ಸಿಂಧನೂರಲ್ಲಿ ಬೆಂಬಲ
ಸಿಂಧನೂರು: ಜೀವನಾಶ್ಯಕ ವಸ್ತುಗಳ ಬೆಲೆಯೇರಿಕೆಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿ ದೇಶದ್ಯಾಂತ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಬಂದ್ ಅಂಗವಾಗಿ ಸಿಂಧನೂರಿನಲ್ಲಿ ಬುಧವಾರ ನಗರದ ಎಲ್ಲ ಅಂಗಡಿ ಮುಂಗಟ್ಟುಗಳು ಬಂದ್ ಆಗಿ ಬಂದ್ ಯಶಸ್ವಿಯಾಯಿತು.
ಸಿಐಟಿಯು ಕಾರ್ಯಕರ್ತರು ಹಮಾಲಿ ಕಾರ್ಮಿಕರಿಗೆ ಖಾತ್ರಿಯಾದ ಪಿಂಚಣಿ, ಗುರುತಿನ ಚೀಟಿ ಸೇರಿದಂತೆ ಮೂಲ ಸೌಲಭ್ಯಗಳನ್ನು ನೀಡಬೇಕೆಂದು ಒತ್ತಾಯಿಸಿ ತಹಸೀಲ್ದಾರ್ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿದರು. ಇದಕ್ಕೂ ಮುನ್ನ ಗಾಂಧೀಜಿ ವೃತ್ತದಲ್ಲಿ ಪ್ರಧಾನಿ ಮನಮೋಹನ ಸಿಂಗ್, ಮುಖ್ಯಮಂತ್ರಿ ಶೆಟ್ಟರ್ ಅವರ ಪ್ರತಿಕೃತಿಯನ್ನು ಸಿಐಟಿಯು ತಾಲೂಕು ಕಾರ್ಯದರ್ಶಿ ನರಸಿಂಹಪ್ಪ ನೇತೃತ್ವದಲ್ಲಿ ದಹಿಸಿ ಪ್ರತಿಭಟಿಸಿದರು.
ಮುಖಂಡರಾದ ಎಚ್.ವಿ. ಗುಡಿ, ವೆಂಕಪ್ಪ ಕೆಂಗಲ್, ನಾರಾಯಣಪ್ಪ ಕಿಲ್ಲೇದ ಮತ್ತಿತರರು ಭಾಗವಹಿಸಿದ್ದರು. ಕೆಆರ್ಎಸ್ನ ತಾಲೂಕಾಧ್ಯಕ್ಷ ರಮೇಶ ಪಾಟೀಲ್, ನಾಗರಾಜ ಪೂಜಾರ ಮತ್ತಿತರರು ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.
ಬೆಂಬಲ: ಕಾರ್ಮಿಕ ಸಂಘಟನೆಗಳ ಮುಷ್ಕರಕ್ಕೆ ಬೆಂಬಲಿಸಿ ಫೆಡರೇಶನ್ ಆಫ್ ಕರ್ನಾಟಕ ಅಟೋ ರಿಕ್ಷಾ ಡ್ರೈವರ್ ಯೂನಿಯನ್, ಜಿಲ್ಲಾಧ್ಯಕ್ಷ ಶೇಕ್ಷಾಖಾದ್ರಿ ನೇತೃತ್ವದಲ್ಲಿ ತಹಸೀಲ್ದಾರರ್ ಮೂಲಕ ಪ್ರಧಾನಮಂತ್ರಿಗಳಿಗೆ ಮೂಲ ಸೌಲಭ್ಯಗಳಿಗೆ ಒತ್ತಾಯಿಸಿ ಮನವಿ ಸಲ್ಲಿಸಿದರು. ಈ ವೇಳೆ ರಾಜ್ಯ ಉಪಾಧ್ಯಕ್ಷ ಇ.ಬಸವರಾಜ, ಸಹ ಕಾರ್ಯದರ್ಶಿ ಎನ್.ಕರಣನ್, ಮುಖಂಡರಾದ ಬಾಬಾಜಾನಿ, ಅಶ್ರಫ್, ವಿಶ್ವನಾಥ ಸರ್ಕಾರ, ಸುರೇಶಸ್ವಾಮಿ, ಶಿವಕುಮಾರ, ಅಬೀದ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

