ರಾಯಚೂರು

ಕರ್ತವ್ಯ ಲೋಪ: ಕ್ರಮಕ್ಕೆ ಆಗ್ರಹ

Published On :

ಸಿಂಧನೂರು: ತಾಲೂಕಿನ ತಿಡಿಗೋಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಚನ್ನವೀರಯ್ಯ, ನಿಸ್ಸಾರ್ ಅಹ್ಮದ್ ಅವರು ಬ್ರಿಟಿಷ್ ಕೌನ್ಸಿಲ್ ತರಬೇತಿ ಹೆಸರಿನಲ್ಲಿ ವೈಯಕ್ತಿಕ ಕೆಲಸಕ್ಕೆ ಹೋಗಿದ್ದಾರೆ ಎಂದು ಜೈ ಕರ್ನಾಟಕ ರಕ್ಷಣಾ ವೇದಿಕೆ ಆರೋಪಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ವೇದಿಕೆ ತಾಲೂಕು ಸಂಚಾಲಕ ಎಂ.ಪಂಪಾಪತಿ, ಬ್ರಿಟಿಷ್ ಕೌನ್ಸಿಲ್ ತರಬೇತಿಗೆ ಹೋಗಿರುವುದಾಗಿ ಇತರೆ ಶಿಕ್ಷಕರಿಗೆ ಹೇಳಿದ್ದಾರೆ. ಆದರೆ ಸಿಂಧನೂರಿನಲ್ಲಿ ತರಬೇತಿ ನಡೆಯುವ ಸ್ಥಳಕ್ಕೆ ಹೋಗಿ ನೋಡಿದರೆ ಚನ್ನವೀರಯ್ಯಸ್ವಾಮಿ ಮತ್ತು ನಿಸ್ಸಾರ್ ಅಹ್ಮದ್ ಇರಲಿಲ್ಲ. ಇವರ ಕರ್ತವ್ಯ ಲೋಪಕ್ಕೆ ಬಿ.ಆರ್.ಸಿ. ವಿರುಪಾಕ್ಷಪ್ಪ, ತರಬೇತಿ ಸಂಯೋಜಕ ರವೀಂದ್ರಗೌಡ ಸಹಕಾರ ನೀಡಿದ್ದಾರೆಂದು ಅವರು ಆಪಾದಿಸಿದ್ದಾರೆ. ತರಬೇತಿ ಹೆಸರಿನಲ್ಲಿ ವೈಯಕ್ತಿಕ ಕೆಲಸಕ್ಕೆ ಹೋಗಿ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿರುವ ಶಿಕ್ಷಕರನ್ನು ಸೇವೆಯಿಂದ ಅಮಾನತುಗೊಳಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಯನ್ನು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.