ರಾಯಚೂರು

27ರಿಂದ ಇನ್ಸ್ಪೈರ್ ಅವಾರ್ಡ್ ಸ್ಪರ್ಧೆ

Published On :

ರಾಯಚೂರು: ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ 6ರಿಂದ 10ನೇ ತರಗತಿ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಿ ಔದ್ಯೋಗಿಕ ಕ್ಷೇತ್ರದಲ್ಲಿ ವಿಜ್ಞಾನವನ್ನು ಆಯ್ಕೆ ಮಾಡಿಕೊಳ್ಳುವಂತೆ ಪ್ರೇರೇಪಿಸಲು ಇನ್ಸ್ಪೈರ್ ಅವಾರ್ಡ್ ಕಾರ್ಯಕ್ರಮವನ್ನು ಜು.27ರಿಂದ ಮೂರು ಹಂತದಲ್ಲಿ ಜಿಲ್ಲೆಯ ವಿವಿಧೆಡೆ ಆಯೋಜಿಸಲಾಗಿದೆ. ಜಿಲ್ಲೆಯಲ್ಲಿ ಅವಾರ್ಡ್ ವಾರೆಂಟ್ಗಳನ್ನು ಪಡೆದ ವಿದ್ಯಾರ್ಥಿಗಳ ಜಿಲ್ಲಾ ಹಂತದ ಪ್ರದರ್ಶನವನ್ನು ಆಯೋಜಿಸಲಾಗುತ್ತಿದ್ದು, ಯರಮರಸ್ನ ಡಯಟ್ ಸಂಸ್ಥೆಯಲ್ಲಿ ಪ್ರದರ್ಶನ ನಡೆಯಲಿದೆ. ಜು.27 ಮತ್ತು 28 ರಂದು ಎಲ್ಲ ತಾಲೂಕುಗಳ ಪ್ರೌಢ ಶಾಲಾ ವಿದ್ಯಾರ್ಥಿಗಳು, ಜು.29 ಮತ್ತು 30ರಂದು ರಾಯಚೂರು ಮತ್ತು ಸಿಂಧನೂರು ತಾಲೂಕಿನ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು, ಜು.31 ಮತ್ತು ಆಗಸ್ಟ್ 1ರಂದು  ದೇವದುರ್ಗ, ಲಿಂಗಸ್ಗೂರು ಮತ್ತು ಮಾನವಿ ತಾಲೂಕುಗಳ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಸ್ಪರ್ಧೆಯಲ್ಲಿ ಅವಾರ್ಡ್ಗಳನ್ನು ಪಡೆದ ವಿದ್ಯಾರ್ಥಿಗಳು ಮತ್ತು ಮಾರ್ಗದರ್ಶಿ ಶಿಕ್ಷಕರು ಭಾಗವಹಿಸುವಂತೆ ಯರಮರಸ್ ಡಯಟ್ ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಪದಾಧಿಕಾರಿಗಳು
ರಾಯಚೂರು: ದಲಿತ ಸಂಘರ್ಷ ಸಮಿತಿ(ಸಮತಾವಾದ) ಸಂಘಟನೆಯ ರಾಯಚೂರು ನಗರ ಹಾಗೂ ಗ್ರಾಮೀಣ ಘಟಕಗಳಿಗೆ ಈಚೆಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಜಿಲ್ಲೆಯಲ್ಲಿ ಸಂಘಟನೆ ಬಲಪಡಿಸುವ ಉದ್ದೇಶದಿಂದ ಕರೆದಿದ್ದ ಜಿಲ್ಲಾ ಸಮಿತಿಯ ಸಭೆಯಲ್ಲಿ ನಗರ ಘಟಕಕ್ಕೆ ಗವಿಸಿದ್ದಪ್ಪ ಜಾಲ್ದಾರ್(ಗೌರವಾಧ್ಯಕ್ಷ), ಗೋಪಾಲಕೃಷ್ಣ ಜಗ್ಲಿ(ಅಧ್ಯಕ್ಷ), ತಿಮ್ಮಪ್ಪ, ಸತ್ಯರಾಜ(ಉಪಾಧ್ಯಕ್ಷರು), ವಾಸು (ಪ್ರಧಾನ ಸಂಘಟನಾ ಕಾರ್ಯದರ್ಶಿ), ಬಸವರಾಜ ಕುರುಬದೊಡ್ಡಿ (ಸಂಘಟನಾ ಕಾರ್ಯದರ್ಶಿ), ಮುತ್ತುರಾಜ್(ಖಜಾಂಚಿ), ಜ್ಞಾನೇಶ್ ಹೊಸೂರು, ರಾಜೇಶ್, ಆರ್.ಯಲ್ಲಪ್ಪ, ನರಸಿಂಹಲು(ಸದಸ್ಯರುಗಳು) ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ. ಅದೇ ರೀತಿ ಗ್ರಾಮೀಣ ಘಟಕಕ್ಕೆ ಘರ್ಜನ್(ಅಧ್ಯಕ್ಷ), ಗೋಪಾಲ(ಪ್ರಧಾನ ಸಂಘಟನಾ ಕಾರ್ಯದರ್ಶಿ) ನೇಮಕಗೊಡಿದ್ದಾರೆಂದು ತಿಳಿಸಿದ್ದು, ಈ ಕುರಿತು ಕರೆದಿದ್ದ ಸಭೆಯಲ್ಲಿ ಸಂಘಟನೆ ಪ್ರಮುಖರಾದ ಡ್ಯಾನಿಯಲ್ ಕೊಲಿಮಿ, ಚನ್ನಪ್ಪ, ವೆಂಕಟೇಶ್, ಭೀಮರೆಡ್ಡಿ, ಹಾಜಪ್ಪ ಇದ್ದರು.
ಪ್ರವೇಶ ಆರಂಭ
ರಾಯಚೂರು: ಪ್ರಸಕ್ತ ಸಾಲಿನ ಡಿಇಡಿ, ಡಿಪಿಇಡಿ ದಾಖಲಾತಿಗಾಗಿ ವಿಶೇಷಾಧಿಕಾರಿಗಳು ಅಭ್ಯರ್ಥಿಗಳ ಆಯ್ಕೆ ಪಟ್ಟಿ ಪ್ರಕಟಿಸಿದ್ದು ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದೆ. ಜು. 17ರಿಂದ 25ರವರೆಗೆ ಯರಮರಸ್ನ ಡಯಟ್ ಸಂಸ್ಥೆಯ ನೋಡಲ್ ಕೇಂದ್ರದಲ್ಲಿ ದಾಖಲಾತಿ ಪ್ರಕ್ರಿಯೆ ನಡೆಯಲಿದೆ. ಜೂನ್ ತಿಂಗಳಲ್ಲಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಪ್ರವೇಶ ಪಡೆಯಲು ಡಯಟ್ ಸಂಸ್ಥೆಯ ಪ್ರಾಚಾರ್ಯರನ್ನು ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.