ವಿವೇಕಾನಂದರು ಯುವಕರ ಕಣ್ಮಣಿ: ಸ್ವಾಮೀಜಿ
ಸಿಂಧನೂರು: ವೀರ ಸನ್ಯಾಸಿಯಾಗಿ, ಆಧ್ಯಾತ್ಮದಲ್ಲಿ ಅಪಾರ ಸಾಧನೆ ಮಾಡಿ, ಸರಳ ಜೀವನ ಸಾಗಿಸಿ ಯುವಕರ ಕಣ್ಮಣಿ ವಿವೇಕಾನಂದರು ಯುವಜನತೆಗೆ ಆದರ್ಶಪ್ರಾಯ ಎಂದು ಕೊಪ್ಪಳದ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಚೈತನ್ಯಾನಂದ ಸ್ವಾಮೀಜಿ ಹೇಳಿದರು.
ನಗರದ ಕೋಟೆ ಕಲ್ಯಾಣ ಮಂಟಪದಲ್ಲಿ ಸಿಂಧನೂರಿನ ವಿವೇಕಾನಂದ ಗ್ರಾಮೀಣ ಹಾಗೂ ನಗರಾಭಿವೃದ್ಧಿ ಸಂಸ್ಥೆ, ತಾಲೂಕ ಕಸಾಪ, ಸಾಧನಾ ಸಂಸ್ಥೆ, ಹಾಗೂ ರಾಯಚೂರಿನ ಸ್ಪಂದನಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದರ 150ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸಿ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಆದರ್ಶ ನಾಯಕ: ಸಮಾರಂಭದ ನೇತೃತ್ವ ವಹಿಸಿದ್ದ ಅರಳಹಳ್ಳಿಯ ರಾಜರಾಜೇಶ್ವರಿ ಬೃಹನ್ಮಮಠದ ಗವಿಸಿದ್ದೇಶ್ವರ ತಾತ ಮಾತನಾಡಿ, ಯುವಶಕ್ತಿಯಿಂದ ಒಳ್ಳೆ ರಾಷ್ಟ್ರ ನಿರ್ಮಾಣದ ಕಾರ್ಯವಾಗಬೇಕು. ಯುವಕರು ದುಶ್ಚಟಗಳಿಂದ ದೂರಾಗಿ, ವಿವೇಕಾನಂದರನ್ನು ತಮ್ಮ ಆದರ್ಶ ನಾಯಕರನ್ನಾಗಿ ಮಾಡಿಕೊಂಡು ಸಮುದಾಯದ ಪ್ರಗತಿಗೆ ಸಹಕರಿಸಬೇಕೆಂದು ಹೇಳಿದರು. ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಗುಲ್ಬರ್ಗ ವಿಭಾಗದ ಕನಕ ಗುರುಪೀಠದ ಸಿದ್ದರಾಮಾನಂದ ಪುರಿ ಸ್ವಾಮಿ ಮಾತನಾಡಿದರು.
ಕಸಾಪ ತಾಲೂಕಾಧ್ಯಕ್ಷೆ ರಮಾದೇವಿ ಶಂಭೋಜಿ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳಿಗೆ ವಿವೇಕಾನಂದರ ಬಗ್ಗೆ ಹೆಚ್ಚಿನ ತಿಳಿವಳಿಕೆ ಬರಲಿ ಎಂದು ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತೆಂದರು.
ಸಮಾಜಮುಖಿ ವ್ಯಕ್ತಿತ್ವ: ಕಸಾಪ ಜಿಲ್ಲಾ ಕಾರ್ಯದರ್ಶಿ ಎಸ್. ದೇವೇಂದ್ರಗೌಡ ಮಾತನಾಡಿ, ವಿವೇಕಾನಂದರ ಕುರಿತು ಪ್ರಕಟವಾದ ಎಲ್ಲ ಪುಸ್ತಕಗಳು ಅವರ ಸಮಾಜಮುಖಿ ವ್ಯಕ್ತಿತ್ವವನ್ನು ತೋರಿಸುತ್ತದೆ ಎಂದರು. ಈಶ್ವರಿ ವಿಶ್ವವಿದ್ಯಾಲಯದ ಸಂಚಾಲಕಿ ಪಾರ್ವತಿ ಅಕ್ಕ, ಸಮಾಜ ಕಲ್ಯಾಣಾಧಿಕಾರಿ ಕೆ.ನಾಗರಾಜ, ಸಮಾರಂಭವನ್ನುದ್ದೇಶಿಸಿ ಮಾತನಾಡಿದರು. ಕ.ಸಾ.ಪ. ಜಿಲ್ಲಾ ಗೌರವಾಧ್ಯಕ್ಷ ಎಸ್.ಶರಣೇಗೌಡ, ಸಿಡಿಪಿಒ ಹನುಮಂತಪ್ಪ ಓಲೇಕಾರ, ನಿವೃತ್ತ ಶಿಕ್ಷಕ ಎಚ್.