ರಾಯಚೂರು

ಗೋನವಾಟ್ಲ ಅನಾ(ಆ)ರೋಗ್ಯ ಕೇಂದ್ರ!

Published On :

ಕನ್ನಡಪ್ರಭ ವಾರ್ತೆ  ಲಿಂಗಸ್ಗೂರು  ಜು.5
ತಾಲೂಕಿನ ಈಚನಾಳ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗೋನವಾಟ್ಲ ಗ್ರಾಮದ ಉಪ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಸಹಾಯಕರಿಲ್ಲದೆ ಕೇಂದ್ರ ವ್ಯಾಪ್ತಿಯ ಜನತೆ ಚಿಕಿತ್ಸೆಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಗುಂತಗೋಳ ಗ್ರಾಪಂ ವ್ಯಾಪ್ತಿಯ ಗೋನವಾಟ್ಲ ಉಪ ಆರೋಗ್ಯ ಕಳದೆ ಸುಮಾರು ವರ್ಷಗಳ ಹಿಂದೆ ಯಲ್ಲಮ್ಮ ಎಂಬ ಆರೋಗ್ಯ ಸಹಾಯಕಿ ಸರಿಯಾಗಿ ಕಾರ್ಯ ನಿರ್ವಹಿಸದ ಪ್ರಯುಕ್ತ ದೂರು ಆಧರಿಸಿ ವರ್ಗಾವಣೆ ಮಾಡಲಾಯಿತು. ಅಂದಿನಿಂದ ಕೇಂದ್ರಕ್ಕೆ ಮೂರ್ನಾಲ್ಕು ತಿಂಗಳಿಗೊಮ್ಮೆ ಆಗೊಮ್ಮೆ ಈಗೊಮ್ಮೆ ಹಾಜರಾಗುತ್ತಾರೆ. ನಂತರ ಕೇಂದ್ರಕ್ಕೆ ಬೀಗ ಹಾಕಲಾಗುತ್ತದೆ. ಇದರಿಂದ ಕಿಟಕಿ, ಬಾಗಿಲುಗಳು ಮುರಿದು ಇಸ್ಪಿಟ್, ಮಧ್ಯ, ಸಿಗರೇಟ್ ಸೇವನೆ ಮಾಡುವ ಪುಂಡ ಪೋಕರಿಗಳ ತಾಣವಾಗಿ ಪರಿಣಮಿಸಿದೆ.
ಕೇಂದ್ರಕ್ಕೆ ಸರಿಯಾಗಿ ವೈದ್ಯರು ಹಾಗೂ ಸಹಾಯಕಿಯರು ಆಗಮಿಸದೆ ಸುತ್ತಮುತ್ತಲ ಹಳ್ಳಿ, ದೊಡ್ಡಿ, ತಾಂಡಾಗಳ ವೃದ್ಧರು, ಗರ್ಭಿಣಿಯರು ಸೇರಿದಂತೆ ಜನತೆ ಸಣ್ಣಪುಟ್ಟ ಕಾಯಿಲೆ ಬಂದರೂ ಲಿಂಗಸ್ಗೂರು ಪಟ್ಟಣಕ್ಕೆ ಚಿಕಿತ್ಸೆಗಾಗಿ ತೆರಳುವಂತಾಗಿದೆ. ಕೇಂದ್ರಕ್ಕೆ ಆರೋಗ್ಯ ಸಹಾಯಕಿಯರನ್ನು ನೇಮಿಸುವಂತೆ ಹಲವು ಬಾರಿ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಸಂಬಂಧಿಸಿದ ಮೇಲಾಧಿಕಾರಿಗಳು ಗಮನ ಹರಿಸಬೇಕೆಂದು ರಾಜ್ಯ ರೈತ ಸಂಘದ ಅಮರಣ್ಣ ಗುಡಿಹಾಳ, ಗೋನವಾಟ್ಲ ಗ್ರಾಮದ ಖಾನಸಾಬ, ಕಾಜಾಸಾಬ, ಗೋಪಾಲಪ್ಪ, ಸಂಗಪ್ಪ ಸೇರಿದಂತೆ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.