ಇತಿಹಾಸದ ಅರಿವಿದ್ರೆ ಸದೃಢ ದೇಶ ನಿರ್ಮಾಣ ಸಾಧ್ಯ
ಸಿಂಧನೂರು: ಯುವ ಜನತೆಗೆ ಇತಿಹಾಸ ತಿಳಿಸದಿದ್ದರೆ ಸದೃಢ ದೇಶ ಕಟ್ಟಲು ಅಸಾಧ್ಯವೆಂದು ಎಸ್ಡಿಎಂಟಿ ಪಾಲಿಟೆಕ್ನಿಕ್ ಕಾಲೇಜಿನ ಆಡಳಿತಾಧಿಕಾರಿ ಶರಣು ಹಿರೇಮಠ ಅಭಿಪ್ರಾಯಪಟ್ಟರು.
ನಗರದ ಮೀನಾಕ್ಷಿ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ 14ನೇ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ದೇಶದ ಲೇನ್ ಲಡಾಕ್ ಪ್ರದೇಶಕ್ಕೆ ಪಾಕ್ ಸೈನಿಕರು ರಾತ್ರೋರಾತ್ರಿ ಅಕ್ರಮವಾಗಿ ಯುದ್ಧ ಬಂಕರ್ಗಳನ್ನು ನಿರ್ಮಾಣ ಮಾಡಿಕೊಂಡು ಯುದ್ಧಕ್ಕೆ ಬಂದರು.
ಎರಡು ಅಣ್ವಸ್ತ್ರ ಹೊಂದಿದ ದೇಶಗಳು ಯುದ್ಧಕ್ಕೆ ಸನ್ನದ್ಧವಾಗಿದ್ದು, ವಿಶ್ವದ ಗಮನ ಸೆಳೆದಿತ್ತು. ಅಂದಿನ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಹಾಗೂ ಪ್ರಧಾನಿ ವಾಜಪೇಯಿಯವರ ದಿಟ್ಟ ನಿರ್ಧಾರ, ನಮ್ಮ ಸೈನಿಕರ ವೀರಾವೇಶದ ಹೋರಾಟದಿಂದ ಪಾಕ್ ಸೈನ್ಯ ಧೂಳೀಪಟವಾಯಿತು. ಇದು ಪ್ರತಿಯೊಬ್ಬ ಭಾರತೀಯನ ಸ್ವಾಭಿಮಾನ, ಗೌರವದ ಪ್ರಶ್ನೆಯಾಗಿತ್ತು.
ಮೊದಲು ಪ್ರಾಣ ತೆತ್ತದ್ದು ರಶೀದ್: ಇಂತಹ ಸಂದರ್ಭದಲ್ಲಿ ಮೊದಲು ಯಾರು ಹೋಗಬೇಕು ಎನ್ನುವಂತಹ ಪ್ರಶ್ನೆ ಬಂದಾಗ ಮುಸ್ಲಿಂ ಜನಾಂಗಕ್ಕೆ ಸೇರಿದ ಪ್ರಾಣವನ್ನು ಲೆಕ್ಕಿಸದೇ ಮೇಜರ್ ರಶೀದ್ ಮುಂದೆ ಬಂದರು. ಕಾರ್ಗಿಲ್ ಯುದ್ಧದಲ್ಲಿ ಮೊದಲ ಪ್ರಾಣ ತ್ಯಾಗ ಮಾಡಿದ ರಶೀದ್ ಇಂದು ನಮ್ಮೆಲ್ಲರ ಮನದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ ಎಂದರು.
ವಿದ್ಯಾರ್ಥಿಗಳಿಗೆ ನಮ್ಮ ಸೈನಿಕರ ಸಾಧನೆಗಳ ಇತಿಹಾಸವನ್ನು ಹೇಳುವ ಮೂಲಕ ಅವರಲ್ಲಿ ಧೈರ್ಯ, ಸಾಹಸ ಮನೋಭಾವವನ್ನು ಬೆಳೆಸಬೇಕಿದೆ. ದೇಶ ಕಟ್ಟುವಂತಹ ವೀರ ಸೈನಿಕರನ್ನು ಸಿದ್ಧಪಡಿಸಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಲೆಯ ಆಡಳಿತಾಧಿಕಾರಿ ಚಂದ್ರಕಲಾ ಪ್ರಕಾಶ ಮಾತನಾಡಿ, ಕಾರ್ಗಿಲ್ ಯುದ್ಧ ನಡೆದ ಸಂದರ್ಭದಲ್ಲಿ ತಮ್ಮ ಸಹೋದರರು ಯುದ್ಧಕ್ಕೆ ಬೇಕಾಗುವ ಸಾಮಗ್ರಿಗಳ ಪೂರೈಕೆಯಲ್ಲಿದ್ದರು.
ಯಾವ ಸಂದರ್ಭದಲ್ಲಿ ಏನಾಗುತ್ತದೆ ಎಂದು ದಿನದ 24 ಗಂಟೆಯೂ ಟಿವಿ ಮುಂದೆ ಕುಳಿತಿರುತ್ತಿದ್ದೆವು ಎಂದು ತಮ್ಮ ಮನಸ್ಸಿನ ತಳಮಳದ ಕುರಿತು ಭಾವುಕರಾಗಿ ಹೇಳಿದರು.
ಈ ವೇಳೆ ಶಾಲೆಯ ಖಜಾಂಚಿ ಲಕ್ಷ್ಮೀದೇವಿ, ಶ್ಯಾಂ ಸುಂಸದ ಕೀರ್ತಿ, ಮುಖ್ಯಗುರು ರಂಜಿತಾ ರಾಜೇಶ ಹಾಗೂ ಝೀ ಕಿಡ್ಸ್, ವಿಕಿಡ್ಸ್, ಕೀರ್ತಿ ಪಬ್ಲಿಕ್ ಶಾಲಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