ಧರಯ್ಯ, ಬಿಆರ್ಪಿ ಮಲ್ಲಪ್ಪ ಬಾದರ್ಲಿ, ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಎಂ. ವೀರೇಶ ಯರದಿಹಾಳ, ಕುಮಾರಿ ಶ್ರದ್ಧಾ ಜೈನ್, ವಿವೇಕಾನಂದ ಗ್ರಾಮೀಣ ಹಾಗೂ ನಗರಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಶೇಖರಗೌಡ ಬಾದರ್ಲಿ, ಸ್ಪಂದನಾ ಸಂಸ್ಥೆಯ ರಾಯಚೂರು ಅಧ್ಯಕ್ಷ ಎನ್. ಕೃಷ್ಣಮೂರ್ತಿ ಶೆಟ್ಟಿ ಉಪಸ್ಥಿತರಿದ್ದರು. ಕಸಾಪ ಸದಸ್ಯ ಶಿವರಾಜ ಮುರಣಿ ಸ್ವಾಮಿ ವಿವೇಕಾನಂದರ ಕುರಿತು ಏರ್ಪಡಿಸಿದ್ದ ರಸಪ್ರಶ್ನೆ ಸ್ಪರ್ಧೆ ನಡೆಸಿಕೊಟ್ಟರು. ನಗರಸಭೆ ಸದಸ್ಯರಾದ ಸರಸ್ವತಿ ಪಾಟೀಲ, ಶೈಲಜಾ ಷಡಕ್ಷರಪ್ಪ ನಾಗಲಾಪುರ, ಶರಣಪ್ಪ ತೆಂಗಿನಕಾಯಿ, ಕಸಾಪ ದತ್ತಿ ದಾನಿಗಳಾದ ಕೆ.ಚಂದ್ರಕಲಾ, ನಾಗರತ್ನ ಬಂಗಾರಶೆಟ್ಟಿ, ಸಂಗೀತಾ ಯುವತಿ ಮಂಡಳಿಯ ಗಂಗೂಬಾಯಿ, ಬಸಮ್ಮ ತಾಳಿಕೋಟಿ, ಸಾಹಿತಿ ಬೀರಪ್ಪ ಶಂಭೋಜಿ ಪಾಲ್ಗೊಂಡಿದ್ದರು.
ವಿವಿಧ ಸ್ಪರ್ಧೆಗಳ ವಿಜೇತರು: ಸ್ವಾಮಿ ವಿವೇಕಾನಂದರ 150ನೇ ಜನ್ಮದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ವೇಷಭೂಷಣ ಸ್ಪರ್ಧೆಯಲ್ಲಿ ಉಪ್ಪಾರವಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿ ಪ್ರತಾಪ ಪ್ರಥಮ ಸ್ಥಾನ ಪಡೆದುಕೊಂಡರು. ಸ್ಥಳದಲ್ಲೇ ಸ್ವಾಮಿ ವಿವೇಕಾನಂದರ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ದುದ್ದುಪುಡಿ ಪ್ರೌಢಶಾಲೆ ಉಜ್ವಲ್ ಡಿ. ಪ್ರಥಮ, ಕನಕದಾಸ ಪ್ರೌಢಶಾಲೆಯ ಬೀರಪ್ಪ ದ್ವಿತೀಯ, ದುದ್ದುಪುಡಿ ಪ್ರೌಢಶಾಲೆ ಶ್ರವ್ಯ ತೃತೀಯ ಬಹುಮಾನ ಪಡೆದುಕೊಂಡರು. ಕಾಲೇಜು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದರ ನುಡಿಮುತ್ತುಗಳನ್ನು ಬರೆಯುವ ಸ್ಪರ್ಧೆಯಲ್ಲಿ ನ್ಯಾಷನಲ್ ಕಾಲೇಜಿನ ಶ್ರೀನಿವಾಸ ಪ್ರಥಮ, ಸರ್ಕಾರಿ ಶಿಕ್ಷಕರ ತರಬೇತಿ ಸಂಸ್ಥೆ ಸಿದ್ದಮ್ಮ ಹಾಗೂ ಕನಕದಾಸ ಪಪೂ ಕಾಲೇಜಿನ ಕೆಂಚಪ್ಪ ದ್ವಿತೀಯ, ಸಂಕೇತ ಕಾಲೇಜಿನ ಅಶೋಕ ಪ್ರಹ್ಲಾದ ತೃತೀಯ ಸ್ಥಾನ ಗಳಿಸಿ ಬಹುಮಾನ ಪಡೆದುಕೊಂಡರು.
ಸನ್ಮಾನ: ಯುವಜನ ಸೇವೆ ಹಾಗೂ ಕ್ರೀಡಾ ಇಲಾಖೆಯಿಂದ ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿಗೆ ಭಾಜನರಾಗಿರುವ ರುದ್ರಗೌಡ ಯುವಕ ಮಂಡಳಿ ಸದಸ್ಯ ಎಂ. ವೀರೇಶ ಯರದಿಹಾಳ, ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಪ್ರಥಮ ರ್ಯಾಂಕ್ ಪಡೆದಿರುವ ಪ್ರಿಯಾಂಕ ಜೈನ್ ಪರವಾಗಿ ಅವರ ಸಹೋದರಿ ಶ್ರದ್ಧಾ ಜೈನ್ ಅವರನ್ನು ಸನ್ಮಾನಿಸಲಾಯಿತು. ಸಿದ್ದಮ್ಮ ಸಂಗಡಿಗರು ಪ್ರಾರ್ಥಿಸಿದರು. ಸಾಧನಾ ಸಂಸ್ಥೆ ಕಾರ್ಯದರ್ಶಿ ಶರಣಪ್ಪ ಬರಸಿ ಸ್ವಾಗತಿಸಿದರು. ನ್ಯಾಯವಾದಿ ಎಚ್. ಬಸವರಾಜ ವಂದಿಸಿದರು. ಗೌರವ ಕಾರ್ಯದರ್ಶಿ ವೀರೇಶ ಗೋನವಾರ ಕಾರ್ಯಕ್ರಮ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

