ರಾಯಚೂರು

ಊಟಕ್ಕೆ ನುಗ್ಗಿದವರಿಗೆ ಲಾಠಿ ರುಚಿ

Published On :

ರಾಯಚೂರು: ನಗರದ ಹೊರವಲಯದ ಏಳುಮೈಲ್ ಕ್ರಾಸ್ ಬಳಿ ಬುಧವಾರ ಆಯೋಜಿಸಿದ್ದ ಬಿಎಸ್ಸಾರ್ ಕಾಂಗ್ರೆಸ್ ಪಕ್ಷದ ಎಸ್ಸಿ- ಎಸ್ಟಿ ರಾಜ್ಯ ಸಮಾವೇಶ ಗೊಂದಲ, ಅವ್ಯವಸ್ಥೆಯ ಗೂಡಾಗಿ ಸಮಾವೇಶಕ್ಕೆ ಬಂದವರು ಪೊಲೀಸರಿಂದ ಲಾಠಿ ರುಚಿ ಅನುಭವಿಸಬೇಕಾಯಿತು.
ರಾಜ್ಯದ ವಿವಿಧೆಡೆಯಿಂದ ಸಮಾವೇಶದಲ್ಲಿ 70 ಸಾವಿರಕ್ಕೂ ಅಧಿಕ ಸಂಖ್ಯೆಯ ಎಸ್ಸಿ, ಎಸ್ಟಿ ಜನಾಂಗದವರು ಹಾಗೂ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು. ಪಕ್ಷದವರು 5 ಲಕ್ಷ ಜನರಿಗೆ ಊಟ ಮತ್ತಿತರೆ ವ್ಯವಸ್ಥೆ ಮಾಡಿದ್ದಾಗಿ ಹೇಳಿಕೊಂಡಿತ್ತು. ಆದರೆ ಸಮಾವೇಶದಲ್ಲಿ ಪಕ್ಷ ತಿಳಿಸಿದ್ದಕ್ಕಿಂತ ಕಡಿಮೆ ಜನತೆ ಬಂದಿದ್ದರೂ ಊಟಕ್ಕಾಗಿ ನೂಕು ನುಗ್ಗಲುಂಟಾಯಿತು.
ಲಘು ಲಾಠಿ ಪ್ರಹಾರ: ಬೆ. 11.30ಕ್ಕೆ ಆರಂಭಗೊಳ್ಳಬೇಕಿದ್ದ ಸಮಾವೇಶ ಆರಂಭಗೊಂಡಾಗ ಮಧ್ಯಾಹ್ನ 1ರ ಸಮಯ. ಆ ಹೊತ್ತಿಗಾಗಲೇ ಜನತೆ ಹಸಿವಿನಿಂದ ತತ್ತರಿಸಿ ಊಟಕ್ಕಾಗಿ ಏಕಕಾಲಕ್ಕೆ ಕೌಂಟರ್‌ಗಳತ್ತ ನುಗ್ಗಿದರು. ಇದರಿಂದ ಗೊಂದಲ ಉಂಟಾಗಿ ಪೊಲೀಸರು ಅನಿವಾರ್ಯವಾಗಿ ನೂಕುನುಗ್ಗಲು ನಿವಾರಿಸಲು ಲಘು ಲಾಠಿ ರುಚಿ ತೋರಿಸಬೇಕಾಯಿತು.
ಇದರಿಂದ ಊಟಕ್ಕೆ ಬಂದವರು ಸಿಕ್ಕಷ್ಟೇ ಸೈ ಎಂದು ಅಲ್ಲಿಂದ ಜಾಗ ಖಾಲಿ ಮಾಡಿದರು. ಇನ್ನೂ ಕೆಲವರು ಪೊಲೀಸರಿಂದ ಏಟು ತಿಂದೂ ಊಟ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಆದರೆ ಆ ವೇಳೆಗಾಗಲೇ ಅನೇಕರು ಊಟದ ಎಲ್ಲೆಯನ್ನು ಎಲ್ಲೆಡೆ ಚೆಲ್ಲಾಡಿದ್ದು ಕಂಡುಬಂದಿತು.
ಅವ್ಯವಸ್ಥೆ: ಉರಿ ಬಿಸಿಲಿನಲ್ಲಿಯೇ ಸಮಾವೇಶ ನಡೆದಿದ್ದರಿಂದ ಸಾಕಷ್ಟು ಕುಡಿವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಆದರೆ ಸಮಾವೇಶಕ್ಕೆ ಬಂದವರು ಸೂಕ್ತ ಆಸನದ ವ್ಯವಸ್ಥೆಯಿಲ್ಲದ್ದರಿಂದ ವೇದಿಕೆ ಮುಂಭಾಗದಲ್ಲಿ ಅಡ್ಡಲಾಗಿ ನಿಂತಿದ್ದರಿಂದ ಸಮಾವೇಶ ಗೊಂದಲ ಗೂಡಾಯಿತು.
ಸಂಚಾರಕ್ಕೂ ಅಡ್ಡಿ: ದಿನವಿಡೀ ಸಮಾವೇಶ ನಡೆದಿದ್ದರಿಂದ ಈ ವೇಳೆ ರಾಯಚೂರು- ಲಿಂಗಸ್ಗೂರು ಹೆದ್ದಾರಿಯಲ್ಲಿ ಬಸ್ ಸೇರಿದಂತೆ ಎಲ್ಲ ವಾಹನಗಳ ಸಂಚಾರಕ್ಕೆ ಭಾರೀ ಅಡಚಣೆಯಾಗಿ ಪ್ರಯಾಣಿಕರು ಹಿಡಿಶಾಪ ಹಾಕುತ್ತಲೇ ಪ್ರಯಾಣಿಸಿದ್ದು ಕಂಡುಬಂದಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.