ಸಂಘಕ್ಕೆ ಸ್ವಂತ ನಿವೇಶನ, ಕಟ್ಟಡವಿಲ್ಲ: ಕರಣಂ
ರಾಯಚೂರು: ಹಗಲಿರುಳು ದೇಶದ ಗಡಿ ಕಾಯುವವರಿಗೆ ತಮ್ಮೂರಿನಲ್ಲಿಯೇ ನಿವೇಶನ ಭಾಗ್ಯವಿಲ್ಲ ಎಂಬ ಕೊರಗು. ನಿವೃತ್ತಿಯ ನಂತರ ಒಗ್ಗೂಡಿ ಸ್ಥಾಪಿಸಿದ ಮಾಜಿ ಸೈನಿಕರ ಸಂಘಕ್ಕಿಲ್ಲಿ ಸ್ವಂತ ಕಟ್ಟಡವೂ ಇಲ್ಲ ಎಂಬ ನೋವು. ಸ್ವಾತಂತ್ರ್ಯೋತ್ಸವದಂದು ಈ ಸೈನಿಕರನ್ನು ಗೌರವಿಸುವುದನ್ನೂ ಜಿಲ್ಲಾಡಳಿತ ಮರೆತಿದೆ.
ಮಾಜಿ ಸೈನಿಕ ಸಂಕರ್ಷಣರಾವ್ ಕರಣಂ ಅವರ ಮನದಾಳದ ನೋವಿನ ನುಡಿಗಳಿವು.
ಕಾರ್ಗಿಲ್ ವಿಜಯ ದಿವಸ್ ಹಿನ್ನೆಲೆ 'ಕನ್ನಡಪ್ರಭ'ದೊಂದಿಗೆ ಮಾತನಾಡಿ ಹೇಳಿದ್ದಿಷ್ಟು-
ಜಿಲ್ಲೆಯಲ್ಲಿ ಸುಮಾರು 200ಕ್ಕೂ ಹೆಚ್ಚು ಮಾಜಿ ಸೈನಿಕರಿದ್ದಾರೆ. ಆದರೆ ಮಾಜಿ ಸೈನಿಕರ ಸಂಘಕ್ಕೆ ಸೇರಿದ್ದು ಸುಮಾರು 70 ಜನ. ಆದರೆ ಬಹುತೇಕರಿಗೆ ನಿವೇಶನಗಳ ಕೊರತೆಯಿದೆ. ಸರ್ಕಾರದಿಂದ ನಿವೇಶನ ಕೊಡಿಸಿ ಎಂದು ಸಂಘದಿಂದ ಮಾಡಿದ ಮನವಿಗಳು ಲೆಕ್ಕವಿಲ್ಲ. ನಿವೇಶನಕ್ಕಾಗಿ ಮಾಜಿ ಸೈನಿಕರು ಮನವಿ ಸಲ್ಲಿಸಿದರೂ ಜಿಲ್ಲಾಡಳಿತದಿಂದ ಸ್ಪಂದನೆ ಸಿಕ್ಕಿದ್ದು ಅಷ್ಟಕ್ಕಷ್ಟೇ. ಮಾಜಿ ಸೈನಿಕರು ಟ್ರಸ್ಟ್ ರಚಿಸಿದರೆ ನಿವೇಶನದ ಭರವಸೆ ಜಿಲ್ಲಾಡಳಿತ ನೀಡುತ್ತಿದೆ. ಆದರೆ ಟ್ರಸ್ಟ್ ರಚನೆ ಪ್ರಕ್ರಿಯೆ ನಮ್ಮಿಂದಾಗದು. ಹಾಗಾಗಿ ನಿವೇಶನದ ಆಸೆ ಕಮರಿದೆ. ಇನ್ನು ಮಾಜಿ ಸೈನಿಕರ ಸಂಘಕ್ಕೆ ಸ್ವಂತ ಕಟ್ಟಡವೂ ಇಲ್ಲ. 'ಕಟ್ಟಡ ಕೊಡಿ' ಎಂದು ಮಾಡಿದ ಮನವಿಗೆ ಬೆಲೆಯಿಲ್ಲ. ಪರಿಣಾಮ ಸದ್ಯ ನಗರಸಭೆಯ ವಾಣಿಜ್ಯ ಸಂಕೀರ್ಣದಲ್ಲಿಯೇ ಸಂಘದ ಕಚೇರಿಯಿದೆ. ಸೈನಿಕ ಕಲ್ಯಾಣಾಧಿಕಾರಿ ಕಚೇರಿ ಗುಲ್ಬರ್ಗದಲ್ಲಿದೆ. ರಾಯಚೂರಿನಲ್ಲಿ ತೆರೆಯಬೇಕೆಂಬ ಬೇಡಿಕೆ ಈಡೇರಿಲ್ಲ. ಕನಿಷ್ಠ ಮಿಲಿಟರಿ ಕ್ಯಾಂಟೀನ್ ಆರಂಭಿಸಿ ಎಂಬ ಬೇಡಿಕೆಗೆ ಮನ್ನಣೆ ದೊರೆತಿಲ್ಲ. ದೇಶದ ರಕ್ಷಣಾ ಇಲಾಖೆಯಿಂದ ಎಲ್ಲ ಸವಲತ್ತುಗಳೂ ದೊರೆಯುತ್ತಿವೆ. ಆದರೆ ರಾಜ್ಯ ಸರ್ಕಾರದಿಂದ ಗಮನವಿಲ್ಲ. ಗಡಿ ಕಾಯ್ದವರ ಬೇಡಿಕೆಗಳನ್ನು ಆಡಳಿತ ಕಡೆಗಣಿಸಿರುವುದು ನೋವು ತಂದಿದೆ ಎನ್ನುತ್ತಾರೆ ಅವರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

