ಉದ್ಯಮಿ ಮನೆಯಲ್ಲಿ ದರೋಡೆ; 25 ತೊಲೆ ಚಿನ್ನಾಭರಣ ಲೂಟಿ
ರಾಯಚೂರು: ನಗರದ ಸಾವಿತ್ರಿ ಕಾಲನಿಯಲ್ಲಿರುವ ಉದ್ಯಮಿಯೊಬ್ಬರ ಮನೆಗೆ ಭಾನುವಾರ ಬೆಳಗಿನ ಜಾವ ನುಗ್ಗಿದ ಆರು ಜನ ದರೋಡೆ ಕೋರರ ತಂಡವು ಮನೆಯಲ್ಲಿದ್ದವರನ್ನು ಬೆದರಿಸಿ 25 ತೊಲೆ ಚಿನ್ನಾಭರಣ ದೋಚಿದ್ದಾರೆ.
ನಗರದ ಅಕ್ಕಿ ಗಿರಣಿ ಮಾಲಿಕರಾದ ಸಾವಿತ್ರಿ ಪುರುಷೋತ್ತಮ್ ಅವರ ಮನೆಯ ಬಾಗಿಲಿನ ಕೊಂಡಿ ಮುರಿದು ಒಳಪ್ರವೇಶಿಸಿದ ದರೋಡೆಕೋರರು ಪುರುಷೋತ್ತಮ ಅವರು ಮಲಗಿದ್ದ ಕೊಠಡಿಗೆ ತೆರಳಿ ಅವರಿಗೆ ಮಾರಕಾಸ್ತ್ರ ಪ್ರದರ್ಶಿಸಿ ಬೆದರಿಸಿ ಅವರು ಮತ್ತು ಅವರ ಪತ್ನಿ ಧರಿಸಿದ್ದ ಒಟ್ಟು 6.50 ಲಕ್ಷ ಮೌಲ್ಯದ 25 ತೊಲೆ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದಾರೆಂದು ಕುಟುಂಬದವರು ತಿಳಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ಪೊಲೀಸ್ ಅಧಿಕಾರಿಗಳು, ಶ್ವಾನದಳ, ಬೆರಳಚ್ಚು ತಜ್ಞರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.
ದರೋಡೆಕೋರರು ತೆಲುಗು ಭಾಷೆಯಲ್ಲಿ ಮಾತನಾಡುತ್ತಿದ್ದು, ಚಿನ್ನಾಭರಣ ನೀಡದಿದ್ದರೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದರಿಂದ ಅನಿವಾರ್ಯವಾಗಿ ದರೋಡೆಕೋರರಿಗೆ ಆಭರಣ ಒಪ್ಪಿಸಬೇಕಾಯಿತೆಂದು ಉದ್ಯಮಿ ಪುರುಷೋತ್ತಮ್ ಅವರು 'ಕನ್ನಡಪ್ರಭ'ಕ್ಕೆ ತಿಳಿಸಿದರು. ಈ ಕುರಿತು ನಗರದ ನೇತಾಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

