ಮಳೆ ಅಭಾವ: ಬಿತ್ತನೆ ಕುಂಠಿತ, ತಾಪಮಾನ ಏರಿಕೆ
ರಾಯಚೂರು: ಜೂನ್ ಮತ್ತು ಜುಲೈ ತಿಂಗಳಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿರುವುದು ರೈತರಲ್ಲಿ ಆತಂಕ ಉಂಟು ಮಾಡಿದ್ದು, ಬಿತ್ತನೆ ಕುಂಠಿತಗೊಳಿಸಿದೆ.
ರಾಯಚೂರು ಕೃಷಿ ವಿವಿ ಯು ರಾಜ್ಯದ ಹವಾಮಾನ ಇಲಾಖೆಯನ್ನು ಆಧರಿಸಿ ನೀಡಿದ ವರದಿಯಲ್ಲಿ ಜೂನ್ ತಿಂಗಳಲ್ಲಿ ಸುರಿಯಬೇಕಿದ್ದ ಸರಾಸರಿ ಮಳೆ 105.1ಮಿಮೀ ಗೆ ಪ್ರತಿಯಾಗಿ ಜೂನ್ನಲ್ಲಿ ಜಿಲ್ಲೆಯ ವಿವಿಧೆಡೆ ಒಟ್ಟು 40 ಮಿಮೀ ಮಳೆಯಾಗಿದೆ. ಜುಲೈನಲ್ಲಿಯೂ ಮುಂದಿನ ಒಂದು ವಾರ ಸಮರ್ಪಕ ಮಳೆಯಾಗುವ ಮುನ್ಸೂಚನೆಯಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಳೆ ಅಭಾವದಿಂದ ಬಹುತೇಕ ರೈತರು ಇದುವರೆಗೆ ಬಿತ್ತನೆ ಕಾರ್ಯಕ್ಕೆ ಮುಂದಾಗಿಲ್ಲ. ಕಡಿಮೆ ಅವಧಿಯಲ್ಲಿ ಇಳುವರಿ ಕೊಡುವ ಬೆಳೆಗಳನ್ನು ರೈತರು ಬಿತ್ತನೆ ಮಾಡಬಹುದಾಗಿದೆ. ಮಳೆಯ ಅಭಾವದಿಂದಾಗಿ ತಾಪಮಾನದಲ್ಲಿ ಕೊಂಚ ಏರಿಕೆಯಾಗಿದ್ದು, 32 ಡಿಗ್ರಿಯಿಂದ 36 ಡಿಗ್ರಿವರೆಗೆ ತಾಪಮಾನ ಕಂಡುಬಂದಿದೆ ಎಂದು ಹವಾಮಾನ ಇಲಾಖೆಯ ಮಾಹಿತಿ ಆಧರಿಸಿ ಕೃಷಿ ವಿವಿ ತಿಳಿಸಿದೆ.
ಶಿಸ್ತು ಬದ್ಧ ಅಧ್ಯಯನದಿಂದ ಯಶಸ್ಸು ಸಾಧ್ಯ; ಉಗಿಬಂಡಿ ಸಲಹೆ
ದೇವದುರ್ಗ: ವಿದ್ಯಾರ್ಥಿ ಜೀವನದಲ್ಲಿ ಶಿಸ್ತು, ಸಂಯಮ, ಸಮಯ ಪ್ರಜ್ಞೆ ಅಳವಡಿಸಿಕೊಂಡು ಯಶಸ್ಸಿನ ಹಾದಿ ಸುಲಭವಾಗಿ ತಲುಪಬಹುದೆಂದು ತಾಲೂಕು ಸಮಾಜ ಕಲ್ಯಾಣಾಧಿಕಾರಿ ವೆಂಕಟೇಶ ಉಗಿಬಂಡಿ ಸಲಹೆ ನೀಡಿದರು. ಅವರು ಇತ್ತೀಚೆಗೆ ಇಲ್ಲಿನ ಶ್ರೀಬಸವೇಶ್ವರ ಡಿ.ಇಡಿ ಕಾಲೇಜು ಹಾಗೂ ತಾಲೂಕು ಸಮಾಜ ಕಲ್ಯಾಣ ಇಲಾಖೆಯಿಂದ ಏರ್ಪಡಿಸಿದ್ದ ಡಿ.ಇಡಿ ಪ್ರಥಮ ಹಾಗೂ ದ್ವಿತೀಯ ವರ್ಷದ ಪರಿಶಿಷ್ಟ ಜಾತಿ ವಿದ್ಯಾರ್ಥಿನಿಯರಿಗೆ ಬೋಧನಾ ಕಲಿಕಾ ಸಾಮಗ್ರಿಗಳ ವಿತರಣಾ ಸಮಾರಂಭ ಹಾಗೂ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ತಾಲೂಕು ಸಮಾಜ ಕಲ್ಯಾಣ ಇಲಾಖೆಯಿಂದ ಡಿ.ಇಡಿ ಕಾಲೇಜಿನ 14 ಜನ ವಿದ್ಯಾರ್ಥಿನಿಯರಿಗೆ ಬೋಧನಾ ಕಲಿಕಾ ಸಾಮಗ್ರಿ ಈ ವೇಳೆ ವಿತರಿಸಲಾಯಿತು. ಕಾಲೇಜಿನ ಹಿರಿಯ ಉಪನ್ಯಾಸಕ ಪ್ರಭಣ್ಣಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಬಸವರಾಜ ಬ್ಯಾಗವಾಟ್ ವಹಿಸಿದ್ದರು. ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ನಾಳೆ ತಿರುಪತಿ ಪಾದಯಾತ್ರೆ
ಸಿಂಧನೂರು: ನಗರದ ಉಪ್ಪಾರವಾಡಿಯ ವೆಂಕಟೇಶ್ವರ ದೇವಸ್ಥಾನ ಸಮಿತಿಯಿಂದ 11ನೇ ವರ್ಷದ ತಿರುಪತಿ-ತಿರುಮಲ ಪಾದಯಾತ್ರೆಗೆ ಜು.4ರಂದು ಬೆ.7 ಗಂಟೆಗೆ ಚಾಲನೆ ನೀಡಲಾಗುವುದು ಎಂದು ದೇವಸ್ಥಾನ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ. ಕಳೆದ 10 ವರ್ಷಗಳಿಂದ ನಿರಂತರವಾಗಿ ಪಾದಯಾತ್ರೆಯನ್ನು ನಡೆಸಲಾಗುತ್ತಿದ್ದು ವರ್ಷದಿಂದ ವರ್ಷಕ್ಕೆ ಪಾದಯಾತ್ರಿಗಳ ಸಂಖ್ಯೆ ಹೆಚ್ಚುತ್ತಿದ್ದು ಆಸಕ್ತಿಯುಳ್ಳ ಪಾದಯಾತ್ರಿಗಳು ಮೊ. 99162-70973 ಅಥವಾ 90085-45779ಕ್ಕೆ ಸಂಪರ್ಕಿಸಲು ದೇವಸ್ಥಾನ ಸಮಿತಿಯ ಪರವಾಗಿ ಉಮೇಶ ಗೋಮರ್ಸಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

