ರಾಯಚೂರು

'ದೇಶದ ಪ್ರಗತಿಗೆ ಶಿಷ್ಟ ರಾಜಕಾರಣಿಗಳು ಅಗತ್ಯ'

Published On :

ರಾಯಚೂರು: ದೇಶದ ಪ್ರಗತಿಗೆ ಶಿಷ್ಟ ರಾಯಕಾರಣಿಗಳನ್ನು ರಾಜಕೀಯಕ್ಕೆ ಬರಮಾಡಿಕೊಳ್ಳುವುದು ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಯುವ ಭಾರತೀಯರು ಕಾರ್ಯನಿರ್ವಹಿಸಬೇಕೆಂದು ಪತಂಜಲಿ ಯೋಗ ಸಮಿತಿಯ ಕೇಂದ್ರ ಪ್ರಭಾರಿ ಡಾ. ಸುಮನ ಅಕ್ಕನವರು ಕರೆ ನೀಡಿದರು.
ನಗರದ ಮುಂದಡಾ ಭವನದಲ್ಲಿ ಪತಂಜಲಿ ಯೋಗ ಸಮಿತಿ ಮತ್ತು ಯುವ ಭಾರತ ಇವರ ಸಂಯುಕ್ತಾಶ್ರಯದಲ್ಲಿ ಜು.12ರಂದು ಜರುಗಿದ ವಿಭಾಗೀಯ ಯುವ ಭಾರತ್ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಸ್ವಾಮಿ ರಾಮದೇವ ಮಹಾರಾಜರು ಮತ್ತು ಬಾಲಕೃಷ್ಣ ಆಚಾರ್ಯಜೀ ಸ್ಥಾಪಿಸಿದ ಪತಂಜಲಿ ಯೋಗ ಸಮಿತಿ, ಭಾರತ್ ಸ್ವಾಭಿಮಾನ ಟ್ರಸ್ಟ್ ಹಾಗೂ ಅಡಿಯಲ್ಲಿ ಜರುಗುವ ಉನ್ನತ ಕಾರ್ಯ ಸಹಿಸದೆ ಅಪಪ್ರಚಾರ ಮಾಡಲಾಗುತ್ತಿದೆ.
ಪತಂಜಲಿ ಸಮಿತಿಗೆ ಬಂದ ಹಣದ ವಿವರ ಕುರಿತ ಅಂತರ್ಜಾಲ ಮಟ್ಟದಲ್ಲಿ ಸುಲಭವಾಗಿ ಜನ ಸಾಮಾನ್ಯರಿಗೆ ಆಯವ್ಯಯದ ಮಾಹಿತಿ ತಿಳಿಯಬಹುದಾಗಿದೆ. ಆದರೆ ಸರ್ಕಾರ ಭಾರತೀಯ ಜನ ಸಾಮಾನ್ಯರ ಹಣವನ್ನು ಕೊಳ್ಳೆ ಹೊಡೆಯುವ ಮೂಲಕ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಯುವ ಭಾರತೀಯರು ನವ ದೇಶ ನಿರ್ಮಾಣಕ್ಕೆ ನಿಷ್ಠಾವಂತ, ಆದರ್ಶ ಸಂಸದರನ್ನು ಸಂಘಟಿತರನ್ನಾಗಿ ಮಾಡಬೇಕಾಗಿದ್ದು, ಭ್ರಷ್ಟಾಚಾರ ರಹಿತ ಮತ್ತು ಕಪ್ಪು ಹಣ ನಮ್ಮ ದೇಶಕ್ಕೆ ಹಿಂಪಡೆಯುವ ಮತ್ತು ಅತ್ಯಾಚಾರದ ವಿರುದ್ಧ ಹೋರಾಡುವ ಸಂಸದರಿಗೆ ಅವಕಾಶ ಕಲ್ಪಿಸಬೇಕೆಂದು ಹೇಳಿದರು.
ಯೋಗ ಸಮಿತಿಯ ದಿವ್ಯಾಜ್ಞಾನಾನಂದ ಸ್ವಾಮೀಜಿ ಮಾತನಾಡಿ, ಪ್ರಸ್ತುತ ಸರ್ಕಾರ ಕಪ್ಪುಹಣದ ಕುರಿತು ಚಿಂತನೆ ಮಾಡದೆ ಭ್ರಷ್ಟಾಚಾರ ಎತ್ತಿ ಹಿಡಿದು ದ್ರೋಹವೆಸಗುತ್ತಿದೆ. ರಾಷ್ಟ್ರದ ವಿಕಾಸದತ್ತ ಗಮನ ಹರಿಸಲು ಯುವ ಭಾರತೀಯರು ಹಾಗೂ ಜನಸಾಮಾನ್ಯರು ಸಂಕಲ್ಪ ತೊಡಬೇಕು. ರಾಮದೇವ ಬಾಬಾರವರ ನಿಸ್ವಾರ್ಥ ಸೇವೆ ಹಾಗೂ ಭವ್ಯ ನವರಾಷ್ಟ್ರ ನಿರ್ಮಾಣಕ್ಕೆ ಶ್ರಮಿಸುತ್ತಿದ್ದು, ಜನತೆ ಇದನ್ನು ಅರಿತು ಅವರ ಆಚಾರ ವಿಚಾರ ಬೆಂಬಲಿಸಿ ಅವರ ಆಶಯದಂತೆ ನಡೆಯಬೇಕೆಂದು ಕರೆ ನೀಡಿದರು.
ಸಮ್ಮೇಳನದಲ್ಲಿ ಯೋಗ ಸಮಿತಿಯ ಉತ್ತರ ಕರ್ನಾಟಕ ಪ್ರಭಾರಿ ಭವರ ಲಾಲ್ ಆರ್ಯಜೀ, ಸಹ ರಾಜ್ಯ ಪ್ರಭಾರಿ ಜಿ.ವಿ.ಗೌಡ, ರಾಜ್ಯ ಮಹಿಳಾ ಪ್ರಭಾರಿ ಸುಜಾತಾ, ಯುವ ಪ್ರಭಾರಿ ಭಾಸ್ಕರ, ಜೆ.ಡಿ. ಪಟೇಲ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.