ರಾಯಚೂರು

ಜನಸಂಖ್ಯೆ ನಿಯಂತ್ರಣ: ಸಹಕಾರ ಅಗತ್ಯ

Published On :

ಸಿಂಧನೂರು: ಜನಸಂಖ್ಯೆ ನಿಯಂತ್ರಣದ ದೃಷ್ಟಿಯಿಂದ ಸರ್ಕಾರ ಕೈಗೊಂಡಿರುವ ಯೋಜನೆಗಳು ಯಶಸ್ವಿಯಾಗಬೇಕಾದರೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಜವಳಗೇರಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ. ಭಾಗೀರಥಿ ಹಿರೇಮಠ ಅಭಿಪ್ರಾಯಪಟ್ಟರು. ತಾಲೂಕಿನ ಜವಳಗೇರಾ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ  ಕಾರ್ಯಕ್ರಮದಲ್ಲಿ ಮಾತನಾಡಿ, ಜನಸಂಖ್ಯೆ ಹೆಚ್ಚಾದಂತೆ ಭೂಮಿ, ಆಹಾರ, ನೀರು ಸೇರಿದಂತೆ ಹತ್ತು ಹಲವು ಅವಶ್ಯಕತೆಗಳು ಜನರಿಗೆ ದೊರೆಯುವಲ್ಲಿ ಇಳಿಮುಖವಾಗುತ್ತಾ ಸಾಗುತ್ತದೆ. ಹೆಚ್ಚಿನ ಜನಸಂಖ್ಯೆಗೆ ಸಮರ್ಪಕ ಆರೋಗ್ಯ ವ್ಯವಸ್ಥೆಯನ್ನು ಕಲ್ಪಿಸುವುದು ಸವಾಲಿನ ವಿಷಯ. ಅಭಿವೃದ್ಧಿಗೆ ಮಾರಕವಾಗಿರುವ ಜನಸಂಖ್ಯೆ ನಿಯಂತ್ರಣಕ್ಕೆ ಎಲ್ಲರೂ ಕೈಜೋಡಿಸುವಂತೆ ಮನವಿ ಮಾಡಿದರು.ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಸಯ್ಯ ಅವರು ಜನಸಂಖ್ಯೆ ಹೆಚ್ಚಿದಂತೆಲ್ಲಾ ಸಮಾಜದ ಮೇಲಾಗುವ ವ್ಯತಿರಿಕ್ತ ಪರಿಣಾಮಗಳು ಮತ್ತು ತಡೆಗಟ್ಟಲು ಕೈಗೊಳ್ಳಬೇಕಾದ ಮಾರ್ಗೋಪಾಯಗಳ ಕುರಿತು ಮಾಹಿತಿ ನೀಡಿದರು.ಶೈಲಾ, ಶಂಕ್ರಪ್ಪ ವೈ.ಮಲ್ಲಿಕಾರ್ಜುನ, ಸುದರ್ಶನ ಆರೋಗ್ಯ ಇಲಾಖೆ ಸಿಬ್ಬಂದಿ ರಾಧಾ ಕೊಂಡಿ, ಸೂಗುರಪ್ಪ, ವಿಜಯಬಾಯಿ, ಕವಿತಾ, ಶ್ರೀದೇವಿ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಪ್ರಭಾರಿ ಪ್ರಾಚಾರ್ಯ ಬಸಲಿಂಗಯ್ಯ ವಹಿಸಿ ಮಾತನಾಡಿದರು. ಉಪನ್ಯಾಸಕ ಡಾ. ನಾರಾಯಣ ನಿರೂಪಿಸಿದರು.
31ರಂದು ಪ್ರತಿಭಟನೆ
ರಾಯಚೂರು: ಬುದ್ಧಗಯಾದಲ್ಲಿ ನಡೆದ ಬಾಂಬ್ ದಾಳಿ ಖಂಡಿಸಿ ಮತ್ತು ಶೀಘ್ರ ತನಿಖೆಗೆ ಒತ್ತಾಯಿಸಿ ಜು.31ರಂದು ಬೆಂಗಳೂರಿನಲ್ಲಿ ಕರ್ನಾಟಕ ದಸಂಸ ಪ್ರತಿಭಟನೆ ನಡೆಸಲಿದೆ.  ಬೆಂಗಳೂರಿನ ಟೌನ್‌ಹಾಲ್‌ನಿಂದ ಫ್ರೀಡಂ ಪಾರ್ಕ್‌ವರೆಗೆ ಬೆಳಿಗ್ಗೆ 11.30ಕ್ಕೆ ಪ್ರತಿಭಟನಾ ಮೆರವಣಿಗೆ ಆಯೋಜಿಸಿದ್ದು, ಎಲ್ಲ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಸಂಘಟನೆ ಮನವಿ ಮಾಡಿದೆ.
ಶ್ರೀಗಳ ನಿಧನ: ಸಂತಾಪ
ದೇವದುರ್ಗ: ಮರಾಠಾ ಕ್ಷತ್ರಿಯ ಸಮಾಜದ ಗುರುಗಳಾದ ಸುರೇಶ ಭಾರತಿ ಸ್ವಾಮೀಜಿ ನಿಧನಕ್ಕೆ ತಾಲೂಕು ಮರಾಠಾ ಕ್ಷತ್ರಿಯ ಸಮಾಜದಿಂದ ಶನಿವಾರ ಸಂಜೆ ಸಂತಾಪ ವ್ಯಕ್ತಪಡಿಸಲಾಯಿತು.ಪಟ್ಟಣದಲ್ಲಿ ಕರೆದಿದ್ದ ಸಂತಾಪ ಸಭೆಯಲ್ಲಿ ಮಾತನಾಡಿದ ಪ್ರಮುಖರು, ಸಮಾಜದ ಉದ್ಧಾರಕ್ಕಾಗಿ ಗುರುಗಳು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಏಳ್ಗೆಗಾಗಿ ಶ್ರಮಿಸಿರುವುದನ್ನು ಸ್ಮರಿಸಲಾಯಿತು. ಸಂತಾಪ ಸಭೆಯಲ್ಲಿ ಸಮಾಜದ ಅಧ್ಯಕ್ಷ ಡಾ. ಬಸವರಾಜ ಸೂರ್ಯವಂಶಿ, ಜಿಲ್ಲಾ ಕೆಕೆಎಂಪಿ ಉಪಾಧ್ಯಕ್ಷ ಅಶೋಕ ದುಮ್ಮಾಳ್, ತಾಲೂಕು ಕೆಕೆಎಂಪಿ ಅಧ್ಯಕ್ಷ ಗೋಪಾಲರಾವ ಕಮದಾಳ, ಶಿಕ್ಷಕರಾದ ತುಳುಜಾರಾಮ್ ಜಾಧವ್, ಭೀಮೋಜಿರಾವ್ ಜಗತಾಪ್, ಮೌನೇಶ ಜಗತಾಪ್, ವೆಂಕಟೇಶ ಕಮದಾಳ್, ಸುಬ್ಬಾರಾವ್, ಯಲ್ಲೋಜಿ ಕಾಂಠೇರ್, ಸುದರ್ಶನ ಜಗತಾಪ್, ಡಿ. ರವಿಕುಮಾರ್ ಸೂರ್ಯವಂಶಿ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.