ರಾಯಚೂರು

ಶಿಕ್ಷಣದಿಂದ ಸಮಾಜದ ಅಭಿವೃದ್ಧಿ ಸಾಧ್ಯ: ಪಾಟೀಲ್

Published On :




ದೇವದುರ್ಗ: ಶಿಕ್ಷಣದಿಂದಲೇ ಸಮಾಜದ ಅಭಿವೃದ್ಧಿ ಸಾಧ್ಯವಾಗಿದ್ದು, ಪ್ರತಿಯೊಬ್ಬರೂ ಶಿಕ್ಷಣ ಪಡೆಯುವತ್ತ ಆಸಕ್ತಿ ತೋರುವಂತೆ ಗುಲ್ಬರ್ಗ ವಿಭಾಗದ ಪ್ರಾದೇಶಿಕ ಸಾರಿಗೆ ಆಯುಕ್ತ ಶಿವರಾಜ ಪಾಟೀಲ್ ಕರೆ ನೀಡಿದರು.
ಅವರು ಇತ್ತೀಚೆಗೆ ಮಹರ್ಷಿ ವಾಲ್ಮೀಕಿ ವಿದ್ಯಾಸಂಸ್ಥೆಯ 18ನೇ ಶಾಲಾ ವಾರ್ಷಿಕೋತ್ಸವ ಮತ್ತು ಪಾಲಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ, ತಾಲೂಕು ಶೈಕ್ಷಣಿಕವಾಗಿ ತೀರಾ ಹಿಂದುಳಿದಿದ್ದು ಇಲ್ಲಿನ ಖಾಸಗಿ ಶಿಕ್ಷಣ ಸಂಸ್ಥೆಗಳು ಶ್ರಮ ವಹಿಸುವ ಮೂಲಕ ಶೈಕ್ಷಣಿಕ ಪ್ರಗತಿಗೆ ಕಾರ್ಯನಿರ್ವಹಿಸುತ್ತಿವೆ ಎಂದರು.
ಸಾನ್ನಿಧ್ಯವನ್ನು ಶಿಖರಮಠದ ಕಪಿಲ ಸಿದ್ದರಾಮೇಶ್ವರ ಶಿವಾಚಾರ್ಯ ವಹಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಶ್ರೀಧರ, ಸಂಸ್ಥೆಯ ಅಧ್ಯಕ್ಷ ಅಯ್ಯನಗೌಡ ಮಾಲಿಪಾಟೀಲ್ ಗಲಗ, ಕೆಪಿಟಿಸಿಎಲ್ ದಂಡಪ್ಪ, ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಮಲ್ಲಯ್ಯ, ಪಿಎಸ್ಸೈ ಆರ್.ಎಂ. ನದಾಫ್ ಮಾತನಾಡಿದರು. ಮುಖ್ಯಗುರು ಜಿ.ಭೀಮಣ್ಣ, ನಾಗರಾಜ ಮೇಟಿಗೌಡ್ರ, ಮಹೇಶ ಮಾನಸಗಲ್, ಸುರೇಶ ಪಾಟೀಲ್, ಶಿವರಾಜ ದೇವತಗಲ್, ಶ್ರೀದೇವಿ ಸಾಕಾ, ಅಂಬಿಕಾ, ಅನಿತಾ, ಕುಮಾರಿ ಮಂಜುಳಾ, ಪತ್ರಕರ್ತರ ಸಂಘದ ಅಧ್ಯಕ್ಷ ವೆಂಕಟೇಶ ನೀಲಗಲ್ ಉಪಸ್ಥಿತರಿದ್ದರು.
ಮಾದಿಗ ದಂಡೋರಾ ಪದಾಧಿಕಾರಿಗಳು
ರಾಯಚೂರು: ತಾಲೂಕಿನ ಜಂಬಲದಿನ್ನಿ ಗ್ರಾಪಂ ವ್ಯಾಪ್ತಿಯ ಮಾದಿಗ ದಂಡೋರಾ ಮಾದಿಗ ರಿಸರ್ವೇಶನ್ ಹೋರಾಟ ಸಮಿತಿಯ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಸಂಘಟನೆಯ ಗ್ರಾಪಂ ಘಟಕದ ಅಧ್ಯಕ್ಷರಾಗಿ ಜಾಕೋಬ್, ಉಪಾಧ್ಯಕ್ಷರಾಗಿ ಹನುಮಂತು, ಕಾರ್ಯದರ್ಶಿಯಾಗಿ ಯೇಸಪ್ಪ, ಸಂಘಟನಾ ಕಾರ್ಯಕರ್ತರಾಗಿ ಕೆ .ನರಸಿಂಹಲು, ಜೇಮ್ಸ್, ಎಚ್. ಲಕ್ಷ್ಮಣ,ಈ.ನರಸಿಂಹಲು, ಉರುಕುಂದು, ವೈ.ನರಸಿಂಹಲು, ಕೆ.ರತ್ನಪ್ಪ, ಕೆ.ಬಸವರಾಜ್, ಸುಂದರರಾಜ್, ಮೋಸಸ್, ಮುತ್ತಪ್ಪ ಸೇರಿದಂತೆ ಇನ್ನಿತರರನ್ನು ನೇಮಿಸಲಾಗಿದೆ ಎಂದು ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಶ್ರೀನಿವಾಸ ಸಿಂಗನೋಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.