ಘಾಟನೆ ಕಾರ್ಯಕ್ರಮ ಜರುಗಿತು.
ಗಂಗಾವತಿಯ ಜನಾಬ ಮೌಲಾನಾ ಮುಫ್ತಿ ಮಹ್ಮದ್ ಅಫ್ಜಲ್ ಹುಸೇನ್ ಖಾಸ್ಮಿ ಮೊಹತಮಿಮ್ ಮದೀನತುಲ್- ಉಲೂಮ್ ಅವರು ನೂತನ ಮಸೀದಿಯನ್ನು ಉದ್ಘಾಟಿಸಿದರು. ಇಶಾ ನಮಾಜ್‌ದೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು.
ಜನಾಬ್ ಹಾಜಿ ಮಸ್ತಾನ್, ಜನಾಬ್ ವಲಿಸಾಬ ಮಿಟ್ಟಿಮನಿ, ಜನಾಬ ಸೈಯದ್ ಜಬೀರ್ ಖಾದ್ರಿ, ಜನಾಬ ಫರೀದ್‌ಸಾಬ ಚೌದರಿ, ಜನಾಬ ನೂರ್ಖಾನ್ ಸಾಮೀಲ್, ಜನಾಬ ಸೈಯದ್ ಶಂಷುದ್ದೀನ್ ಖಾದ್ರಿ, ಜನಾಬ ಆಲಂಸಾಬ ಗುಜರಿ, ಜನಾಬ ಮಹ್ಮದ್ ಮಸ್ತಾಫಾ ಜುವೆಲರ್ಸ್ ಸೇರಿದಂತೆ ನಗರದ ಸಮಾಜದ ಗಣ್ಯರು, ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.