ಗೌಡೂರು ಎಸ್ಡಿಎಂಸಿ ಸದಸ್ಯರ ರಾಜಿನಾಮೆ
ಲಿಂಗಸ್ಗೂರು: ತಾಲೂಕಿನ ಗೌಡೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ಸುಧಾರಣಾ ಸಮಿತಿ ಸದಸ್ಯರು ತಮ್ಮ ರಾಜಿನಾಮೆ ಪತ್ರವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಅಮರಪ್ಪ ಭೋವಿ ಅವರಿಗೆ ಸೋಮವಾರ ಸಲ್ಲಿಸಿದರು.
ಗ್ರಾಮದ ಶಾಲೆಯ ಶಾಲಾ ಸುಧಾರಣಾ ಸಮಿತಿ ಸದಸ್ಯರಾದ ಶಿವರಾಜ ಬೆಣ್ಣಿ, ದುರುಗಪ್ಪ ಚಲುವಾದಿ, ಮೌಲಾಸಾಬ ದಳಪತಿ, ಮಲ್ಲೇಶ ಸಿಂದಗಿ, ತೀರ್ಥಯ್ಯಸ್ವಾಮಿ, ಶರಣಮ್ಮ ಪಾಣಿ ಇವರು ವೈಯಕ್ತಿಕ ಕಾರಣಗಳಿಂದ ಬಿಇಒ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದು, ಪತ್ರ ಅಂಗೀಕರಿಸಿ ಸಮಿತಿ ರದ್ದುಗೊಳಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಪಾಲಕರ ಮನವಿ: ಗೌಡೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಮಿತಿ ಗ್ರಾಪಂ ಸ್ವಾಧೀನದ ನಾಗರಿಕ ಸೇವಾ ಸೌಲಭ್ಯ ಸಮಿತಿ ವತಿಯಿಂದ ಶಾಲಾ ಸಮಿತಿ ರಚನೆ ಮಾಡಲಾಗಿತ್ತು. ಆದರೆ ಇದು ಪಾರದರ್ಶಕವಾಗಿಲ್ಲ ಮತ್ತು ಇದುವರೆಗೆ ಶಾಲೆ ಅಭಿವೃದ್ಧಿ ಆಗಿರುವುದಿಲ್ಲ. ಕೂಡಲೆ ಎಸ್ಡಿಎಂಸಿ ಸಮಿತಿ ರದ್ದುಗೊಳಿಸಬೇಕೆಂದು ಶಾಲೆಯ ವಿದ್ಯಾರ್ಥಿಗಳ ಪಾಲಕರು ಬಿಇಒ ಅವರಿಗೆ ಮನವಿ ಸಲ್ಲಿಸಿದರು.
ಎಸ್ಡಿಎಂಸಿ ಸದಸ್ಯರು ಹಾಗೂ ಗ್ರಾಮದ ಚಂದ್ರಶೇಖರಯ್ಯ ಗಣಾಚಾರಿ, ಸಿದ್ಧಯ್ಯಸ್ವಾಮಿ, ಮುನಿಯಪ್ಪ, ಆದಣ್ಣ ಸಾಹುಕಾರ, ಶಿವಪ್ಪ ಬೆಂಚಲ, ಸಿದ್ದೇಶ, ನಾಗಪ್ಪ ಸೇರಿದಂತೆ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

