ಪರಿಸರಕ್ಕೆ ಪೂರಕ ಗಿಡಗಳನ್ನು ಬೆಳೆಸಬೇಕು
ಕನ್ನಡಪ್ರಭ ವಾರ್ತೆ, ಶಹಾಪುರ, ಜು.21
ಪರಿಸರಕ್ಕೆ ಪೂರಕವಾಗಿ ಹೆಚ್ಚು ಗಿಡಗಳನ್ನ ಬೆಳೆಸಿ ಪರಿಸರ ಸಂರಕ್ಷಣೆ ಮಾಡಬೇಕಾಗಿದ್ದು ಪ್ರಸ್ತುತವಾಗಿ ಅಗತ್ಯವಾದ ಕರ್ತವ್ಯವಾಗಿದೆ ಎಂದು ಹಿರಿಯ ನ್ಯಾಯವಾದಿ ಭಾಸ್ಕರ ರಾವ್ ಮುಡಬೂಳ ಹೇಳಿದರು.
ಅರಣ್ಯ ಇಲಾಖೆ, ವ್ಯವಸಾಯ ಸೇವಾ ಸಹಕಾರ ಸಂಘ, ಗ್ರಾಪಂ ಖಾನಾಪುರ, ನಿಸರ್ಗ ವಿವಿಧೋದ್ದೇಶ ಸೇವಾ ಸಂಸ್ಥೆ ಇವುಗಳ ಆಶ್ರದಲ್ಲಿ ಖಾನಾಪುರದಲ್ಲಿ ಹಮ್ಮಿಕೊಂಡಿದ್ದ ಹಸಿರೀಕರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಕೆಂಡದಂತಹ ಬಿಸಿಲಿನಲ್ಲಿ ಕಾಲ ಕಳೆಯುವ ಸ್ಥಿತಿ ನಿರ್ಮಾಣವಾಗಿದೆ. ಮನುಷ್ಯ ಒಂದು ಇಂಚು ಜಾಗ ಬಿಡದಂತೆ ಮನೆ ಕಟ್ಟಿಕೊಂಡಿದ್ದಾನೆ. ಇದ್ದ ಮರಗಳನ್ನು ಕಡಿದು ಹಾಕುತ್ತಿದ್ದಾನೆ. ಬಹುತೇಕ ಮನೆಗಳ ಮುಂದೆ ಗಿಡ ಬಳ್ಳಿಗಳು ಕಾಣಿಸುತ್ತಿಲ್ಲ. ಮನುಷ್ಯ ಪರಿಸರಕ್ಕೆ ಅಪಚಾರ ಮಾಡುತ್ತಿದ್ದಾನೆ. ಅರಣ್ಯ ಪ್ರದೇಶದ ಸುಲಿಗೆ ಮಾಡುತ್ತಿದ್ದಾನೆ. ಪರಿಸರವು ಸಹ ತನ್ನ ಸಮತೋಲನ ಕಾಪಾಡಿಕೊಳ್ಳಲು ನಮ್ಮ ವಿರುದ್ಧ ಸಮರ ಸಾರಿದ್ದು, ಪರಿಸರ ರಕ್ಷಣೆಯತ್ತ ಎಲ್ಲರ ಕಾಳಜಿ ಅಗತ್ಯ ಎಂದರು.
ಒಳ್ಳೆ ಪರಿಸರ: ಉಪ ಅರಣ್ಯ ಸಂರಕ್ಷಣಾಧಿಕಾರಿ ಆರ್. ರಾಜಣ್ಣ, ಹಸಿರೀಕರಣ ಸೃಷ್ಟಿಸುವುದರಿಂದ ವಾತಾವರಣದಲ್ಲಿ 6 ಡಿಗ್ರಿ ಉಷ್ಣಾಂಶ ಕಡಿಮೆ ಮಾಡಬಹುದು. ಉತ್ತಮ ಆರೋಗ್ಯ, ಒಳ್ಳೆ ಪರಿಸರದಲ್ಲಿ ಸದೃಢರಾಗಿ ಜೀವಿಸಬಹುದು. ಹೆಚ್ಚಿನ ಶಾಲೆಗಳಿಗೆ ಕಂಪೌಂಡ್ ಇಲ್ಲ. ಕನಿಷ್ಟ ಕಾಂಪೌಂಡ್ ನಿರ್ಮಾಣ ಮಾಡಿ, ಅಲ್ಲಿ ಸಸಿಗಳನ್ನು ಬೆಳೆಸಬಹುದು. ಅವುಗಳಿಗೆ ಔಷಧಿ ಗಿಡಮೂಲಿಕೆಗಳು ಇಲ್ಲಿ ಬೆಳೆಸಬಹುದು. ಗಿಡಗಳನ್ನು ಬೆಳೆಸದಿದ್ದರೆ ನಮಗೆ ಉಸಿರಾಟ ಸೇರಿದಂತೆ ನಾನಾ ಕಾಯಿಲೆಗಳು ಬರುತ್ತವೆ. ಅದರಿಂದ ತಪ್ಪಿಸಿಕೊಳ್ಳಲು ಗಿಡ ಬೆಳೆಸುವುದೊಂದೇ ಪರಿಹಾರ ಎಂದು ತಿಳಿಸಿದರು.
