ರಾಯಚೂರು

ಸಮಸ್ಯೆಗೆ ವಿವೇಕಾನಂದರ ಚಿಂತನೆ ಪರಿಹಾರ

Published On :

ಸುರಪುರ: ಇಂದು ರಾಷ್ಟ್ರವನ್ನು ಕಾಡುತ್ತಿರುವ ಗಂಭೀರ ಸಮಸ್ಯೆಗಳಿಗೆ ವಿವೇಕಾನಂದರ ವಿಚಾರಧಾರೆ, ಚಿಂತನೆಗಳೇ ಪರಿಹಾರ. ದೇಶದ ಆಸ್ತಿಯಾಗಿರುವ ಯುವಶಕ್ತಿ ಸದಾ ಸದೃಢವಾಗಿರಬೇಕು. ಸಕಾರಾತ್ಮಕ ಗುಣದೊಂದಿಗೆ ಸನ್ಮಾರ್ಗದಲ್ಲಿ ಮುನ್ನಡೆಯಬೇಕೆಂಬುದು ವಿವೇಕಾನಂದರ ಆಶಯವಾಗಿತ್ತು. ಅಂತಹ ಮಹಾನ್ ಪುರಷನ ಜೀವನ, ಆದರ್ಶಗಳು ಇಂದಿನ ಯುವ ಪೀಳಿಗೆಗೆ ದಾರಿದೀಪ ಎಂದು ಸ್ವಾಮಿ ವಿವೇಕಾನಂದ ಜಯಂತ್ಯುತ್ಸವದ ರಾಜ್ಯ ಸಂಯೋಜಕ ಕೃಷ್ಣಾಜಿ ಹೇಳಿದರು.
 ದರ್ಬಾರ್ ಶಾಲೆಯ ಆವರಣದಲ್ಲಿ ಎಬಿವಿಪಿ ಹಮ್ಮಿಕೊಂಡಿದ್ದ ವಿವೇಕಾನಂದ ಮತ್ತು ನೇತಾಜಿ ಸುಭಾಶ್ಚಂದ್ರ ಜಯಂತಿ, ಬೃಹತ್ ಸಮಾವೇಶ ಮತ್ತು ಉಚಿತ ರಕ್ತದಾನ ಶಿಬಿರದ ನೇತೃತ್ವ ವಹಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಬೇಕು, ಸ್ವೇಚ್ಛಾಚಾರ ಬೇಡ: ಮಾನವ ಜೀವನದ ಮುಖ್ಯ ಧ್ಯೇಯಗಳೆಂದರೆ ವಿವೇಕ ಮತ್ತು ಆನಂದದ ಬದುಕು. ಮನುಷ್ಯನಿಗೆ ಸ್ವಾತಂತ್ರ್ಯ ಬೇಕು. ಆದರೆ ಸ್ವೇಚ್ಛಾಚಾರ ಖಂಡಿತ ಬೇಡ. ಕೆಲವರು ಜೀವನವನ್ನು ಅಳತೆಗೋಲಿನಿಂದ ಅಳೆಯುತ್ತಾರೆ. ಇದರಿಂದ ಭಿನ್ನವಾಗಿದ್ದ ಕಾರಣದಿಂದಲೇ ವಿವೇಕಾನಂದರ ಜೀವನ ಯುವಜನರಿಗೆ ಆದರ್ಶವಾಗಲು ಕಾರಣ ಎಂದು ಹೇಳಿದರು.
 ಯುವಜನರು ವಿವೇಕಾನಂದರ ತತ್ವಾದರ್ಶಗಳನ್ನು ಕಿಂಚಿತ್ತಾದರೂ ಆಚರಣೆಗೆ ತಂದು ದೇಶವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡಸುವ ಕೆಲಸ ಮಾಡಬೇಕೆಂದರು. ಆರೆಸ್ಸೆಸ್ ರಾಜ್ಯ ಮುಖಂಡ ವಿ.ಭೀಮರಾವ, ನೇತಾಜಿ ಸುಭಾಶ್ಚಂದ್ರ ಬೋಸ್ ಕುರಿತು ಮಾತನಾಡಿದರು. ಹುಣಸಿಹೊಳೆ ಕಣ್ವ ಮಠದ ವಿದ್ಯಾಭಾಸ್ಕರ ತೀರ್ಥರು ಸಮಾವೇಶ ಉದ್ಘಾಟಿಸಿದರು. ತಿಂಥಣಿ ಕನಕ ಗುರು ಪೀಠದ ಸಿದ್ದರಾಮಾನಂದಪುರಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಗೋಲಪಲ್ಲಿ ವಾಲ್ಮೀಕಿ ಪೀಠಾಧ್ಯಕ್ಷ ವರದಾನೇಶ್ವರ ಶ್ರೀಗಳು ಆಶೀರ್ವಚನ ನೀಡಿದರು. ಟಿಎಚ್‌ಒ ಡಾ. ಆರ್.ವಿ. ನಾಯಕ, ಸಂದೀಪ ಪಾಟೀಲ್, ಗಂಗಾಧರ ನಾಯಕ ಅರಳಹಳ್ಳಿ ವೇದಿಕೆಯಲ್ಲಿದ್ದರು. ಎಬಿವಿಪಿ ಜಿಲ್ಲಾ ಪ್ರಮುಖ ಉಪೇಂದ್ರನಾಯಕ ಸುಬೇದಾರ ಪ್ರಾಸ್ತಾವಿಕ ಮಾತನಾಡಿದರು.
ರಕ್ತದಾನ ಶಿಬಿರ: ಇದೇ ವೇಳೆ ರಕ್ತದಾನ ಶಿಬಿರ ಜರುಗಿತು. ಸುಮಾರು 80 ಯುವಕರು ರಕ್ತದಾನ ಮಾಡಿದರು. ಮುಖಂಡರಾದ ಚೆನ್ನಮಲ್ಲಪ್ಪ ಪಾಟೀಲ್, ಪ್ರಹ್ಲಾದರಾವ ಕುಳಗೇರಿ, ಬಸವರಾಜ ನಿಷ್ಠಿ ದೇಶಮುಖ್, ಡಾ.ನಾಗನಾಥ, ಡಾ.ಹರ್ಷವರ್ಧನ ರಫಗಾರ್, ರಾಮುನಾಯಕ ಅರಳಹಳ್ಳಿ, ಮೌನೇಶನಾಯಕ ಡೊಣ್ಣಿಗೇರಿ, ಸಂತೋಷ, ಶರಣುನಾಯಕ, ಲಕ್ಷ್ಮಣ ಪ್ಯಾಪಲಿ, ಮೌನೇಶ ನಾಯಕ, ಕುಮಾರನಾಯಕ, ಶ್ರವಣಕುಮಾರ, ಕೋಟ್ರೇಶ್, ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಇದ್ದರು. ಮೌನೇಶ ದೇವರಗೋನಾಲ ಪರಿಚಯಿಸಿದರು. ಲಕ್ಷ್ಮೀಕಾಂತ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.