ನಾಮಫಲಕ ತೆರವಿಗೆ ಆಗ್ರಹಿಸಿ ಮನವಿ
ರಾಯಚೂರು: ನಗರದ ಹರಿಜನವಾಡಾದ ಮಹಾಮಾತೆ ಕಂಚುಮಾರೆಮ್ಮ ದೇವಸ್ಥಾನದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಸಂತಕುಮಾರ್ ಅವರು ಸ್ಥಾಪಿಸಿರುವ ನಾಮಫಲಕ ತೆರವುಗೊಳಿಸುವಂತೆ ಡಾ. ಬಾಬು ಜಗಜೀವನರಾಂ ಯುವಕ ಸಂಘ ಆಗ್ರಹಿಸಿದೆ. ಈ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿರುವ ಸಂಘದವರು, ದೇವಸ್ಥಾನದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಅನೇಕರು ದಾನ ನೀಡಿದ್ದಾರೆ. ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಸಂತಕುಮಾರ್ ಅವರು ದೇವಸ್ಥಾನ ಕಮಿಟಿಗೆ ತಿಳಿಸದೇ ದೇವಸ್ಥಾನದ ಗೋಪುರವನ್ನು ನಿರ್ಮಿಸಿದ್ದಾರೆಂದು ದೂರಿದ್ದಾರೆ.
ಗೋಪುರ ನಿರ್ಮಿಸಿದ ನಂತರ ಅವರು ತಮ್ಮ ಹೆಸರಿರುವ ಕಲ್ಲಿನ ಫಲಕವನ್ನು ಗರ್ಭಗುಡಿಯ ಗೋಡೆ ತೆರವುಗೊಳಿಸಿ ಅಲ್ಲಿಯೇ ಸ್ಥಾಪಿಸಿದ್ದಾರೆ. ರಾಜಕೀಯ ದುರುದ್ದೇಶದಿಂದಲೇ ಅವರು ಈ ಕಾರ್ಯ ಕೈಗೊಂಡಿದ್ದು ಭಕ್ತಿಯ ಹೆಸರಿನಲ್ಲಿ ಮಾಡಿದ್ದಾಗಿ ಹೇಳುತ್ತಿದ್ದಾರೆ. ಸಂಘ-ಸಂಸ್ಥೆಗಳ ಗಮನಕ್ಕೆ ತರದೇ ಈ ಕಾರ್ಯ ಮಾಡಿದ್ದಾರೆಂದು ಆರೋಪಿಸಿದ್ದಾರೆ.
ಈ ಬಗ್ಗೆ ಫೆ.12ರಂದು ಪ್ರದೇಶದ ಎಲ್ಲರೂ ಚರ್ಚಿಸಿದ್ದರಿಂದ ತಮ್ಮ ಹಲ್ಲೆಗೆ ಮುಂದಾಗಿದ್ದ ಕೆಲವರು, ಜೀವ ಬೆದರಿಕೆಯೊಡ್ಡಿದ್ದಾರೆ. ಈ ಘಟನೆ ಬಗ್ಗೆ ಪೊಲೀಸರಿಗೆ ದೂರಲಾಗಿದ್ದು, ಜಿಲ್ಲಾಧಿಕಾರಿ ಮಧ್ಯಪ್ರವೇಶಿಸಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಹೆಸರಿರುವ ನಾಮಫಲಕನ್ನು ಕೂಡಲೇ ಅಲ್ಲಿಂದ ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಸಂಘದ ಗೌರವಾಧ್ಯಕ್ಷ ಕೆ. ಭೀಮರೆಡ್ಡಿ, ಅಧ್ಯಕ್ಷ ಎಂ.ಪಿ. ಶಿವಪ್ಪ, ಪ್ರಧಾನ ಕಾರ್ಯದರ್ಶಿ ಸಿ.ಎಂ. ವೀರೇಶ್ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

