ಧರ್ಮ ಅರ್ಥೈಸಿಕೊಳ್ಳಲು ಧರ್ಮ ಪಾಲನೆ ಅಗತ್ಯ
ಕನ್ನಡಪ್ರಭ ವಾರ್ತೆ ರಾಯಚೂರು ಜು.6
ಧರ್ಮ ಅರ್ಥೈಸಿಕೊಳ್ಳಲು ಧರ್ಮದ ಪಾಲನೆ ಅಗತ್ಯ. ಕೇವಲ ಅಧ್ಯಯನದಿಂದ ಧರ್ಮದ ಅರ್ಥ ತಿಳಿಯಲಾಗದು. ಪ್ರತಿಯೊಬ್ಬ ವ್ಯಕ್ತಿ ತನ್ನ ಧರ್ಮ ಅನುಸರಿಸುವ ಮೂಲಕ ಅದರ ಮಹತ್ವ ಅರಿಯಬಹುದು ಎಂದು ಬಿಜಾಪುರ ಮಹಿಳಾ ವಿವಿಯ ಪ್ರಾಧ್ಯಾಪಕಿ ಮೀನಾಕ್ಷಿ ಖಂಡಿಮಠ ಹೇಳಿದರು.
ನಗರದ ಜಿಲ್ಲಾ ವೀರಶೈವ ಮಹಾಂತೇಶ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಆದಿ ರೇಣುಕಾಚಾರ್ಯರ ಜಯಂತ್ಯುತ್ಸವ ಮತ್ತು ನೂತನ ಶಾಸಕರ ಸನ್ಮಾನ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿ, ಕಳೆದ ಅನೇಕ ಶತಮಾನಗಳಿಂದ ವೇದೋಪನಿಷತ್, ಆಧ್ಯಾತ್ಮಿಕ ಗ್ರಂಥಗಳನ್ನು ಅಧ್ಯಯನ ಮಾಡಿದ್ದರೂ ಧರ್ಮ ಅನುಸರಿಸುವಲ್ಲಿ ನಿರ್ಲಕ್ಷ್ಯ ತಾಳುತ್ತಿದ್ದೇವೆಂದು ಹೇಳಿದರು.
ದೇಶದ ಆಧ್ಯಾತ್ಮ, ಸಂಸ್ಕೃತಿ, ವಿಜ್ಞಾನ ಕ್ಷೇತ್ರದಲ್ಲಿನ ಸಾಧನೆಗೆ ಇಡೀ ಜಗತ್ತು ಬೆರಗಾಗಿದೆ. ಆದರೆ ದೇಶದ ನಿವಾಸಿಗಳು ಬದುಕಿಗೆ ಮಿತಿ ಹಾಕಿಕೊಂಡು ದೇಶದ ಮಹತ್ವ ಸಂರಕ್ಷಣೆಯಲ್ಲಿ ಹಿನ್ನಡೆ ಅನುಭವಿಸಿದ್ದೇವೆ. ಧರ್ಮ, ಸತ್ಯ, ಆಚಾರ, ವಿಜ್ಞಾನದ ವೈಚಾರಿಕ ಸಂಗತಿ ಅರ್ಥೈಸಿಕೊಳ್ಳಲು ಪ್ರಯಾಸ ಪಡುತ್ತಿರುವುದಾಗಿ ಹೇಳಿದರು.
ಸನ್ಮಾನ: ಸಮಾರಂಭದಲ್ಲಿ ಶಾಸಕರಾದ ಎ. ವೆಂಕಟೇಶ ನಾಯಕ, ಡಾ. ಶಿವರಾಜ ಪಾಟೀಲ್, ಹಂಪನಗೌಡ ಬಾದರ್ಲಿ, ಪ್ರತಾಪಗೌಡ ಪಾಟೀಲ್, ಮಾನಪ್ಪ ವಜ್ಜಲ್, ಲಲಿತಮ್ಮ, ರಾಜ್ಯ ವೀರಶೈವ ವಿದ್ಯಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಬಿ.ಎಸ್. ಪರಮ ಶಿವಯ್ಯ, ಸಿಎಂಸಿ ಸದಸ್ಯ ಈರಪ್ಪಗೌಡ ಮಾಲಿಪಾಟೀಲ್, ಲಲಿತಾ. ಎಸ್, ಎಸ್‌ಎನ್‌ಎಲ್ ಎಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ಆರ್. ಬಸವರಾಜ ಅವರನ್ನು ಸನ್ಮಾನಿಸಲಾಯಿತು.
ಸಮಾರಂಭದ ಸಾನಿಧ್ಯವನ್ನು ಕಿಲ್ಲೇ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯರು, ಸೋಮವಾರಪೇಟೆ ಹಿರೇಮಠದ ಅಭಿನವ ರಾಚೋಟಿ ವೀರ ಶಿವಾಚಾರ್ಯರು ವಹಿಸಿದ್ದರು. ಅಧ್ಯಕ್ಷತೆ ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಗುಮಗೇರಿ ಮಹಾಂತಗೌಡ ವಹಿಸಿದ್ದರು. ಸಮಾಜದ ಪದಾಧಿಕಾರಿಗಳು, ಜನತೆ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

