ಲಿಂಗಸ್ಗೂರು ಕಾಂಗ್ರೆಸ್ ಅಧ್ಯಕ್ಷರಿಗೆ ಸನ್ಮಾನ
ಮುದಗಲ್: ಲಿಂಗಸ್ಗೂರು ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೂಪನಗೌಡ ಕರಡಕಲ್ ಅವರಿಗೆ ಮುದಗಲ್ನಲ್ಲಿ ಸನ್ಮಾನಿಸಲಾಯಿತು. ನೂತನ ಅಧ್ಯಕ್ಷರಾದ ಮೇಲೆ ಪಟ್ಟಣಕ್ಕೆ ಪ್ರಥಮ ಬಾರಿಗೆ ಆಗಮಿಸಿದ ಅವರನ್ನು ಮುದಗಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುನ್ವರ್ ಖಾನ್ ಸ್ವಾಗತಿಸಿದರು.
ಕುಷ್ಠಗಿ ಮಾಜಿ ಶಾಸಕ, ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪುರ ಸಮ್ಮುಖದಲ್ಲಿ ಪ.ಪಂ. ಸದಸ್ಯರಾದ ಮಾಸೂಮ ಷರೀಫ್, ಮಾಜಿ ಸದಸ್ಯ ಆಶೋಕಗೌಡ ಪಾಟೀಲ್, ಸದಸ್ಯರಾದ ಶಿವರಾಜ ತಳವಾರ, ಮುಖಂಡರಾದ ಡಾ. ಅಯ್ಯಪ್ಪ ಬನ್ನಿಗೋಳ, ರಾಮಣ್ಮ ಹಿರೇಮನಿ, ರಘುವೀರ, ರಾಘವೇಂದ್ರ ದೇಶಪಾಂಡೆ, ಅನಿಲಕುಮಾರ, ಡಾ. ಬಸವರಾಜ ಹೊರಪೇಟೆ, ಜಿ.ಪಂ. ಮಾಜಿ ಅಧ್ಯಕ್ಷ ಗುಂಡಪ್ಪ ನಾಯಕ, ಚನ್ನಾರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.
ದೂರು: ಪಟ್ಟಣದ ಚಾವಡಿಯಿಂದ ಹಳೇಪೆಟೆ ರಸ್ತೆ ಸೇರಿದಂತೆ ಅನೇಕ ರಸ್ತೆಗಳ ದುರಸ್ತಿಗೆ ನಗರೋತ್ತಾನ ಯೋಜನೆಯಡಿ 3 ಕೋಟಿ ಮಂಜೂರಾಗಿದ್ದು, ಟೆಂಡರ್ ಕರೆವಲ್ಲಿ ತಾಂತ್ರಿಕ ತೊಂದರೆಯಾಗಿದ್ದು, ವಿಳಂಬಕ್ಕೆ ಕಾರಣವಾಗಿದೆ. ಮೊದಲು ಜಿಲ್ಲಾವಾರು ಟೆಂಡರ್ ಕರೆಯಲಾಗಿತ್ತು. ಗುತ್ತೆದಾರರು ಟೆಂಡರ್ ಹಾಕದೆ ಇದ್ದುದರಿಂದ ಆಯಾ ಪಂಚಾಯಿತಿಗಳಲ್ಲೇ ಟೆಂಡರ್ ಕರೆವಂತೆ ನಿಯಮ ಬದಲಾಯಿಸಲಾಗಿದ್ದು, ಮುಖ್ಯಮಂತ್ರಿಗಳ ಅನುಮತಿಗೆ ಕಳಿಸಲಾಗಿದೆ. ಅದ್ದರಿಂದ ಮುಖ್ಯಮಂತ್ರಿಗಳನ್ನು ಒತ್ತಾಯಿಸುವಂತೆ ಮಾಜಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರವರಿಗೆ ಒತ್ತಾಯಿಸಿದರು.
ಪಟ್ಟಣಕ್ಕೆ ಪ್ರಸಕ್ತ ಸಾಲಿನಲ್ಲಿ ಅಭಿವೃದ್ಧಿಗೆ ರು. 2 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಕ್ರಿಯಾ ಯೋಜನೆ ಮಾಡುವ ಸಮಯದಲ್ಲಿ ಓಂದೆ ಕಾಮಗಾರಿಯನ್ನು ಮಾಡಲು ಕ್ರೀಯಾ ಯೋಜನೆ ಮಾಡಬೇಕು ಎಂದು ಮಾಜಿ ಶಾಸಕ ಅಮರೇಗೌಡ ಪಾಟೀಲ್ ಸದಸ್ಯರಿಗೆ ತಿಳಿಸಿದರು. ವಾರ್ಡಗಳಿಗೆ ಅನುದಾನ ಹಂಚಿಕೆ ಮಾಡುವುದು ಬೇಡ ಅವಶ್ಯವಿರುವ ಕುಡಿವ ನೀರು ಯೋಜನೆ ಮತ್ತು ರಸ್ತೆಗಳಿಗೆ ಮೀಸಲಿರಿಸಬೇಕು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

