ಶೈಕ್ಷಣಿಕ ಯೋಜನೆ ಮುಟ್ಟಲು ಸಹಕಾರ ಅಗತ್ಯ
ಸಿಂಧನೂರು: ಶೈಕ್ಷಣಿಕ ಯೋಜನೆಗಳು ಸಮುದಾಯಕ್ಕೆ ಮುಟ್ಟಲು ಪ್ರತಿಯೊಬ್ಬರ ಸಹಕಾರ ಅಗತ್ಯ. ಹಾಗಾಗಿ ಸರ್ಕಾರದ ನಿಲುವು ಗಳಿಗೆ ನಾವೆಲ್ಲ ಬದ್ಧರಾಗಿ ಶೈಕ್ಷಣಿಕ ಪ್ರಗತಿಗೆ ಶ್ರಮಿಸಬೇಕು ಎಂದು ಬಿಆರ್ಸಿ ಕೇಂದ್ರದ ಸಮನ್ವಯಾಧಿಕಾರಿ ವಿರೂಪಾಕ್ಷಪ್ಪ ಎಂ. ಹುನುಗುಂದ ಹೇಳಿದರು.
ಸನ್ಮಾನ- ಜವಾಬ್ದಾರಿ: ಅವರು ನಗರದ ಪಿಡಬ್ಲ್ಯುಡಿ ಕ್ಯಾಂಪಿನ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಬಿಆರ್ಪಿ, ಸಿಆರ್ಪಿ, ಐಇಆರ್ಟಿ ಗಳಿಂದ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಅನುಷ್ಠನಾಧಿಕಾರಿಗಳು ಸಮರ್ಥವಾಗಿ ಕಾರ್ಯ ನಿರ್ವಹಿಸುವುದನ್ನು ಹಾಗೂ ಗುಣಮಟ್ಟದ ಶಿಕ್ಷಣಕ್ಕೆ ನೀಡಿದ ಸೇವೆಯನ್ನು ಪರಿಗಣಿಸಿ ಸರ್ಕಾರ, ತಾಲೂಕು ಆಡಳಿತ, ಸಂಘ-ಸಂಸ್ಥೆಗಳು ನೀಡಿವೆ. ಈ ಪ್ರಶಸ್ತಿಗಳಿಂದ ಬಿಆರ್ಸಿಗೆ ಖುಷಿ ತಂದಿದೆ. ಸತತ ಪರಿಶ್ರಮ, ಕೆಲಸದಲ್ಲಿನ ದಕ್ಷತೆ ಹಾಗೂ ಸಾಧನೆಯನ್ನು ಗುರುತಿಸಿ ನೀಡುವ ಸನ್ಮಾನಗಳಿಂದ ಜವಾಬ್ದಾರಿಗಳು ಹೆಚ್ಚಾಗುತ್ತವೆ ಎಂದರು.
ನಗರಸಭಾ ಮಾಜಿ ಸದಸ್ಯ ಸೈಯದ್ ವಲಿ ಮಿಟ್ಟಿಮನಿ ಮಾತನಾಡಿ, ತಮ್ಮ ಚಿಕ್ಕ ಸೇವೆಗೆ ಶಿಕ್ಷಣ ಇಲಾಖೆ ನೀಡಿದ ಸನ್ಮಾನದ ಕೊಡುಗೆಗೆ ತಾವು ಋಣಿ. ಶೌಚಾಲಯ, ಮೂತ್ರಾಲಯ ಹಾಗೂ ಬಿಆರ್ಸಿ ಕೇಂದ್ರಕ್ಕೆ ಮೆಟಲಿಂಗ್ ರಸ್ತೆಗಳನ್ನು ಮುಂಜೂರಿ ಮಾಡಿಸುವುದಾಗಿ ಭರವಸೆ ನೀಡಿದರು.
ಆಭಾರಿ: ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಂ. ವೃಷಬೇಂದ್ರಯ್ಯ ಮಾತನಾಡಿ, ಅನುಷ್ಠಾನಾಧಿಕಾರಿಗಳು ಸಾರ್ವಜನಿಕರ, ಸಮುದಾಯದ ಮೆಚ್ಚುಗೆಗೆ ಪಾತ್ರರಾಗಬೇಕು. ಅವರ ಮನಸ್ಸನ್ನು ಗೆಲ್ಲುವಂತಹ ಕೆಲಸಗಳನ್ನು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಮಾಡಬೇಕು. ಬಿಆರ್ಸಿ ವತಿಯಿಂದ ನೀಡಿದ ಸನ್ಮಾನಕ್ಕೆ ನಾನು ಆಭಾರಿಯಾಗಿದ್ದೇನೆ ಎಂದರು.