ಕಾರ್ಯನಿರ್ವಹಣಾಧಿಕಾರಿ ನರಸಿಂಹರಾವ್ ಮುತಾಲಿಕ್, ಸುರಪುರ ವಲಯ ಅರಣ್ಯಧಿಕಾರಿ ಬಸವರಾಜ ಡಾಂಗೆ ಮಾತನಾಡಿದರು. ಗ್ರಾಪಂ ಅಧ್ಯಕ್ಷ ರಾಜಕುಮಾರ ಹೊಸ್ಮನಿ, ಅರಣ್ಯ ಉಪಸಂರಕ್ಷಣಾಧಿಕಾರಿ ದೌಲತ್ ಹುಸೇನ್, ಶಹಾಪುರ ವಲಯ ಅರಣ್ಯಾಧಿಕಾರಿ ಮಹ್ಮದ ಹಸನ್, ತಾಪಂ ಸದಸ್ಯೆ ಯಂಕಮ್ಮ ಚಂದ್ರಶೇಖರ, ಕೃಷ್ಣ ಸುಬೇದಾರ, ನಿಸರ್ಗ ವಿವಿಧೋದ್ದೇಶ ಸೇವಾ ಸಂಸ್ಥೆಯ ಮಲ್ಲಯ್ಯ ಪೋಲಂಪಲ್ಲಿ, ರಂಗಪ್ಪ ಆಲೂರ ಇದ್ದರು. ಎ.ವೈ. ಪದ್ಮಾಕರ ನಿರೂಪಿಸಿದರು. ಮೊನಪ್ಪ ಅನವಾರ ಸ್ವಾಗತಿಸಿ, ನಿಂಗಪ್ಪ ವಂದಿಸಿದರು.
--
ವಿದ್ಯುತ್ ಬೇಡಿಕೆ ಕುಸಿತ: 4 ಘಟಕ ಸ್ಥಗಿತ
ರಾಯಚೂರು: ರಾಜ್ಯಾದ್ಯಂತ ವ್ಯಾಪಕ ಮಳೆಯಾಗುತ್ತಿರುವುದರಿಂದ ವಿದ್ಯುತ್ ಬೇಡಿಕೆ ಕುಸಿತ, ವಾರ್ಷಿಕ ದುರಸ್ತಿ ಮತ್ತು ತಾಂತ್ರಿಕ ದೋಷ ಸೇರಿದಂತೆ ವಿವಿಧ ಕಾರಣಗಳಿಗೆ ಶಕ್ತಿನಗರದ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ ನಾಲ್ಕು ಘಟಕಗಳು ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಿವೆ. ರಾಜ್ಯದ ಬಹುತೇಕ ಕಡೆ ಭಾರೀ ಮಳೆಯಾಗುತ್ತಿದ್ದರಿಂದ ವಿದ್ಯುತ್‌ಗೆ ಬೇಡಿಕೆ ಕುಸಿತವಾಗಿದ್ದರಿಂದ 4ನೇ ಘಟಕದಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ. ವಿದ್ಯುತ್ ಕೇಂದ್ರದ 1ನೇ ಘಟಕವನ್ನು ವಾರ್ಷಿಕ ನಿರ್ವಹಣೆಗೆ ತೆಗೆದುಕೊಳ್ಳಲಾಗಿದೆ. ಇನ್ನುಳಿದಂತೆ 7 ಮತ್ತು 8ನೇ ಘಟಕಗಳು ತಾಂತ್ರಿಕ ದೋಷದಿಂದ ಈಗಾಗಲೇ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಿವೆ. ಸದ್ಯ ವಿದ್ಯುತ್ ಕೇಂದ್ರದಲ್ಲಿ 2, 3, 5 ಮತ್ತು 6ನೇ ಘಟಕಗಳಲ್ಲಿ ಮಾತ್ರ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಭಾನುವಾರ ಬೆಳಗ್ಗೆವರೆಗೆ ಕೇಂದ್ರದಿಂದ ಒಟ್ಟು 860 ಮೆಗಾವ್ಯಾಟ್ ವಿದ್ಯುತ್ ರಾಜ್ಯಕ್ಕೆ ರವಾನೆಯಾಗಿದೆ ಎಂದು ಆರ್‌ಟಿಪಿಎಸ್ ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

