ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿ
ಕನ್ನಡಪ್ರಭ ವಾರ್ತೆ, ಸಿಂಧನೂರು, ಜು.1
ಪಾಲಕರು ತಮ್ಮ ಮಕ್ಕಳ ಮುಂದಿನ ಭವಿಷ್ಯ ಉತ್ತಮವಾಗಿರಲು ಮತ್ತು ದೇಶದ ಭವಿಷ್ಯವನ್ನು ಉಜ್ವಲಗೊಳಿಸಲು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಬೇಕೆಂದು ತಾಪಂ ಉಪಾಧ್ಯಕ್ಷ ನಾಗಪ್ಪ ಗೋಮರ್ಸಿ ಹೇಳಿದರು.
ನಗರದ ಜನತಾ ಕಾಲೋನಿಯಲ್ಲಿರುವ ವೆಂಕಟೇಶ್ವರ ಹಿ.ಪ್ರಾ.ಶಾಲೆಯಲ್ಲಿ ಏರ್ಪಡಿಸಿದ್ದ ಉಚಿತ ಪಠ್ಯ ಪುಸ್ತಕ, ನೋಟ್ಬುಕ್ ಮತ್ತು ಸಮವಸ್ತ್ರ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಇಂದಿನ ದಿನಮಾನಗಳಲ್ಲಿ ವಿದ್ಯಾರ್ಥಿಗಳ ಮನಸ್ಸಿಗೆ ದೃಶ್ಯ ಮಾಧ್ಯಮಗಳು ಕೆಟ್ಟ ಪರಿಣಾಮಗಳನ್ನು ಬೀರುತ್ತಿವೆ. ಮಕ್ಕಳಿಗೆ ಪಾಲಕರು ಒಂದನೇ ತರಗತಿಯಿಂದಲೇ ಗುಣಮಟ್ಟದ ಶಿಕ್ಷಣ ನೀಡಬೇಕು. ಪಾಲಕರೊಂದಿಗೆ ಶಿಕ್ಷಕರು ಒಳ್ಳೆಯ ನಡತೆಯಿಂದ ನಡೆದುಕೊಳ್ಳಬೇಕು. ವಿದ್ಯಾರ್ಥಿಗಳ ಪರಿಶುದ್ಧ ಮನಸ್ಸಿನಲ್ಲಿ ಒಳ್ಳೆಯ ಶಿಕ್ಷಣ ಕೊಟ್ಟು, ದೇಶಾಭಿಮಾನವನ್ನು ಬೆಳೆಸಬೇಕು ಎಂದರು.
ಉತ್ತಮ ಸಂಸ್ಕಾರ ಹೊಂದಲಿ: ಬಿಇಒ ಕಾರ್ಯಾಲಯದ ತಾಲೂಕಾ ದೈಹಿಕ ಶಿಕ್ಷಣಾಧಿಕಾರಿ ಎನ್.ಬಿ. ಕರಂಡಿ ಮಾತನಾಡಿ, ಪಾಲಕರು ತಮ್ಮ ಮಕ್ಕಳಲ್ಲಿ ಉತ್ತಮ ಸಂಸ್ಕಾರವನ್ನು ಹೊಂದುವಂತಾಗಲು, ಶಿಕ್ಷಕರ ಜೊತೆ ಕೈಜೋಡಿಸಬೇಕು.
ಕನಕನಗರ ಸಿಆರ್ಪಿ ವೀರೇಶ ಗೋನವಾರ, ಆರ್ಎಚ್ ಕಾಲೋನಿ-1ರ ಸಿಆರ್ಪಿ ಅಮರಯ್ಯ ಪತ್ರಿಮಠ, ಹೊಸಳ್ಳಿ (ಇ.ಜೆ) ಸಿಆರ್ಪಿ ರಾಮದಾಸ ಮಾತನಾಡಿದರು.
ಏಳು ಮೈಲ್ಕ್ಯಾಂಪ್ ಸಿಆರ್ಪಿ ಬಸವರಾಜ ಬಿರಾದಾರ, ವಾರ್ಡಿನ ನಗರಸಭೆ ಸದಸ್ಯ ಇಕ್ಬಾಲ್ ಸಾಬ್, ಮುಖ್ಯಗುರು ರಾಚನಗೌಡ ಮಾಲಿಪಾಟೀಲ್, ಶಾಲಾ ಆಡಳಿತ ಮಂಡಳಿಯ ಧರ್ಮಣ್ಣ ಚವ್ಹಾಣ, ಸಂಗಪ್ಪ ಜಾಧವ್, ವಾಸಪ್ಪ ರಾಠೋಡ್, ಹುಲುಗಪ್ಪ ವಡ್ಡರ, ಲಕಪತಿ ರಾಠೋಡ್, ರವಿ ರಾಠೋಡ್ ಸೇರಿದಂತೆ ಅನೇಕರು ವೇದಿಕೆಯ ಮೇಲಿದ್ದರು.
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ಅಬ್ದುಲ್ ಸತ್ತಾರ, ಎ.ಬಿ.ಗೌಡರ್, ಎಂ.ಎಂ.ಸುಣಗದ, ಡಿ.ಎಸ್. ಲಮಾಣಿ, ಪಿ.ಬಿ. ಲಮಾಣಿ, ತಳವಾರ, ಮುಖಂಡರಾದ ಮಹಿಬೂಬ್ ಸಾಬ್, ಚಂದ್ರಹಾಸ ರಾಠೋಡ್, ಪಾಲಕರಾದ ಪ್ಯಾರೀಮಾ, ಗಂಗಮ್ಮ, ಖಾದರಬಾಷ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.
ನೋಟ್ಬುಕ್ನ್ನು ಶಾಲಾ ವಿದ್ಯಾರ್ಥಿಗಳಿಗೆ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಮಲ್ಲಪ್ಪ ಬಾದರ್ಲಿ ಅವರು ದಾನವಾಗಿ ನೀಡಿದ ನೋಟ್ ಪುಸ್ತಕಗಳನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು.
ಸನ್ಮಾನ: ನೂತನವಾಗಿ ಆಯ್ಕೆಯಾದ ನಗರಸಭಾ ಸದಸ್ಯ ಎಂ.ಡಿ.ಇಕ್ಬಾಲ್ ಸಾಬ್ರಿಗೆ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕರಿಂದ ಸನ್ಮಾನ ಮಾಡಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