ಮುಖ್ಯಗುರು ಹನುಮನಗೌಡ, ಸಹ ಶಿಕ್ಷಕ ರಾಮರಾವ್ ಕುಲಕರ್ಣಿ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ ಹಿರೇಮಠ, ಸಿಆರ್ಪಿ ಬಸವರಾಜ ಬಿರಾದಾರ್ ಮಾತನಾಡಿದರು. ವೇದಿಕೆ ಮೇಲೆ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಆರ್.ನಾಗೇಂದ್ರರಾವ್, ದೈಹಿಕ ಶಿಕ್ಷಣಾಧಿಕಾರಿ ಎನ್.ಬಿ. ಕರಂಡಿ, ಬಿಇಒ ಕಚೇರಿ ವ್ಯವಸ್ಥಾಪಕ ವರಮೂರ್ತಿ, ಶಿಕ್ಷಣ ಸಂಯೋಜ ಕರಾದ ಬಾಲಪ್ಪ ದಾಸರ, ಹುಸೇನಪ್ಪ, ಸಂಗಪ್ಪ, ನಾಮದೇವ ರಾಠೋಡ್ ಇದ್ದರು.
ಉಪಸ್ಥಿತಿ: ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಬಸವರಾಜ ವಿ., ಶಿಕ್ಷಕರ ಸಂಘದ ಅಧ್ಯಕ್ಷ ವಿರೂಪಾಕ್ಷಬಾಬು ಪಾಟೀಲ, ಶಿಕ್ಷಕರ ಸಂಘದ ರಾಜ್ಯ ಕಾರ್ಯದರ್ಶಿ ರಾಜೇಂದ್ರಕುಮಾರ್, ಉಪಾಧ್ಯಕ್ಷ ಕೆ.ಮಲ್ಲಪ್ಪ, ಸಿದ್ದಲಿಂಗಪ್ಪ ಮುರಡಿ, ಭರತ್ ಕುಮಾರ್, ಬಸವರಾಜಸ್ವಾಮಿ, ಗುಂಡಪ್ಪ ತುರ್ವಿಹಾಳ, ಬಿ.ಆರ್.ಪಿ. ರವೀಂದ್ರ ಗೌಡ, ಮುಖ್ಯೋಪಾಧ್ಯಾಯರ ಸಂಘದ ಹುಲುಗಪ್ಪ, ಎಂ.ಬಿ. ದೊಡ್ಡಮನಿ, ಅನಂತರಾವ್, ಸಿ.ಆರ್.ಪಿ.-ಬಿ.ಆರ್.ಪಿ. ಸಂಘದ ಹನುಮಂತಪ್ಪ ಬಂಡಿವಡ್ಡರ್, ವೆಂಕಟರೆಡ್ಡಿ, ಸಂಗಯ್ಯ, ಅನುದಾನಿತ ಶಾಲಾ ಶಿಕ್ಷಕರ ಸಂಘದ ಗಂಗನಗೌಡ ಪ್ರೊ. ಪಾಟೀಲ, ಪಂಪಾಪತಿ ಗುಡದೂರು, ನಾಗಲಿಂಗನಗೌಡ, ಎಂ.ವಿಠಲ, ರಾಚ ನಗೌಡ, ವಿಶ್ವನಾಥರೆಡ್ಡಿ, ಬಿ. ಶಿವಕುಮಾರ, ಗುರುನಾಥರೆಡ್ಡಿ ಇದ್ದರು.
ಅಭಿನಂದನೆ: ಇದೇ ಸಂದರ್ಭದಲ್ಲಿ ಸೈಯದ್ ವಲಿ ಮಿಟ್ಟಿಮನಿ (ಬಿಆರ್ಸಿ ಕೇಂದ್ರಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸಿದ್ದಕ್ಕೆ) ಬಿ.ಇಒ ಜಿಎಮ್. ವೃಷಭೇಂದ್ರಯ್ಯ ಸ್ವಾಮಿ (ತಾಲೂಕು ಆಡಳಿತದಿಂದ ರಾಜ್ಯೋತ್ಸವ ಪ್ರಶಸ್ತಿ) ಬಿಆರ್ಪಿ ಮಲ್ಲಪ್ಪ ಬಾದರ್ಲಿ(ತಾಲೂಕು ಆಡಳಿತದಿಂದ ಶಿಕ್ಷಣ ಕ್ಷೇತ್ರದ ರಾಜ್ಯೋತ್ಸವ ಪ್ರಶಸ್ತಿ), ಐಇಆರ್ಟಿ ವೀರನಗೌಡ (ವಿಭಾಗ ಮಟ್ಟದ ಉತ್ತಮ ಐಇಆರ್ಟಿ), ಸಿಆರ್ಪಿ ವೀರೇಶ ಗೋನವಾರ (ಶಿಕ್ಷಕರ ಸಂಘದ ಉತ್ತಮ ಸಿಆರ್ಪಿ ಪ್ರಶಸ್ತಿ)ಗೆ ಭಾಜನರಾಗಿರುವುದಕ್ಕೆ ಅಭಿನಂದಿಸಲಾಯಿತು.
ಸಿಆರ್ಪಿ ಶ್ರೀನಿವಾಸಮೂರ್ತಿ ಪ್ರಾರ್ಥಿಸಿದರು. ಸಿಆರ್ಪಿ ರಾಮದಾಸ ಸ್ವಾಗತಿಸಿದರು. ಐಇಆರ್ಟಿ ಶಿವರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಐಇಆರ್ಟಿ ಬಸವರಾಜ ಅಂಗಡಿ ನಿರೂಪಿಸಿದರು. ಬಿಆರ್ಪಿ ಯಮನಪ್ಪ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

