ಸ್ವಚಾರಿತ್ರ್ಯ ಅಭ್ಯರ್ಥಿ ಆಯ್ಕೆಗೆ ಲೋಕಸತ್ತಾ ಮನವಿ
ಕ.ಪ್ರ. ವಾರ್ತೆ, ರಾಯಚೂರು, ಜು.14
ರಾಜಕೀಯ ಅಪರಾಧಗಳಿಗೆ ಕಡಿವಾಣ ಹಾಕಲು ಎಲ್ಲ ಪಕ್ಷಗಳು ಸ್ವಚಾರಿತ್ರ್ಯ ಅಭ್ಯರ್ಥಿಗಳನ್ನು ಚುನಾವಣೆ ಕಣಕ್ಕೆ ಇಳಿಸುವಲ್ಲಿ ಇಚ್ಛಾಸಕ್ತಿ ತೋರಬೇಕೆಂದು ಲೋಕಸತ್ತಾ ಪಕ್ಷದ ಜಿಲ್ಲಾಧ್ಯಕ್ಷ ರಾಮಣ್ಣ ಆರ್.ಹೆಚ್.ಜೆ ಪತ್ರಿಕಾ ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.
ಬರುವ ಲೋಕಸಭಾ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳಿಗೆ ತಮ್ಮ ಪಕ್ಷದ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯಲ್ಲಿ ಕೊಂಚ ಮಟ್ಟಿಗಾದರೂ ಎಚ್ಚರ ವಹಿಸಲು ಸುಪ್ರಿಂ ಕೋರ್ಟ್ ಬುಧವಾರ ಬಿಸಿ ಮುಟ್ಟಿಸಿದೆ. ಜನತಾ ಪ್ರಾತಿನಿದ್ಯ ಕಾಯ್ದೆ 8(3)ರ ಪ್ರಕಾರ ಶಾಸಕ-ಸಂಸದರು ಜಾತಿ, ಧರ್ಮ, ಭಾಷೆ ಹೆಸರಿನಲ್ಲಿ ಸಾಮಾಜಿಕ ಸ್ವಸ್ಥ್ಯ ಕದಡುವುದು, ಲಂಚ, ಚುನಾವಣಾ ಅಕ್ರಮ, ಅತ್ಯಾಚಾರ, ವರದಕ್ಷಿಣೆ ಕಿರುಕುಳ, ಧಾರ್ಮಿಕ ಸ್ಥಳಗಳಲ್ಲಿ ಪ್ರಚೋದನಕಾರಿ ಭಾಷಣ, ಭ್ರಷ್ಟಾಚಾರ, ಭಯೋತ್ಪಾದನೆ ಮುಂತಾದ ಆರೋಪಗಳಿಗೆ ಗುರಿಯಾಗಿ ಆರೋಪ ಸಾಬೀತಾದಲ್ಲಿ ಶಿಕ್ಷ ಪೂರ್ಣಗೊಂಡ ದಿನದಿಂದ 6 ವರ್ಷಗಳವರೆಗೆ ಚುನಾವಣೆಗೆ ಸ್ಪರ್ಧಿಸುವಂತಿಲ್ಲವೆಂದು ಸ್ಪಷ್ಟಪಡಿಸಿತ್ತು.
ತೀರ್ಪು ಪ್ರಶ್ನಿಸಿ ಮತ್ತೊಂದು ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದರೆ ಆ ಪ್ರಕರಣ ಇತ್ಯರ್ಥವಾಗುವವರೆಗೆ ಶಾಸಕ- ಸಂಸದ ಸ್ಥಾನ ರದ್ಧು ಪಡಿಸುವಂತಿಲ್ಲವೆಂದು ಹೇಳುತ್ತದೆ.
ಈ ಇಬ್ಬಗೆ ನೀತಿ ಸಂವಿಧಾನದ ಆಶಯಗಳಿಗೆ ಧಕ್ಕೆ ಉಂಟಾಗುತ್ತದೆಂಬ ಆತಂಕದಿಂದ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡುವುದಕ್ಕಾಗಿ ಸ್ಥಾಪನೆಗೊಂಡ ಸ್ವಯಂ ಸೇವಾ ಸಂಸ್ಥೆ ಲೋಕ ಪ್ರಹಾರಿ 2005ರಲ್ಲಿ ಸುಪ್ರಿಂ ಕೋರ್ಟ್ನಲ್ಲಿ ದೆಹಲಿಯ ನ್ಯಾಯವಾದಿ ಲಿಲ್ಲೀ ಥಾಮಸ್ ಮೂಲಕ ಮಾಜಿ ಪ್ರಧಾನ ಚುನಾವಣಾ ಕಮಿಷನರ್ ಆರ್.ಕೆ. ತಿವಾರಿ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದು, 13 ವರ್ಷಗಳ ನಂತರ ಹೊರಬಿದ್ದ ಈ ತೀರ್ಪು ಆಶಾದಾಯಕವೆನ್ನಿಸಿದರೂ ರಾಜಕೀಯ ಅಪರಾಧಿಗಳಿಗೆ ಕಡಿವಾಣ ಹಾಕಲು ಎಲ್ಲ ಪಕ್ಷಗಳು ಸ್ವಚ್ಛಾರಿತ್ರ್ಯಯುಳ್ಳ ಅಭ್ಯರ್ಥಿಯನ್ನು ಚುನಾವಣಾ ಕಣಕ್ಕೆ ಇಳಿಸುವ ಮನಸ್ಸು ಮಾಡಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

